ಶಕ್ತಿ ದೇವತೆಯರ ಉತ್ಸವ ಆಚರಣೆ

20

Get real time updates directly on you device, subscribe now.


ಕುಣಿಗಲ್: ಮಂಗಳವಾರ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಶಕ್ತಿ ದೇವತೆಯರ ಉತ್ಸವ ಶ್ರದ್ಧಾ ಭಕ್ತಿಗಳಿಂದ ನೆರವೇರಿಸಲಾಯಿತು.
ಪಟ್ಟಣದ ಹಬ್ಬದ ಕೇಂದ್ರ ಸ್ಥಾನವಾದ ಉಪ್ಪಾರ ಬಡಾವಣೆಯ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು, ಪಟ್ಟಣದ ಮುಖ್ಯ ರಸ್ತೆಯಿಂದ ದೇವಾಲಯದ ವರೆಗೂ ರಸ್ತೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಆಕರ್ಷಕ ಬೀದಿ ದೀಪ ಅಳವಡಿಸಿ ಭಕ್ತಾದಿಗಳಿಗೆ ಸ್ವಾಗತ ಕೋರಲಾಗಿತ್ತು.

ಮಂಗಳವಾರ ಬೆಳಗಿನ ಜಾವ ಅರುಣೋದಯಕ್ಕೆ ಶ್ರೀ ಅಮ್ಮನವರನ್ನು ಗಂಗಾಸ್ನಾನಕ್ಕೆ ಪಟ್ಟಣಕ್ಕೆ ಹೊಂದಿಕೊಂಡಿರುವ ದೊಡ್ಡಕೆರೆ ದಡಕ್ಕೆ ಕರೆತಂದು ಸೋಮವಾರವೇ ಪವಿತ್ರ ಗಂಗೆ ಶೇಖರಣೆಗೆ ಗುಂಡಿ ತೋಡಿ ಅದರಲ್ಲಿ ಶೇಖರಣೆಯಾದ ಗಂಗೆಯಿಂದ ಶ್ರೀಅಮ್ಮನವರ ಉತ್ಸವ ಮೂರ್ತಿಗೆ ಶುದ್ದೋತ್ಸವ ನೇರವೇರಿಸಿ ಗಂಗೆಯನ್ನು ಕಳಶದಲ್ಲಿ ಆಹ್ವಾನಿಸಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಶ್ರೀಅಮ್ಮನವರ ಮೂರ್ತಿಯನ್ನು ಆಕರ್ಷಕ ಹೂಗಳಿಂದ ಸಿಂಗರಿಸಿ ಕರೆ ತರಲಾಯಿತು.

ಬಿಸಿಲಿನ ಬೇಗೆಗೆ ಬಳಲಿದ್ದ ಭಕ್ತರಿಗೆ ದಾರಿಯುದ್ದಕ್ಕೂ ತಂಪು ಪಾನೀಯ, ನೀರು ಮಜ್ಜಿಗೆ ವಿತರಿಸಲಾಯಿತು, ದೇವಾಲಯಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಆಗಮಿಸಿ ಅಮ್ಮನವರಿಗೆ ಮೊಸರನ್ನ ನೈವೇದ್ಯ ಅರ್ಪಿಸಿ, ತಂಬಿಟ್ಟು ಆರತಿ ಬೆಳಗಿದರು, ರಾತ್ರಿ ಹರಕೆ ಹೊತ್ತಂತಹ ಭಕ್ತರು ಎತ್ತಿನ ಗಾಡಿ, ಟ್ರಾಕ್ಟರ್ ಗಳಲ್ಲಿ ಅಗ್ನಿಕೊಂಡಕ್ಕೆ ಮರದ ದಿಮ್ಮಿಗಳನ್ನು ಅರ್ಪಿಸಿ ರಾತ್ರಿ ಅಗ್ನಿಕೊಂಡದ ಅಗ್ನಿಸ್ಪರ್ಶಕ್ಕೆ ಚಾಲನೆ ನೀಡಲಾಯಿತು, ಹಬ್ಬದ ಅಂಗವಾಗಿ ದೇವಾಲಯ ಹಾಗೂ ಶ್ರೀ ಅಮ್ಮನವರ ಮೂಲ ವಿಗ್ರಹವನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!