ತುಮಕೂರು: ಇಲ್ಲಿನ ಅಗಳಕೋಟೆಯ ಶ್ರೀಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿಶ್ವ ವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಪುರುಷರ ನೆಟ್ ಬಾಲ್ ಚಾಂಪಿಯನ್ ಶಿಪ್- 2024 ಅಂತಿಮ ಹಣಾಹಣಿಯಲಿ ಹಿಂದಿನ ವರ್ಷದ ಚಾಂಪಿಯನ್ಸ್ ಬೆಂಗಳೂರು ವಿಶ್ವವಿದ್ಯಾಲಯ ಮಣಿಸಿದ ಮಂಗಳೂರು ವಿಶ್ವವಿದ್ಯಾಲಯ ಚಾಂಪಿಯನ್ಸ್ ಪಟ್ಟ ಧರಿಸಿತು.
ಅಂತಿಮ ದಿನದಾಟ ಲೀಗ್ ಹಂತದ ಅಂತಿಮ ಹಣಾಹಣಿಯು ಬಹಳ ಪೈಪೋಟಿಯಿಂದ ಕೂಡಿದ ಸ್ಪರ್ಧೆಯಾಗಿತ್ತು, 2024ರ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಮೊದಲೆರಡು ಸ್ಥಾನ ಪಡೆದ ಎರಡು ತಂಡಗಳ ಜೊತೆಗೆ ಪ್ರವೇಶಿಸಿದ್ದ ಮಹಾ ರಾಷ್ಟ್ರದ ಸಾವಿತ್ರಿಭಾಯಿ ಫುಲೆ ಪುಣೆ ವಿಶ್ವವಿದ್ಯಾಲಯ ಕೊನೆಯ ಪಂದ್ಯದಲ್ಲಿ ತನ್ನ ಎದುರಾಳಿ ತಂಡ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ತಂಡವನ್ನು ಮಣಿಸುವುದರ ಮೂಲಕ ಮೂರನೇ ಸ್ಥಾನ ಅಲಂಕರಿಸಿತು, ವಿಶ್ವೇಶ್ವರಯ್ಯತಾಂತ್ರಿಕ ವಿಶ್ವ ವಿದ್ಯಾಲಯ ತಂಡವು ನಾಲ್ಕನೇ ಸ್ಥಾನ ಪಡೆಯಿತು.
ಭಾರತದಾದ್ಯಂತ 61 ವಿಶ್ವ ವಿದ್ಯಾಲಯಗಳ ತಂಡಗಳನ್ನೊಳಗೊಂಡ ಒಟ್ಟು 73 ಪಂದ್ಯಗಳ ಪಂದ್ಯಾವಳಿಯು ಇದೇ 12 ರಂದು ಆರಂಭವಾಗಿ 15 ರಂದು ಭೋಜನ ವಿರಾಮಕ್ಕೆ ಮುನ್ನ ಯಶಸ್ವಿಯಾಗಿ ಕೊನೆಗೊಂಡಿತು, ಪಂದ್ಯಾವಳಿಯ ಮೊದಲ 67 ಪಂದ್ಯಗಳು ನಾಕ್ ಔಟ್ ಪಂದ್ಯಗ ಳಾಗಿದ್ದು, ನಂತರ ಉಳಿದ ಅಂತಿಮ 4 ತಂಡಗಳಿಗೆ ಲೀಗ್ ಪ್ರಕಾರ ಅಳವಡಿಸಿಕೊಂಡು ನಡೆಸಿದ್ದು ಅಂತಿಮ ಹಂತದ ಸೂಪರ್ ಲೀಗ್ನಲ್ಲಿ ನಡೆದ 67 ರಿಂದ 73 ಲೀಗ್ ಪಂದ್ಯಗಳ ಎಲ್ಲಾ 6 ಪಂದ್ಯ ಪೈಪೂಟಿಯಿಂದ ಕೂಡಿತ್ತು.
ಅಂತಿಮ ದಿನದ ಹಣಾಹಣಿ ಎಲ್ಲರನ್ನು ಮೂಕ ವಿಸ್ಮಿತರನ್ನಾಗಿಸುವ ಹಾಗೆ ನಡೆಯಿತು, ಹಲವು ಅಚ್ಚರಿ ಮೂಡಿಸುತ್ತಾ ವೈವಿಧ್ಯಮಯ ಚಾಕಚಕ್ಯತೆಯಿಂದ ಗೆಲುವಿನ ಓಟದಲ್ಲಿ ತಂಡಗಳ ಭಾಗವಹಿಸುವಿಕೆಯ ಲವಲವಕೆಯಿಂದ ಕೂಡಿದ ಸಾಹೇ ಕ್ರೀಡಾಂಗಣವು ಗೆದ್ದ ಚಾಂಪಿಯನ್ಸ್ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅಂತ್ಯಗೊಂಡಿತು.
Comments are closed.