ತಿಮ್ಮನಹಳ್ಳಿಯಲ್ಲಿ ಕರುಗಳ ಪ್ರದರ್ಶನ ಯಶಸ್ವಿ

288

Get real time updates directly on you device, subscribe now.

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಗ್ರಾಪಂಗಳ ಸಹಯೋಗದಲ್ಲಿ ಕರುಗಳ ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಿಮ್ಮನಹಳ್ಳಿ, ಮೈಲುಕಟ್ಟೆ, ಲಕ್ಕೇನಹಳ್ಳಿ, ಸಿದ್ದನಕಟ್ಟೆ, ಸಾದರಹಳ್ಳಿ, ಚಿಕ್ಕಬೆಳವಾಡಿ, ದೊಡ್ಡವಳವಾಡಿ, ಸಾದರಹಳ್ಳಿ, ಸಾಲ್ಕಟ್ಟೆ, ಅಜ್ಜಿಗುಡ್ಡೆ, ರಾಮನಹಳ್ಳಿ, ಆಶ್ರಿಹಾಳ್ ಗ್ರಾಮಗಳಿಂದ ಒಟ್ಟು 130 ಕರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕರುಗಳಿಗೆ ಲೆವಾಮಿಸೋಲ್ ಮತ್ತು ಆಕ್ಸಿಕ್ಲೋಜನೈಡ್ ಮಿಶ್ರಣ ಜಂತುನಾಶಕ ಔಷಧಿ ಕುಡಿಸಲಾಯಿತು. ಐವರ್ ಮೆಕ್ಟಿನ್ ಚುಚ್ಚುಮದ್ದನ್ನು ನೀಡಲಾಯಿತು. ನಿಶ್ಯಕ್ತ ಕರುಗಳಿಗೆ ಆರೋಗ್ಯ ವೃದ್ಧಿಸಲು ಟಾನಿಕ್ ಹಾಗೂ ಒಂದು ಕೆಜಿ ಲವಣ ಖನಿಜ ಮಿಶ್ರಿತ ಪ್ಯಾಕೇಟ್ ನೀಡಲಾಯಿತು.
ಪ್ರದರ್ಶನದಲ್ಲಿ ಉತ್ತಮ ಕರುಗಳಿಗೆ ಬಹುಮಾನ ವಿತರಿಸಲಾಯಿತು, ಅದರಲ್ಲಿ ಎಳೆಕರುಗಳ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ತಿಮ್ಮನಹಳ್ಳಿ ಓಂಕಾರಮೂರ್ತಿ, ದ್ವಿತೀಯ ಬಹುಮಾನವನ್ನು ಸಿದ್ದನಕಟ್ಟೆ ಬಸವರಾಜು, ತೃತೀಯ ಬಹುಮಾನವನ್ನು ಸಾಲ್ಕಟ್ಟೆ ಪರಮಶಿವಯ್ಯ ಪಡೆದರು.
ಮಧ್ಯಮ ಕರುಗಳ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ತಿಮ್ಮನಹಳ್ಳಿ ಸುಬ್ರಮಣ್ಯ, ದ್ವಿತೀಯ ಬಹುಮಾನವನ್ನು ತಿಮ್ಮನಹಳ್ಳಿ ಜಯಣ್ಣ ಹಾಗೂ ತೃತೀಯ ಬಹುಮಾನವನ್ನು ಸಾಲ್ಕಟ್ಟೆ ಮಲ್ಲಿಕಾರ್ಜುನಯ್ಯ ಪಡೆದರು.
ದೊಡ್ಡ ಕರುಗಳ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ತಿಮ್ಮನಹಳ್ಳಿಯ ಲಕ್ಕಣ್ಣ, ದ್ವಿತೀಯ ಬಹುಮಾನವನ್ನು ತಿಮ್ಮನಹಳ್ಳಿ ದೇವರಾಜು, ತೃತೀಯ ಬಹುಮಾನವನ್ನು ಚಿಕ್ಕಬೆಳವಾಡಿಯ ಮೋಹನ್ ಪಡೆದರು. ಪ್ರದರ್ಶನದ ಚಾಂಪಿಯನ್ ಬಹುಮಾನವನ್ನು ತಿಮ್ಮನಹಳ್ಳಿಯ ಸುಬ್ರಮಣ್ಯ ಪಡೆದುಕೊಂಡರು.
ಗ್ರಾಪಂ ಅಧ್ಯಕ್ಷೆ ಲೋಲಾಕ್ಷಮ್ಮ ಅಧ್ಯಕ್ಷತೆ ವಹಿಸಿದರು. ತಾಪಂ ಸದಸ್ಯೆ ಇಂದ್ರಕುಮಾರಿ, ಪಶುಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್, ಗ್ರಾಪಂ ಸದಸ್ಯರಾದ ಗೋಪಾಲಕೃಷ್ಣ, ರಾಘವೇಂದ್ರ, ಪಶುವೈದ್ಯರಾದ ಡಾ.ತಿಮ್ಮರಾಜು, ಡಾ.ಜಿ.ವೆಂಕಟಪ್ಪ, ಡಾ.ಎಚ್.ಟಿ.ಮಂಜುನಾಥ್, ಡಾ.ಸಂದ್ಯರಾಣಿ, ಡಾ.ಕಾವ್ಯಾ, ಡಾ.ಯೋಗೀಶ್, ಡಾ.ಶಾಂತೇಶ್, ಜಾನುವಾರು ಅಧಿಕಾರಿಗಳಾದ ಕೇಶವ್ ಲೋಕರೆ, ಹಿರಿಯ ಪಶುವೈದ್ಯ ಪರೀಕ್ಷಕರಾದ ಹೊನ್ನಯ್ಯ, ಪಶುವೈದ್ಯ ಸಹಾಯಕರಾದ ಚಂದ್ರಶೇಖರ್, ಸಿಬ್ಬಂದಿ ಪ್ರಭಾರೆಡ್ಡಿ, ಕುಮಾರಯ್ಯ, ಅಭಿಷೇಕ್, ಕಾಮಾಕ್ಷಮ್ಮ, ಕುಮಾರಸ್ವಾಮಿ, ಇದ್ದರು.

Get real time updates directly on you device, subscribe now.

Comments are closed.

error: Content is protected !!