ಕೆ.ಸಿ.ಪಾಳ್ಯದಿಂದ ಕೋವಿಡ್ ಲಸಿಕಾ ಉತ್ಸವ ಆರಂಭ

528

Get real time updates directly on you device, subscribe now.

ಹುಳಿಯಾರು: ಕೋವಿಡ್- 19 ಲಸಿಕೆ ಅಭಿಯಾನದಡಿ ಹುಳಿಯಾರು ಹೋಬಳಿಯಲ್ಲಿ ಕೋವಿಡ್ ಲಸಿಕಾ ಉತ್ಸವ ಆರಂಭವಾಗಿದ್ದು, ಹೋಬಳಿಯ ಕೆ.ಸಿ.ಪಾಳ್ಯದಿಂದ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಇದುವರೆವಿಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ಕೋವಿಡ್ ಲಸಿಕೆ ಹಾಕಲಾಗುತ್ತಿತ್ತು. ಆದರೆ ಈಗ ಆರೋಗ್ಯ ಸಿಬ್ಬಂದಿಯೇ ಹಳ್ಳಿಗಳ್ಳಿಗಳಿಗೆ ತೆರಳಿ ಅಲ್ಲಿನ ಫಲಾನುಭವಿಗಳ ಮನವೊಲಿಸಿ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಉತ್ಸವದ ಮೊದಲ ಗ್ರಾಮವಾಗಿ ಕೆ.ಸಿ.ಪಾಳ್ಯ ಆಯ್ಕೆ ಮಾಡಿಕೊಂಡಿದ್ದು ಸೋಮವಾರ ಲಸಿಕೆ ಹಾಕಲಾಯಿತು.
ಕೆ.ಸಿ.ಪಾಳ್ಯದ ನಿವಾಸಿಗಳು ಸ್ವಯಂ ಪ್ರೇರಣೆಯಿಂದ ಆಗಮಿಸಿ ಕೋವಿಡ್ ಲಸಿಕೆ ಹಾಕಿಸಿಕೊಂಡು ಮಾದರಿಯಾದರು. ಶಾಲೆಯ ಶಿಕ್ಷಕರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿಗೆ ನೆರವಾದರು.
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕ ರೇಣುಕರಾಜ್ ಮಾತನಾಡಿ ಕೋವಿಡ್ -19 ಲಸಿಕೆ ಸಂಪೂರ್ಣ ಉಚಿತವಾಗಿದ್ದು. ಹಳ್ಳಿಹಳ್ಳಿಗೆ ಬಂದು ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ಲಸಿಕೆ ಹಾಕಲಾಗುವುದು ಸಾರ್ವಜನಿಕರು ತಮ್ಮೂರಿಗೆ ಆರೋಗ್ಯ ಸಿಬ್ಬಂಧಿ ಬಂದಾಗ ಲಸಿಕೆ ಪಡೆದುಕೊಂಡು ಆರೋಗ್ಯವಾಗಿರಿ ಎಂದರು.

Get real time updates directly on you device, subscribe now.

Comments are closed.

error: Content is protected !!