ಕುಣಿಗಲ್: ಮದ್ಯ ಉತ್ಪಾದನೆ ನಂತರ ಉಳಿಯುವ ತ್ಯಾಜ್ಯ ಸಂಗ್ರಹಿಸಿ, ಸಾಗಿಸುವ ಸರಕು ಸಾಗಣೆ ವಾಹನದಲ್ಲಿ ತಾಂತ್ರಿಕ ತೊಂದರೆಯಾದ ಕಾರಣ ತ್ಯಾಜ್ಯ ಪಟ್ಟಣದ ಮಹಾವೀರ ನಗರದ ರಾಜ್ಯ ಹೆದ್ದಾರಿಯಲ್ಲಿ ಹರಡಿದ ಪರಿಣಾಮ ಬೈಕ್, ವಾಹಸವಾರರು ಪರದಾಡುವಂತಾಗಿ ಕೆಲವರಿಗೆ ಗಂಭೀರ ಗಾಯವಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಬಾಗಲಕೋಟೆಯಿಂದ ಮೈಸೂರಿಗೆ ಕುಣಿಗಲ್ ಪಟ್ಟಣದ ಮೂಲಕ ಮದ್ಯ ಕಾರ್ಖಾನೆಯ ತ್ಯಾಜ್ಯ ಸಾಗಾಣೆ ಮಾಡುತ್ತಿದ್ದ ಸರಕು ಸಾಗಾಣೆ ವಾಹನದಲ್ಲಿ ತಾಂತ್ರಿಕ ತೊಂದರೆ ಪರಿಣಾಮ ವಾಹನ ಬುಧವಾರ ರಾತ್ರಿ ಪಟ್ಟಣದ ತುಮಕೂರು ರಸ್ತೆಯ ಮಹಾವೀರ ನಗರದಲ್ಲಿ ಸುಮಾರು 300 ಮೀಟರ್ ದೂರು ತ್ಯಾಜ್ಯ ಹೆದ್ದಾರಿಗೆ ಬಿದ್ದಿತು, ತ್ಯಾಜ್ಯವು ಜಾರುವಿಕೆಯಿಂದ ಕೂಡಿದ ಪರಿಣಾಮ 15ಕ್ಕೂ ಹೆಚ್ಚು ಬೈಕ್ ಸವಾರರು ಆಯತಪ್ಪಿ ಬಿದ್ದರೆ, ಕೆಲ ಕಾರುಗಳು ರಸ್ತೆಯಿಂದ ಪಕ್ಕಕ್ಕೆ ಸರಿದು ಅನಾಹುತದಿಂದ ಪಾರಾದವು, ಸ್ಥಳದಲ್ಲಿದ್ದ ನಾಗರಿಕರಾದ ಅರುಣ್, ರವೀಶ್ ಇತರರು ತ್ಯಾಜ್ಯ ರಸ್ತೆಗೆ ಬಿದ್ದು ವಾಹನ ಸವಾರರು ಗಾಯಗೊಳ್ಳುತ್ತಿರುವ ಬಗ್ಗೆ ಕುಣಿಗಲ್ ವೃತ್ತ ನಿರೀಕ್ಷಕ ನವೀನ್ ಗೌಡರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ವಾಹನ ಸಂಚಾರ ನಿಯಂತ್ರಿಸಿ ಅಗ್ನಿಶಾಮಕ ಇಲಾಖೆಯ ನೆರವಿನಿಂದ ರಸ್ತೆಯಲ್ಲಿ ಹರಡಿದ್ದ ತ್ಯಾಜ್ಯ ಸ್ವಚ್ಛಗೊಳಿಸಿ ಎರಡು ತಾಸಿನ ಕಾರ್ಯಾಚರಣೆಯ ನಂತರ ರಸ್ತೆಯನ್ನು ಸಾರ್ವಜನಿಕ ಸೇವೆಗೆ ನೀಡಿದರು.
Comments are closed.