ತುಮಕೂರು: ತುಮಕೂರು ತಾಲ್ಲೂಕಿನ ಕುಚ್ಚಂಗಿ ಕೆರೆಯ ಅಂಗಳದಲ್ಲಿ ಕಾರು ಸುಟ್ಟು ಅದರಲ್ಲಿ ಮೂವರು ಶವ ಪತ್ತೆಯಾಗಿತ್ತು, ಈ ಘಟನೆ ಹೇಗೆ ನಡೆಯಿತು, ಕೊಲೆ ಮಾಡಿ ಕಾರಿಗೆ ಬೆಂಕಿ ಹಚ್ಚಲಾಗಿದೆಯಾ ಎಂಬ ಪ್ರಶ್ನೆ ಎದುರಾಗಿತ್ತು, ಇದೀಗ ಪೊಲೀಸರು ಈ ಪ್ರಕರಣ ಭೆೇದಿಸಿದ್ದು ಕೊಲೆ ಮಾಡಿದ್ದ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವರು ಎಂದು ತಿಳಿದು ಬಂದಿದೆ, ಬೆಳ್ತಂಗಡಿ ತಾಲೂಕಿನ ಇಸಾಕ್ (56), ಶಾಹುಲ್ ಹಮೀದ್ (45), ಇಮ್ತಿಯಾಜ್ ಸಿದ್ದೀಕ್ ( 34) ಎಂಬವವರೇ ಕೊಲೆಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ,
ನಕಲಿ ಚಿನ್ನದ ದಂಧೆಯ ಆಸೆಗೆ ಬಿದ್ದು ಇವರು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ, ನಮ್ಮ ಜಮೀನಿನಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದ್ದು, ಅದನ್ನು ಕಡಿಮೆ ಬೆಲೆಗೆ ನೀಡುವುದಾಗಿ ಸ್ವಾಮಿ ಎಂಬಾಂತ ಸುಳ್ಳು ಹೇಳಿ ಮೂವರನ್ನು ಕರೆದು ಹಣ ದೋಚುವ ಪ್ಲ್ಯಾನ್ ಮಾಡಿದ್ದಾನೆ, ಸ್ವಾಮಿಯ ಮಾತು ನಂಬಿದ ಮೂವರು ದಕ್ಷಿಣ ಕನ್ನಡ ಜಿಲ್ಲೆಯ ಮದ್ದಡ್ಕದ ರಫೀಕ್ ಎಂಬುವವರ ಎಸ್ ಪ್ರೆಸ್ ಕಾರನ್ನು ಬಾಡಿಗೆ ಪಡೆದು ತುಮಕೂರಿಗೆ ಬಂದಿದ್ದಾರೆ, ಆರೋಪಿಗಳು ಮೂವರನ್ನು ಕೈಕಾಲನ್ನು ಕಟ್ಟಿ ಹಾಕಿ, ಕಾರಿನೊಳಗೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸುಮೊಟೋ ಪ್ರಕರಣ ದಾಕಲು ಮಾಡಿಕೊಂಡಿರುವ ಕೋರಾ ಠಾಣೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ, ಮೂವರ ಶವ ಸಂಪೂರ್ಣ ಸುಟ್ಟಿರುವ ಕಾರಣ ಡಿಎನ್ ಎ ಪರೀಕ್ಷೆ ನಂತರ ಮನೆಯವರಿಗೆ ಶವ ನೀಡಲಿದ್ದಾರೆ.
ಕೊಲೆಯಾಗಿರುವ ಇಸಾಕ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಎಂದು ತಿಳಿದು ಬಂದಿದೆ, ಸಾಹುಲ್ ಹಮೀದ್ ಆಟೋ ಚಾಲಕನಾಗಿದ್ದ ಹಾಗೂ ಇಮ್ತಿಯಾಜ್ ಸಿದ್ದಿಕ್ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ, ಚಿನ್ನದ ಆಸೆಗೆ ಬಂದು ತುಮಕೂರಿನಲ್ಲಿ ಕೊಲೆಯಾಗಿ ಸುಟ್ಟು ಕರಕಲಾಗಿದ್ದಾರೆ.
ಸದ್ಯ ಪ್ರಮುಖ ಆರೋಪಿ ಸ್ವಾಮಿ ಸೇರಿ ಒಟ್ಟು 6 ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.
Comments are closed.