ಕುಣಿಗಲ್: ನಮ್ಮ ಮನೆಗೆ ಏಕೆ ಕುಕ್ಕರ್ ಕೊಟ್ಟಿಲ್ಲ ಎಂದು ವೃದ್ಧೆ ಪ್ರಶ್ನಿಸಿದ್ದಕ್ಕೆ ಕುಕ್ಕರ್ ವಿತರಿಸಿದ ವ್ಯಕ್ತಿ ವೃದ್ಧೆ ಮೇಲೆ ಹಲ್ಲೆ ಮಾಡಿದ್ದು ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ವೃದ್ಧೆಯ ಮನೆಯವರು ಠಾಣೆ ಮೆಟ್ಟಿಲೇರಿರುವ ಘಟನೆ ಹುಲಿಯೂ ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ಹಲ್ಲೆಗೋಳಗಾದ ವೃದ್ಧೆಯ ಸಂಬಂಧಿಕ ನೀಡಿರುವ ದೂರಿನಲ್ಲಿ ಉಜ್ಜಿನಿ ಗ್ರಾಮದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷವರು ಕುಕ್ಕರ್ ಹಂಚಿಕೆ ಮಾಡಿದ್ದು ಗಂಗಚನ್ನಮ್ಮ ಎಂಬುವವರ ಮನೆ ಸಮೀಪ ಹಂಚಿದ್ದರೂ ಗಂಗಚನ್ನಮ್ಮ ಮನೆಗೆ ಕೊಟ್ಟಿರಲಿಲ್ಲ, ಈ ಬಗ್ಗೆ ಗಂಗಚನ್ನಮ್ಮ ಮುಖಂಡ ನಾರಾಯಣ ಎಂಬಾತನಿಗೆ ನಮಗೆ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದರಿಂದ ಆಕ್ರೋಶಗೊಂಡ ಆತ ಗಂಗಚನ್ನಮ್ಮನ ಮೇಲೆ ಹಲ್ಲೆ ಮಾಡಿದ್ದು, ಸ್ಥಳದಲ್ಲಿದ್ದ ಕೆಲ ಗ್ರಾಮಸ್ಥರು, ವೃದ್ಧೆಯ ಮೊಮ್ಮಗ ಬಿಡಿಸಿದ್ದು ಘಟನೆಗೆ ಸಂಬಂಧಿಸಿದಂತೆ ವೃದ್ಧೆಯೆ ಮಗ ಶಿವಕುಮಾರ ಹುಲಿಯೂರು ದುರ್ಗ ಪೊಲೀಸರಿಗೆ ತಮ್ಮ ತಾಯಿಯ ಮೇಲೆ ಹಲ್ಲೆ ನಡೆಸಿರುವ ನಾರಾಯಣ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ, ಸದರಿ ಘಟನೆಗೆ ಸಂಬಂಧಿಸಿದಂತೆ ವೃದ್ಧೆ ಹುಲಿಯೂರು ದುರ್ಗ ಸಾರ್ವಜನಿಕ ಆಸ್ಪತ್ರೆ ಬಳಿ ಚಿಕಿತ್ಸೆ ಆಗಮಿಸಿ ದೂರವಾಣಿ ಮೂಲಕ ನಡೆದ ಘಟನೆಯನ್ನು ಮೊಬೈಲ್ ಮೂಲಕ ಸಂಬಂಧಿಕರ ಹೇಳಿಕೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Get real time updates directly on you device, subscribe now.
Comments are closed.