ಕುಣಿಗಲ್: ತಾಲೂಕಿನ ಯಲಿಯೂರು ಕೆರೆಯಲ್ಲಿ ನೀರಾವರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಕೆರೆ ಮಣ್ಣು ಎತ್ತುವಳಿ ಮಾಡುತ್ತಿರುವುದನ್ನು ಕೂಡಲೆ ನಿಲ್ಲಿಸುವಂತೆ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.
ತಾಲೂಕಿನ ಹುತ್ರಿದುರ್ಗ ಹೋಬಳಿಯ ಯಲಿಯೂರು ಕೆರೆಯಲ್ಲಿ ನಿಯಮಾನುಸಾರ ಮೇಲ್ಮೈನಿಂದ ಒಂದು ಮೀಟರ್ ಅಗೆದು ಮಣ್ಣು ಎತ್ತುವಳಿ ಮಾಡಬೇಕಿದ್ದು, ಸದರಿ ಕೆರೆಯಿಂದ ಖಾಸಗಿ ಕಾರ್ಖಾನೆಗೆ ಮಣ್ಣು ಸಾಗಿಸಲು ಖಾಸಗಿಯವರು ಗುತ್ತಿಗೆ ಪಡೆದಿದ್ದು, ಗುತ್ತಿಗೆ ಪಡೆದವರು ನಿಯಮಾನುಸಾರ ಹೂಳು ಮಣ್ಣು ತೆಗೆದು ಸಾಗಿಸಬೇಕಿದೆ, ಆದರೆ ಅವರು ಮನಬಂದಂತೆ ಗುಂಡಿತೋಡಿ ಹಲವಾರು ಅಡಿ ಆಳ ತೋಡುತ್ತಿರುವುದರಿಂದ ಕೆರೆಯ ಏರಿಗೆ ಅಪಾಯವಾಗುವ ಸಾಧ್ಯತೆ ಇರುವ ಜೊತೆಯಲ್ಲಿ ಕೆರೆಯ ಅಂಗಳದಲ್ಲಿ ಅರಣ್ಯ ಇಲಾಖೆಯವರು ಹೊಂಗೆ ಸೇರಿದಂತೆ ಹಲವು ಪ್ರಬೇಧದ ಮರಗಳನ್ನು ವಿವಿಧ ಅನುದಾನದಲ್ಲಿ ಬೆಳೆಸಿದ್ದು ಈ ಮರಗಳನ್ನು ಸಹ ಮಣ್ಣುಸಾಗಾಣೆ ಮಾಡುವ ನೆಪದಲ್ಲಿ ಬುಡಮೇಲು ಮಾಡುತ್ತಿದ್ದು ನಿಯಮಾವಳಿ ಉಲ್ಲಂಸಿ ಮಣ್ಣು ಎತ್ತುವಳಿ ಮಾಡುತ್ತಿರುವವರ ಮೇಲೆ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಕೆ.ಎಚ್.ಶಿವಣ್ಣ, ಮಂಜುನಾಥ,ನಾಗರಾಜ, ಚಲುವಯ್ಯ, ದೇವರಾಜ, ಸಂಜಯ್ ರಂಗಸ್ವಾಮಿ, ಹರೀಶ್ ಇತರರು ಕುಣಿಗಲ್ ತಹಶೀಲ್ದಾರ್ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
Comments are closed.