ತುಮಕೂರು: ನಗರದ 4ನೇ ವಾರ್ಡ್ ವ್ಯಾಪ್ತಿಯ ನಾಲ್ಕುಗಾಲಿ ಬಾವಿ ಬಡಾವಣೆಯ 100 ಬಡ ಕುಟುಂಬಗಳಿಗೆ ಯುಗಾದಿ ಹಬ್ಬದ ಅಂಗವಾಗಿ ಮಾಜಿ ನಗರಸಭೆ ಉಪಾಧ್ಯಕ್ಷ ಟಿ.ಎಸ್.ತರುಣೇಶ್ ಉಚಿತ ಆಹಾರ ಧಾನ್ಯದ ಕಿಟ್ಗಳನ್ನು ವಿತರಿಸಿದರು.
ಪ್ರತಿ ವರ್ಷ ಯುಗಾದಿ ಹಬ್ಬದ ಸಂದರ್ಭದಲ್ಲಿ ನಿರಾಶ್ರಿತರ ಕೇಂದ್ರದ ವಾಸಿಗಳಿಗೆ ಹೋಳಿಗೆ ಅಡುಗೆ ಮಾಡಿಸಿ ಉಣ ಬಡಿಸಲಾಗುತ್ತಿತ್ತು, ಆದರೆ ಈ ಬಾರಿ ಕೋವಿಡ್ ಇರುವ ಹಿನ್ನೆಲೆಯಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಹೋಳಿಗೆ ಊಟ ನೀಡಲು ಅನುಮತಿ ನಿರಾಕರಿಸಿದ್ದರಿಂದ 4ನೇ ವಾರ್ಡ್ ವ್ಯಾಪ್ತಿಯಲ್ಲಿ 100 ಬಡ ಕುಟುಂಬಗಳನ್ನು ಗುರುತಿಸಿ ತರುಣೇಶ್ ಮತ್ತು ರಾಜೇಶ್ವರಿ ದಂಪತಿ ಉಚಿತವಾಗಿ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಕೂಲಿ ಸಿಗದೆ ಹಣ ಇಲ್ಲದೆ ಪರದಾಡುತ್ತಿರುವ ಬಡ ಕುಟುಂಬಗಳಿಗೆ ತಮ್ಮ ದುಡಿಮೆಯ ಸ್ವಲ್ಪ ಭಾಗದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತಿರುವುದಾಗಿ ಟಿ.ಎಸ್.ತರುಣೇಶ್ ತಿಳಿಸಿದರು.
ಕೊರೊನಾ ಹೊಡೆತಕ್ಕೆ ಸಿಲುಕಿ ಜನ ತತ್ತರಿಸಿದ್ದಾರೆ, ಜನರ ಸಂಕಷ್ಟ ಅರಿತು ಈ ನಿರ್ಧಾರ ಕೈಗೊಂಡಿದ್ದು, ಬಡವರಿಗೆ ಕೊಂಚ ಆಸರೆಯಾಗುವ ಸದುದ್ದೇಶದಿಂದ ಕೊರೊನಾ ನಿಯಮಗಳನ್ನು ಪಾಲಿಸಿ ಆಹಾರ ಧಾನ್ಯ ಹಂಚಲಾಗಿದೆ ಎಂದರು.
ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
Get real time updates directly on you device, subscribe now.
Prev Post
Next Post
Comments are closed.