ಮೂಡಲ ಪಾಯ ಯಕ್ಷಗಾನಕ್ಕೆ ಮಹಾ ಅನ್ಯಾಯ: ಪ್ರೊ ಯಣ್ಣೆಕಟ್ಟೆ

26

Get real time updates directly on you device, subscribe now.


ತುಮಕೂರು: ಕರ್ನಾಟಕ ಸರ್ಕಾರ ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ, ಇದರ ಭಾಗವಾಗಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಎಲ್ಲಾ ಹತ್ತು ಸದಸ್ಯರನ್ನು ದಕ್ಷಿಣ ಕನ್ನಡ ಜಿಲ್ಲೆಯವರನ್ನು ನೇಮಿಸುವ ಮೂಲಕ ಅಖಂಡ ಕರ್ನಾಟಕದ ಯಕ್ಷಗಾನ ಕಲೆಯನ್ನು ಒಂದು ಜಿಲ್ಲೆಯ ಕಲೆಯನ್ನಾಗಿ ಸರ್ಕಾರವೇ ಗುರುತಿಸುವ ಮೂಲಕ ಮಧ್ಯ ಕರ್ನಾಟಕದ ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಬೆಂಗಳೂರು ಮೊದಲಾದ ಹನ್ನೊಂದು ಜಿಲ್ಲೆಗಳಲ್ಲಿ ಇಂದಿಗು ನೆಲ ಮೂಲ ಕಲೆಯಾಗಿರುವ ಮೂಡಲ ಪಾಯ ಯಕ್ಷಗಾನಕ್ಕೆ ಪ್ರಾತಿನಿಧ್ಯವೇ ಇಲ್ಲದಂತೆ ಮಹಾ ಅನ್ಯಾಯ ಮಾಡಿದೆ ಎಂದು ಹಿರಿಯ ಯಕ್ಷಗಾನ ತಜ್ಞ, ಸಂಶೋಧಕ ಪ್ರೊ.ಚಿಕ್ಕಣ ಯಣ್ಣೆಕಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸರ್ಕಾರದ ಈ ನಡೆಯನ್ನು ಖಂಡಿಸಿದ್ದಾರೆ, ಮೂಡಲ ಪಾಯ ಯಕ್ಷಗಾನದ ನೂರು ಜನ ಭಾಗವತರು, ಅಸಂಖ್ಯಾತ ಕಲಾವಿದರಿದ್ದಾರೆ, ಯಕ್ಷಗಾನ ಸಂಘಟಕರೂ ಇದ್ದಾರೆ, ಯಕ್ಷಗಾನ ಅಕಾಡೆಮಿ, ಇವರುಗಳ ಅಧ್ಯಯನ, ಸಂಶೋಧನೆಗೆ ಅಕಾಡೆಮಿ ಪ್ರಶಸ್ತಿ ನೀಡಿರುವುದು ತಪ್ಪಾಗಿದೆಯೆ ಎಂದಿರುವ ಡಾ.ಯಣ್ಣೆಕಟ್ಟೆ , ನಾಟಕ ಆಕಾಡೆಮಿಗೆ ಪೂರಕವಾಗಿ ರಂಗ ಸಮಾಜ ರಚಿಸುವಂತೆ, ಮೂಡಲ ಪಾಯ ಯಕ್ಷಗಾಗ ಅಕಾಡೆಮಿಯ ರಚನೆಗೂ ತ್ವರಿತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!