ಕೊರಟಗೆರೆಗೆ ಸಿ ಐ ಎಸ್ ಎಫ್ ಮಿಲಿಟರಿ ಪಡೆ ಆಗಮನ

24

Get real time updates directly on you device, subscribe now.


ಕೊರಟಗೆರೆ: ಲೋಕಾಸಭಾ ಚುನಾವಣಾ ಹಿನ್ನೆಲೆ ಭಾರತೀಯ ಚುನಾವಣಾ ಆಯೋಗವು ಚುನಾವಣಾ ದಿನಾಂಕ ಘೋಷಿಸಿದ ಬೆನ್ನಲ್ಲೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಚೆಕ್ ಪೋಸ್ಟ್ ನ್ನು ಇದ್ದು ಹೆಚ್ಚಿನ ಬಿಗಿ ಬಂದೋಬಸ್ತ್ ಗಾಗಿ ಸಿ ಐ ಎಸ್ ಎಫ್ ಮಿಲಿಟರಿ ಪಡೆ ಸೋಮವಾರ ಕೊರಟಗೆರೆ ಆಗಮಿಸಿತು.

ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಉಲ್ಲಂಘನೆಯಾಗದಂತೆ ಭದ್ರತೆ ನೀಡಲು ಸಿ ಐ ಎಸ್ ಎಫ್ ಮಿಲಿಟರಿ ಪಡೆ ಆಗಮಿಸಿದ ವೇಳೆ ಪೋಲಿಸ್ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದು ಮೊದಲಿಗೆ ಕೊರಟಗೆರೆ ಪಟ್ಟಣದ ತಾಲೂಕು ಕಚೇರಿಯಿಂದ ಆರಂಭಗೊಂಡು ಪ್ರಮುಖ ರಸ್ತೆಗಳಲ್ಲಿ ಅರಕ್ಷಕ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಿಲಿಟರಿ ಪಡೆಯು ಸಂಚರಿಸಿತು.
ತಾಲೂಕಿನ ಹಲವು ಕಡೆ ಸಂಚಾರ

ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಬೆನ್ನಲೆ ಕ್ಷೇತ್ರದಲ್ಲಿ ಚೆಕ್ ಪೋಸ್ಟ್ ಬಿಗಿ ಬಂದೋಬಸ್ತ್ಗಾಗಿ ಮಿಲಿಟರಿ ಪಡೆಯು ಆಗಮಿಸಿದ್ದು ಮೊದಲ ದಿನವೇ ಕೊರಟಗೆರೆ ಪಟ್ಟಣ ಮತ್ತು ಹೊಳವನ ಹಳ್ಳಿ, ಅಕ್ಕಿರಾಂಪುರ, ಕೋಳಾಲದ ಪ್ರಮುಖ ರಸ್ತೆಗಳಲ್ಲಿ ಮಿಲಿಟರಿ ಹಾಗೂ ಪೋಲಿಸ್ ಪಡೆ ಸಂಚರಿಸಿತು.
4 ಚೆಕ್ ಪೋಸ್ಟ್: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಗಡಿಭಾಗದ 4 ಕಡೆ ಚೆಕ್ ಪೋಸ್ಟ್ ಇದ್ದು ಬಿಗಿಬಂದೋಬಸ್ತ್ ಗೆ ಸಿ ಐ ಎಸ್ ಎಫ್ ಮಿಲಿಟರಿ ಪಡೆ ಆಗಮಿಸಿದ್ದು ಚೆಕ್ ಪೋಸ್ಟ್ ಈಗಾಗಲೇ ಕಾರ್ಯಾಚರಣೆ ಶುರು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಿಪಿಐ ಅನಿಲ್ ಮತ್ತು ಪಿ ಎಸ್ ಐ ಮಂಜುನಾಥ್ ಸೇರಿದಂತೆ ಪೋಲಿಸ್ ಸಿಬ್ಬಂದಿ, ಸಿಐಎಸ್ಎಫ್ ಮಿಲಿಟರಿ ಪಡೆಯ ಸೈನಿಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!