ದುರಸ್ತಿಯಾಗಿ ಶುದ್ಧ ನೀರಿನ ಘಟಕ ಲೋಕಾರ್ಪಣೆ

39

Get real time updates directly on you device, subscribe now.


ಹುಳಿಯಾರು: ಕೆಟ್ಟು ಒಂದು ವರ್ಷವಾದರೂ ದುರಸ್ತಿ ಕಾಣದ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಸಿ.ಪಾಳ್ಯ ಶುದ್ಧ ಕುಡಿಯುವ ನೀರಿನ ಘಟಕ ಪತ್ರಿಕೆಯ ವರದಿಯ ಫಲಶೃತಿಯಿಂದಾಗಿ ಸಂಪೂರ್ಣ ದುರಸ್ತಿಯಾಗಿ ಸೋಮವಾರ ಮತ್ತೆ ಲೋಕಾರ್ಪಣೆಯಾಯಿತು.
ಕೆ.ಸಿ.ಪಾಳ್ಯ ನೀರಿನ ಘಟಕ ಕೆಟ್ಟು ವರ್ಷವಾಗಿದ್ದರೂ ದುರಸ್ತಿ ಮಾಡದ ಪರಿಣಾಮ ಲಕ್ಷಾಂತರ ರೂ. ವೆಚ್ಚದ ಯಂತ್ರೋಪಕರಣ ತುಕ್ಕು ಹಿಡಿಯುತ್ತಿತ್ತು, ಅಲ್ಲದೆ ಶುದ್ಧ ನೀರು ತರಲು ನಾಲ್ಕೈದು ಕಿ.ಮೀ ದೂರದ ಹುಳಿಯಾರು, ಕೆಂಕೆರೆಗೆ ಹೋಗಿ ಬರುವ ಅನಿವಾರ್ಯತೆ ನಿರ್ಮಾಣವಾಗಿತ್ತು, ಕೆಲವರು ಕೊಳಾಯಿಯಲ್ಲಿ ಬರುವ ಫ್ಲೋರೈಡ್ ನೀರನ್ನೇ ಕುಡಿಯುವಂತಾಗಿತ್ತು.

ಈ ಬಗ್ಗೆ ಪತ್ರಿಕೆ ವರದಿ ಮಾಡಿತ್ತು, ವರದಿ ಗಮನಿಸಿದ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಣಾಧಿರಿ ವಸಂಸ್ ಕುಮಾರ್ ಅವರು ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಪಿಡಿಒ ತಿಪ್ಪೇಸ್ವಾಮಿ ಅವರಿಗೆ ಶೀಘ್ರ ದುರಸ್ತಿ ಮಾಡಿ ಗ್ರಾಮದ ಜನರಿಗೆ ಶುದ್ಧ ನೀರು ಕುಡಿಯುವಂತೆ ಮಾಡಲು ಸೂಚನೆ ನೀಡಿ ಹೋಗಿದ್ದರು, ಅದರಂತೆ ಘಟಕ ದುರಸ್ತಿ ಮಾಡಲಾಗಿತ್ತು.

ಶನಿವಾರ ಇಒ ವಸಂತಕುಮಾರ್ ಮತ್ತೆ ಗ್ರಾಮಕ್ಕೆ ಭೇಟಿ ನೀಡಿ ಘಟಕದ ನೀರನ್ನು ತಾವೇ ಮೊದಲು ಕುಡಿಯುವ ಮೂಲಕ ಶುದ್ಧತೆಯ ಖಾತ್ರಿ ಮಾಡಿಕೊಂಡರಲ್ಲದೆ ನೀರಿನ ಪಿಎಚ್ ಮಟ್ಟ ಪರಿಶೀಲಿಸಿ ಸಾರ್ವಜನಿಕರು ಬಳಕೆಗೆ ಸಮ್ಮತಿ ಸೂಚಿಸಿದರು. ನಂತರ ಊರಿನವರು ಬಂದು ನೀರು ಹಿಡಿದು ಸಂಭ್ರಮಿಸದರು, ನಾಲ್ಕೈದು ಕಿ.ಮೀ ದೂರದಿಂದ ತರುವುದನ್ನು ತಪ್ಪಿಸಿದ ಇಒಗೆ ಹಾರ ಹಾಕಿ ಸಿಹಿ ಹಂಚಿ ಖುಷಿ ಪಟ್ಟರು.

Get real time updates directly on you device, subscribe now.

Comments are closed.

error: Content is protected !!