ದೇಶ ರಕ್ಷಣೆಗೆ ಮೋದಿ ಮತ್ತೆ ಪ್ರಧಾನಿಯಾಗಲಿ

21

Get real time updates directly on you device, subscribe now.


ಗುಬ್ಬಿ: ದೇಶ ಉಳಿಸಬೇಕು ಮತ್ತು ರಕ್ಷಿಸಬೇಕು ಎಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ದೇಶಕ್ಕೆ ಬೇಕಾಗಿದೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ತಿಳಿಸಿದರು.
ಗುಬ್ಬಿ ಪಟ್ಟಣದ ಬಾವಿ ಮನೆ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ 48000 ಮತವನ್ನ ನೀಡಿದ್ದೀರಾ ಅಂದ ಮೇಲೆ ಇಂದಿಗೂ ಜೆಡಿಎಸ್ ಭದ್ರಕೋಟೆ ಎಂಬುದು ಸಾಬೀತಾಗಿದೆ, ನಾವು ವಿಧಾನಸಭೆಯಲ್ಲಿ ಸೋತಿರಬಹುದು, ಆದರೆ ನಮ್ಮ ಮೈತ್ರಿ ಪಕ್ಷ ಈ ಬಾರಿ ಲೋಕಸಭೆಯಲ್ಲಿ ಗೆದ್ದೇ ಗೆಲ್ಲುತ್ತದೆ, ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೈ ಬಲ ಪಡಿಸಬೇಕು ಎಂದರೆ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಮತವನ್ನು ತಾವೆಲ್ಲರೂ ನೀಡಬೇಕಾಗಿದೆ, ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಾಗಿ ರಾಜ್ಯದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತವನ್ನು ನಾವೆಲ್ಲರೂ ನೀಡಬೇಕು ಎಂದು ಮನವಿ ಮಾಡಿದರು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ವಿ.ಸೋಮಣ್ಣನವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಉತ್ತಮ ಕೆಲಸಗಾರರು ಆಗಿದ್ದಾರೆ, ಗುಬ್ಬಿ ತಾಲೂಕಿನ ನೀರಾವರಿ, ರಸ್ತೆ, ರೈಲ್ವೆ ಮೇಲ್ ಸೇತುವೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಎಲ್ಲಾ ವಿಚಾರದಲ್ಲೂ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ, ಹಾಗಾಗಿ ನಾವೆಲ್ಲರೂ ಒಟ್ಟಾಗಿ ನಿಂತು ಮೈತ್ರಿ ಪಕ್ಷದ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಹೆಚ್ಚಿನ ಮತ ಹಾಕಿಸೋಣ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಬೆಟ್ಟಸ್ವಾಮಿ ಮಾತನಾಡಿ, ಮೈತ್ರಿ ಧರ್ಮವನ್ನು ನಾವೆಲ್ಲರೂ ಕಾಪಾಡಬೇಕಾಗಿದ್ದು, ಭಾರತ ದೇಶ ಇಂದು ಅಭಿವೃದ್ಧಿಯಲ್ಲಿ ಮೂರನೇ ಸ್ಥಾನದಲ್ಲಿದೆ, ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಮಾತ್ರ ಈ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ, ಪುಕ್ಕಟ್ಟೆ ಭಾಗ್ಯಗಳಿಂದ ದೇಶದ ಅಭಿವೃದ್ಧಿ ಆಗುವುದಿಲ್ಲ, ಅದರ ಬದಲಿಗೆ ದೇಶದ ರಕ್ಷಣೆ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವುದು ಎಲ್ಲರ ಗುರಿಯಾಗಬೇಕು ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಹೊನ್ನಗಿರಿ ಗೌಡ ಮಾತನಾಡಿ, ಸೋಮಣ್ಣನವರಿಗೂ ತುಮಕೂರಿಗೂ ಅವಿನಾಭಾವ ಸಂಬಂಧವಿದ್ದು ಅವರು ಸಹ ನಮ್ಮವರೇ, ಬೆಂಗಳೂರಿನ ಅವರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ಸೋಮಣ್ಣ ಇಲ್ಲಿಗೆ ಬಂದಿರುವುದು ನಮ್ಮ ಅದೃಷ್ಟವೇ ಸರಿ, ದೇವೇಗೌಡರನ್ನ ಸೋಲಿಸಿರುವ ಕೆಲವರಿಗೆ ಈ ಲೋಕಸಭಾ ಚುನಾವಣೆ ಒಂದು ದೊಡ್ಡ ಪಾಠವಾಗಬೇಕಾಗಿದೆ, ಹಾಗಾಗಿ ಈ ಚುನಾವಣೆಯನ್ನು ತಾವೆಲ್ಲರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಯೋಗಾನಂದ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳಿಂದ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 95 ಸಾವಿರ ಮತ ಬಂದಿತ್ತು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ನಾವು ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ನೀಡಬೇಕಾಗಿದೆ, ಹಾಗಾಗಿ ಪ್ರತಿ ಬೂತ್ ನಲ್ಲಿ ನಮ್ಮ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಒಟ್ಟುಗೂಡಿ ಕೆಲಸ ಮಾಡಿದಾಗ ಖಂಡಿತವಾಗಿ ವಿ.ಸೋಮಣ್ಣ ಅವರು ಅತ್ಯಧಿಕ ಮತದಿಂದ ವಿಜಯ ಸಾಧಿಸುತ್ತಾರೆ ಎಂದು ತಿಳಿಸಿದರು.

ಮುಖಂಡರಾದ ತಾಲೂಕು ಜೆಡಿಎಸ್ ಅಧ್ಯಕ್ಷ ಚಿಕ್ಕವೀರಯ್ಯ, ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್, ಕರಿಯಪ್ಪ, ಶಿವ ಲಿಂಗೇಗೌಡ, ಸುರೇಶ್ ಗೌಡ, ಸಿದ್ದಗಂಗಮ್ಮ, ಯರ್ರಯ್ಯ, ಮಂಜುನಾಥ್, ಜಯಣ್ಣ, ಅಹಮದ್, ಕೃಷ್ಣಪ್ಪ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!