ಪತ್ರಕರ್ತರ ಸಂಘದಿಂದ ನಾಗೇಂದ್ರರಿಗೆ ಶ್ರದ್ಧಾಂಜಲಿ

42

Get real time updates directly on you device, subscribe now.


ತುಮಕೂರು: ಹಿರಿಯ ಪತ್ರಕರ್ತ ಹಾಗೂ ಪತ್ರಿಕಾ ವಿತರಕ ಹೆಬ್ಬೂರಿನ ಹೆಚ್.ಕೆ.ನಾಗೇಂದ್ರ ಅವರಿಗೆ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ನಗರದ ಪತ್ರಿಕಾ ಭವನದಲ್ಲಿ ತುಮಕೂರು ತಾಲೂಕಿನ ಹಲವಾರು ವರ್ಷಗಳಿಂದ ವಿಜಯ ಕರ್ನಾಟಕ, ವಿಜಯವಾಣಿ, ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಪ್ರಜಾವಾಣಿ ಪತ್ರಿಕೆ ವಿತರಣೆ ವಿಭಾಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದ ಹೆಚ್.ಕೆ.ನಾಗೇಂದ್ರ ಅವರು ದೈವಾಧೀನರಾದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಾಗೂ ಜಿಲ್ಲೆಯ ಪತ್ರಕರ್ತರ ಪರವಾಗಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ನಾಗೇಂದ್ರ ಅವರ ಫೋಟೋಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚೀ.ನಿ.ಪುರುಷೋತ್ತಮ್ ಮಾತನಾಡಿ, ಪತ್ರಕರ್ತರು ಇತ್ತೀಚೆಗೆ ನಾನಾ ಕಾರಣದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಅನೇಕ ಪತ್ರಕರ್ತರು ನಮ್ಮನ್ನಗಲಿದ್ದು ತುಮಕೂರು ಗ್ರಾಮಾಂತರ ವರದಿಗಾರರಾಗಿದ್ದ ನಾಗೇಂದ್ರ ಅವರಿಗೆ ಪತ್ರಿಕಾ ವೃತ್ತಿ ಮತ್ತು ಪತ್ರಕರ್ತರ ಸಂಘದ ಬಗ್ಗೆ ಅಪಾರ ಕಾಳಜಿ ಇತ್ತು, ನಾಗೇಂದ್ರ ಅವರು ಸರಳ, ಸಜ್ಜನರಾಗಿದ್ದು ಎಲ್ಲರೊಡನೆ ಉತ್ತಮ ಗುಣ, ಬಾಂಧವ್ಯ ಹೊಂದಿದ್ದರು, ಎಲ್ಲಾ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿದ್ದ ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದರು.

ಪತ್ರಕರ್ತರಿಗೆ ಯಾವುದೇ ಸಮಸ್ಯೆಗಳಾಗದಂತೆ ಮಹಾನಗರ ಪಾಲಿಕೆಯಿಂದ ಜಿಲ್ಲಾ ಪತ್ರಕರ್ತರಿಗೆ ಇನ್ಸುರ್ಸ್ ಮಾಡಿಸುತ್ತಿದ್ದು ಹಂತ ಹಂತವಾಗಿ ಮೂವತ್ತು ಪತ್ರಕರ್ತರಿಗೆ ವಿಮೆ ಮಾಡಲಾಗುತ್ತದೆ, ಕೆಲ ತಾಂತ್ರಿಕ ತೊಂದರೆಗಳಿಂದ ವಿಳಂಬವಾಗಿದ್ದು ಶೀಘ್ರವಾಗಿ ವಿಮೆ ಮಾಡಿಸಲಾಗುವುದು, ನಾನಾ ಕಾರಣಗಳಿಂದ ನಿಧನ ಹೊಂದಿದ ಪತ್ರಕರ್ತರಿಗೆ ಮೊದಲು ಹತ್ತು ಸಾವಿರಗಳಿಂದ ಹಣ ಸಹಾಯ ಮಾಡಲು ಹೊರಟ್ಟಿದ್ದು ಜಿಲ್ಲಾ ಪತ್ರಕರ್ತರ ಸಂಘ ಸಂಘದಲ್ಲಿ ಯಾವುದೇ ಹಣಕಾಸಿನ ವ್ಯವಸ್ಥೆ ಇಲ್ಲದಿದ್ದರೂ ಅಕಾಲಿಕ ಮರಣ ಹೊಂದಿದ ಪತ್ರಕರ್ತರಿಗೆ ಸಹಾಯ ಮಾಡಲಾಗಿತ್ತು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್ ಮಾತನಾಡಿ, ಎಲ್ಲರೂಂದಿಗೆ ಚಟುವಟಿಕೆಯಿಂದ ಇದ್ದ ನಾಗೇಂದ್ರ ಅವರು ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಎಲ್ಲರ ಒಡನಾಟ ಹೊಂದಿದ ಇವರು ಜನಸ್ನೇಹಿಯಾಗಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದರು, ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದರು.

ನಾಮ ನೀರ್ದೇಶಿತ ನಿರ್ದೇಶಕ ಹರೀಶ್ ಆಚಾರ್ಯ ಮಾತನಾಡಿ, ತುಮಕೂರು ಗ್ರಾಮಾಂತರ ವರದಿಗಾರರಾಗಿ ಪ್ರಮುಖ ದಿನ ಪತ್ರಿಕೆ ಗಳಿಗೆ ಸುದ್ದಿ ಕೊಡುತ್ತಿದ್ದರು, ನೇರಾ ನಿಷ್ಠುರ ಪತ್ರಕರ್ತರು, ಇತ್ತೀಚೆಗೆ ಪತ್ರಕರ್ತರ ಜೀವನ ಸಂಕಷ್ಟವಾಗಿದ್ದು ಒಳ್ಳೆಯ ಮನಸ್ಸಿನ ವ್ಯಕ್ತಿತ್ವದ ಪತ್ರಕರ್ತರು ಅಗಲುತ್ತಿರುವುದು ತುಂಬಲಾರದ ನಷ್ಟ ಎಂದರು.

ಶ್ರದ್ಧಾಂಜಲಿ ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಸಿ.ಜಯಣ್ಣ, ಕೆ.ಹೆಚ್.ಶಂಕರಪ್ಪ, ಆಹ್ವಾನಿತ ನಿರ್ದೇಶಕರಾದ ರೇಣುಕಾ ಪ್ರಸಾದ್, ಸುರೇಶ್ ಕಾಗೆರೆ, ಮಾಜಿ ಪ್ರಧಾನ ಕಾರ್ಯದರ್ಶಿ ಎನ್.ಡಿ.ರಂಗರಾಜು ಸೇರಿದಂತೆ ವಿವಿಧ ಪತ್ರಿಕೆಗಳ ಸಂಪಾದಕರು ಹಾಗೂ ವರದಿಗಾರರು, ಪತ್ರಕರ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!