ಕೊಂಡ ಹಾಯುವಾಗ ಮತ್ತೊಬ್ಬ ಅರ್ಚಕನಿಗೆ ಗಾಯ

43

Get real time updates directly on you device, subscribe now.


ಕುಣಿಗಲ್: ಸೋಮವಾರ ಬೆಳಗಿನ ಜಾವ ಕಗ್ಗೆರೆ ಗ್ರಾಮ ದೇವತೆ ಹಬ್ಬದ ಅಗ್ನಿ ಕೊಂಡೋತ್ಸವದಲ್ಲಿ ಅರ್ಚಕರು ಅಗ್ನಿಕೊಂಡಕ್ಕೆ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಮಾಸುವ ಮುನ್ನವೆ ಮಂಗಳವಾರ ಬೆಳಗಿನ ಹುಲಿಯೂರು ದುರ್ಗದ ಹಳೇಪೇಟೆಯ ಹುಲಿಯೂರಮ್ಮ ದೇವಾಲಯ ಅಗ್ನಿಕೊಂಡದಲ್ಲಿ ಅರ್ಚಕ ಅಗ್ನಿಕೊಂಡ ಹಾಯುವಾಗ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.

ಸೋಮವಾರ ಹುಲಿಯೂರು ದುರ್ಗ ಹಳೇಪೇಟೆಯ ಹುಲಿಯೂರಮ್ಮ ದೇವಾಲಯದಲ್ಲಿ ಪ್ರತಿ ವರ್ಷದಂತೆ ಉತ್ಸವ ಹಮ್ಮಿಕೊಳ್ಳಲಾಗಿತ್ತು, ಮಂಗಳವಾರ ಬೆಳಗಿನ ಜಾವಕ್ಕೆ ಅಗ್ನಿ ಕೊಂಡೊತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದ ಅರ್ಚಕ ಮಧು ದೇವರ ಪಟ ಹೊತ್ತು ಹಾಯುವಾಗ ಆಯತಪ್ಪಿ ಅಗ್ನಿಕೊಂಡಕ್ಕೆ ಬಿದ್ದು ಗಾಯಗೊಂಡರು, ಅವರು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ತಾಲೂಕಿನಾದ್ಯಂತ ವಿವಿಧ ಹೋಬಳಿಯ ಗ್ರಾಮಗಳಲ್ಲಿ ಶಿವರಾತ್ರಿ ನಂತರ ಗ್ರಾಮ ದೇವತೆ ಹಬ್ಬದ ಉತ್ಸವ ನಡೆಯುತ್ತಿದ್ದು ಇದರ ಅಂಗವಾಗಿ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ಅಗ್ನಿ ಕೊಂಡೊತ್ಸವ ಆಚರಿಸಲಾಗುತ್ತಿದೆ, ಈ ಬಾರಿ ಎರಡು ಕಡೆ ಕೊಂಡೊತ್ಸವದಲ್ಲಿ ಅರ್ಚಕರು ಬಿದ್ದು ಗಾಯಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಇತರೆಡೆಗಳಲ್ಲಿ ಅಗ್ನಿ ಕೊಂಡೋತ್ಸವ ಆಚರಣೆ ಮುನ್ನ ಯಾವುದೇ ರೀತಿಯ ಅನಾಹುತ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಾಲೂಕು ಆಡಳಿತ ಎಚ್ಚರ ವಹಿಸಬೇಕೆಂದು ಹಿರಿಯ ನಾಗರಿಕರಾದ ಶ್ರೀನಿವಾಸ್ ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!