ಪಾವಗಡ: ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯಿರುವ ಪಾವಗಡದಲ್ಲಿ ಈಗಾಗಲೆ 2050 ಮೆ. ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು ನೂತನವಾಗಿ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ಎರಡು ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನಾ ಘಟನೆ ನಿರ್ಮಾಣ ಮಾಡುವ ಮೂಲಕ ಪ್ರಪಂಚದಲ್ಲೇ ಮೊದಲನೆ ಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂದು ಇಂಧನ ಸಚಿವಕೆ.ಜೆ.ಜಾರ್ಜ್ ತಿಳಿಸಿದರು.
ತಾಲೂಕಿನ ತಿರುಮಣಿ ಸೋಲಾರ್ ಪಾರ್ಕ್ ಗೆ ಉನ್ನತ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ರಾಜ್ಯ ಸರ್ಕಾರ ಅಭಿವೃದ್ಧಿ ದೃಷ್ಟಿಯಿಂದ ಬರದ ನಾಡು ಪಾವಗಡದಲ್ಲಿ ಮೊದಲ ಹಂತದಲ್ಲಿ 2050 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮೂಲಕ ದೇಶ ವಿದೇಶಿಗರ ಗಮನ ಸೆಳೆದಿತ್ತು, ಈ ಭಾಗದಲ್ಲಿ ನೂತನವಾಗಿ ಹತ್ತು ಸಾವಿರ ಎಕರೆ ಭೂಮಿ ರೈತರಿಂದ ಲೀಸಿಗೆ ಪಡೆದು 2000 ಮೆ. ವ್ಯಾ ಉತ್ಪಾದನಾ ನೂತನ ಘಟಕ ಪ್ರಾರಂಭಿ ಪ್ರಪಂಚದ ಗಮನ ಸೆಳೆಯುವಂತೆ ಮಾಡಲಾಗುದು ಎಂದರು.
ಇನ್ನೆರಡು ತಿಂಗಳಲ್ಲೇ ರೈತರಿಂದ ಭೂಮಿ ಲೀಸಿಗೆ ಪಡೆಯುವ ಪ್ರಕ್ರಿಯೆ ಪ್ರಾರಂಭವಾಗಲಿದೆ, ಎರಡೇ ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು, ರೈತರಿಗೆ ಉಪಯೋಗವಾಗುವಂತೆ ಎಲ್ಲಾ ಕ್ರಮಗಳನ್ನು ಅನುಸರಿಸಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದರು.
ನಾವೀಗ ಸೋಲಾರ್ ಮತ್ತು ವಿಂಡ್ ಪವರ್ ಉತ್ಪಾದನೆ ಮೂಲಕ ಹೈಬ್ರಿಡ್ ವಿದ್ಯುತ್ ಉತ್ಪಾದನೆಯತ್ತ ಸಾಗುತ್ತಿದ್ದೇವೆ, ರಾಜ್ಯದಲ್ಲಿ ಒಟ್ಟು 60 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿ ತಲುಪುವುದೇ ನಮ್ಮ ಧ್ಯೇಯ ಎಂದರು.
ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ, ಪ್ರಪಂಚದ ಅತಿದೊಡ್ಡ ಸೋಲಾರ್ ನಿರ್ಮಾಣದ ಕೀರ್ತಿ ಇರುವ ತಾಲೂಕಿನಲ್ಲಿರುವ ಯುವ ಜನತೆಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿ ನೀಡಿ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಹಾಗೂ ಡಿಪ್ಲೋಮಾ ಕಾಲೇಜು ಪ್ರಾರಂಭಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಈ ವೇಳೆ ಮಾಜಿ ಸಚಿವ ವೆಂಕಟರಮಣಪ್ಪ, ಕೆ ಆರ್ ಇ ಡಿ ಎಲ್ ಅಧ್ಯಕ್ಷ ರಾಜುಗೌಡ, ಐಎಎಸ್ ಅಧಿಕಾರಿ ಗೌರವ್ ಗುಪ್ತ, ಸೋಲಾರ್ಎಂಡಿ ಜಿ.ವಿ.ಬಲರಾಂ, ತಿರುಮಣಿ ಗ್ರಾಪಂ ಅಧ್ಯಕ್ಷ ಲೋಕೇಶ್, ಯುವ ಮುಖಂಡ ಬತ್ತಿನೇನಿ ನಾನಿ, ರಾಜೇಶ್, ರವಿ ಇತರರು ಇದ್ದರು.
Comments are closed.