ಕುಣಿಗಲ್: ಗ್ರಾಮ ದೇವತೆ ಹಬ್ಬದ ಅಂಗವಾಗಿ ಹಮ್ಮಿಕೊಂಡ ಅಗ್ನಿಕೊಂಡೋತ್ಸವದಲ್ಲಿ ಅರ್ಚಕರು ಅಗ್ನಿಕೊಂಡ ಹಾಯುವ ವೇಳೆ ಆಯ ತಪ್ಪಿ ಬಿದ್ದು ಗಾಯಗೊಂಡಿರುವ ಘಟನೆ ಯಡಿಯೂರು ಹೋಬಳಿ ಕಗ್ಗೆರೆ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ಅರ್ಚಕರನ್ನು ಕಗ್ಗೆರೆ ಗ್ರಾಮದ ದಂಡಿನ ಮಾರಮ್ಮ ದೇವಾಲಯದ ಅರ್ಚಕ ವೆಂಕಟಪ್ಪ (74) ಎಂದು ಗುರುತಿಸಲಾಗಿದ್ದು, ಶನಿವಾರದಿಂದ ಗ್ರಾಮ ದೇವತೆ ಉತ್ಸವಗಳು ನಡೆಯುತ್ತಿದ್ದು ಸೋಮವಾರ ಬೆಳಗಿನ ಜಾವ ಅಗ್ನಿಕೊಂಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಬೆಳಗಿನ ಜಾವ ಒಂದು ಗಂಟೆ ಸಮಯದಲ್ಲಿ ಅರ್ಚಕ ಅಗ್ನಿಕೊಂಡೊತ್ಸವ ನಡೆಸುವ ವೇಳೆ ಆಯತಪ್ಪಿ ಅಗ್ನಿಕೊಂಡಕ್ಕೆ ಬಿದ್ದ ಹಿನ್ನೆಲೆಯಲ್ಲಿ ಗಾಯಗೊಂಡರು, ಸ್ಥಳೀಯರು ಅವರನ್ನು ಬೆಳ್ಳೂರು ಕ್ರಾಸ್ ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಅರ್ಚಕರು ಅಪಾಯದಿಂದ ಪಾರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
Get real time updates directly on you device, subscribe now.
Prev Post
Comments are closed.