ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ

263

Get real time updates directly on you device, subscribe now.

ಹುಳಿಯಾರು: ಪತ್ರಿಕೆಯ ವರದಿಯ ಫಲಶೃತಿಯ ಪರಿಣಾಮವಾಗಿ ಹುಳಿಯಾರು ಹೋಬಳಿ ಹೊಯ್ಸಲಕಟ್ಟೆ ಗ್ರಾಮ ಪಂಚಾಯ್ತಿಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತ್ತಾಗಿದೆ. ಪತ್ರಿಕೆಯ ವರದಿಯಿಂದ ಎಚ್ಚೆತ್ತ ತಾಪಂ ಪ್ರಕಾರ ಇಓ ಹನುಮಂತರಾಜು ಖುದ್ದು ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದಾರೆ.
ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆ ಗ್ರಾಪಂ ವ್ಯಾಪ್ತಿಯ ಕಲ್ಲೇನಹಳ್ಳಿ, ನುಲೇನೂರು, ಬೆಂಚಿಹಟ್ಟಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಾರಕಕ್ಕೋಗಿತ್ತು, ಈ ಗ್ರಾಮಗಳಿಗೆ ನೀರು ಪೂರೈಸುತ್ತಿದ್ದ ಕೊಳವೆಬಾವಿಗಳಲ್ಲಿ ಅಂತರ್ಜಲ ಬತ್ತಿ ಹನಿ ನೀರಿಗೂ ಹಾಹಾಕಾರ ಸೃಷ್ಟಿಯಾಗಿತ್ತು. ಪಂಚಾಯ್ತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೂ ಹಣದ ಕೊರತೆಯಿಂದ ವಾರಕ್ಕೊಮ್ಮೆ ಮಾತ್ರ ಪೂರೈಕೆಯಾಗುತ್ತಿತ್ತು.
ಟ್ರ್ಯಾಂಕರ್ ಮೂಲಕ ನೀರು ಸರಬರಾಜು ಸ್ಥಗಿತವಾದರೆ ಅಕ್ಕಪಕ್ಕದ ಜಮೀನುಗಳ ಮಾಲೀಕರಿಂದ ಕಾಡಿಬೇಡಿ ನೀರು ತರುವ ಅನಿವಾರ್ಯ ಕರ್ಮ ಇಲ್ಲಿನ ನಿವಾಸಿಗಳದಾಗಿತ್ತು. ಈ ಗ್ರಾಮಗಳ ನಿವಾಸಿಗಳು ರೈತರು ಮತ್ತು ಕೂಲಿ ಕಾರ್ಮಿಕರಾಗಿದ್ದು ಹಗಲಿನ ವೇಳೆ ನೀರು ತರಲೋದರೆ ಕೂಲಿ ಇಲ್ಲ, ಕೂಲಿಗೋದರೆ ನೀರಿಲ್ಲ ಎನ್ನುವ ಪರಿಸ್ಥಿತಿ ಎದುರಿಸುತ್ತಿದ್ದರು. ಅಲ್ಲದೆ ಈ ಹಳ್ಳಿಗಳಲ್ಲಿ ಕೋಳಿ, ಕುರಿ, ಮೇಕೆ, ಹಸು, ನಾಯಿಗಳಿದ್ದು ಇವೆಲ್ಲಕ್ಕೂ ನೀರು ಪೂರೈಸುವುದು ಸವಾಲಾಗಿ ಪರಿಣಮಿಸಿತ್ತು.
ಈ ಬಗ್ಗೆ ಪತ್ರಿಕೆ ವಿಸ್ಕೃತವಾದ ವರದಿ ಪ್ರಕಟಿಸಿತ್ತು. ವರದಿಗೆ ತಾಪಂ ಪ್ರಭಾರ ಇಓ ಹನುಮಂತರಾಜು ಸ್ಪಂದಿಸಿ ಖುದ್ದು ಸಮಸ್ಯೆಗಳಿರುವ ಹಳ್ಳಿಗಳಿಗೆ ಭೂವಿಜ್ಞಾನಿಗಳೊಂದಿಗೆ ತೆರಳಿದರು. ಹೊಸ ಕೊಳವೆಬಾವಿ ಕೊರೆಯಲು 3 ಹಳ್ಳಿಗಳಲ್ಲೂ ಬೋರ್ವೆಲ್ ಪಾಯಿಂಟ್ ಮಾಡಿಸಿ ಕೊಳವೆಬಾವಿ ಕೊರೆಯಲು ತಿಳಿಸಿದರು. ಹೊಸ ಕೊಳವೆಬಾವಿಯಲ್ಲಿ ನೀರು ಲಭ್ಯಯವಾಗುವವರೆವಿಗೂ ಟ್ಯಾಂಕರ್ ಮೂಲಕ ನಿತ್ಯ ನೀರು ಪೂರೈಸಲು ಸೂಚಿಸಿದರು.

Get real time updates directly on you device, subscribe now.

Comments are closed.

error: Content is protected !!