ಗುಬ್ಬಿ: ಪಟ್ಟಣದ ಗೋಸಲ ಚನ್ನಬಸವೇಶ್ವರರ ಮಹಾ ರಥೋತ್ಸವ ಬಿರು ಬಿಸಿಲಿನ ನಡುವೆಯೂ ಸಾವಿರಾರು ಭಕ್ತರು ಆಗಮಿಸಿ ಬಾಳೆಹಣ್ಣು ಧವನ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು.
ಮಂಗಳವಾರ ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಾಗೂ ಜಿಲ್ಲೆಯ ಹಲವು ಶ್ರೀಗಳ ನೇತೃತ್ವದಲ್ಲಿ ರಥ ಎಳೆಯುವ ಮೂಲಕ ರಥೋತ್ಸವ ಸಂಪನ್ನವಾಯಿತು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಹಾ ದಾಸೋಹ ಏರ್ಪಡಿಸಿದ್ದು ಪಾಯಸ, ಬೂಂದಿ, ಅನ್ನ ಸಾಂಬಾರ್, ಮಜ್ಜಿಗೆ ಸೇರಿದಂತೆ ವಿವಿಧ ಭೋಜನವನ್ನು ಭಕ್ತರಿಗೆ ವಿತರಣೆ ಮಾಡಲಾಯಿತು.
ನಾಡಿನ ಹಲವು ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಗೋಸಲ ಚನ್ನಬಸವೇಶ್ವರರಿಗೆ ಸುಮಾರು 11 ರೀತಿಯ ವಿವಿಧ ರೀತಿಯ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ದೇವಾಲಯದ ಆವರಣದಲ್ಲಿ ತಳಿರು ತೋರಣಗಳಿಂದ ಹಲವು ರೀತಿಯ ಪುಷ್ಪಗಳಿಂದ ವಿಶೇ ಅಲಂಕಾರ ನೆರವೇರಿಸಲಾಗಿತ್ತು.
ಹಲವು ಸಂಘ ಸಂಸ್ಥೆಗಳು ಪಾನಕ, ಫಲಹಾರ, ವಿತರಣೆ ಮಾಡುವ ಮೂಲಕ ತಮ್ಮ ಸೇವೆ ಮತ್ತು ಸಹಕಾರ ನೀಡಿದರು.
ಜಾತ್ರಾ ಮಹೋತ್ಸವಕ್ಕೆ ದೊಡ್ಡಮನಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿ, ಗೊಲ್ಲಹಳ್ಳಿಯ ವಿಭವ ವಿದ್ಯಾಶಂಕರ ಸ್ವಾಮೀಜಿ ಸೇರಿದಂತೆ ಹಲವು ಶ್ರೀಗಳು ಭಾಗಿಯಾಗಿದ್ದರು, ಶಾಸಕ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ತಾಲೂಕಿನ ಜನಪ್ರತಿನಿಧಿಗಳು, 18 ಕೋಮಿನ ಮುಖಂಡರು ಭಾಗವಹಿಸುವ ಮೂಲಕ ಜಾತ್ರಾ ಮಹೋತ್ಸವ ಯಶಸ್ವಿಯಾಯಿತು.
Comments are closed.