ಉರ್ಕೆಹಳ್ಳಿ ಲಕ್ಷಾಂತರ ರೂ. ದರೋಡೆ

27

Get real time updates directly on you device, subscribe now.


ಕುಣಿಗಲ್: ಕುಡಿಯಲು ನೀರು ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತರು ಮನೆಯವರಿಗೆ ಬಂದೂಕಿನಿಂದ ಬೆದರಿಸಿ ಲಕ್ಷಾಂತರ ರೂ. ದರೋಡೆ ಮಾಡಿ, ತಡೆಯಲು ಬಂದ ಮನೆಯವರ ಕಾಲಿಗೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಕುಣಿಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯ ಉರ್ಕೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ಸಂಜೆವೇಳೆ ಉರ್ಕೆಹಳ್ಳಿ ಗ್ರಾಮದ ಗಂಗಯ್ಯ ಎಂಬುವರ ಮನೆಗೆ ಬೈಕ್ ನನಲ್ಲಿ ಬಂದ ಇಬ್ಬರು ಅಪರಿಚಿತರು, ಕುಡಿಯಲು ನೀರು ಕೇಳಿದರು, ನೀರು ತರಲು ಗಂಗಯ್ಯನ ಸೊಸೆ ಮನೆಯೊಳಗೆ ಹೋದಾಗ ಏಕಾಏಕಿ ಒಳನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಬ್ಯಾಗುಗಳನ್ನು ಹುಡುಕಾಡುತ್ತಿದ್ದರು, ಗಾಬರಿಗೊಂಡ ಸೊಸೆ ಪುಷ್ಪಲತ ಕೂಗಾಡಿದಾಗ ಬಂದೂಕು ತೋರಿಸಿ ಬೆದರಿಸಿದ ದುಷ್ಕರ್ಮಿಗಳು, ಬ್ಯಾಗ್ ನಲ್ಲಿದ್ದ ಮೂರು ಲಕ್ಷ ರೂ. ನಗದನ್ನು ದೊಚಿ ಪರಾರಿಯಾಗಲು ಮುಂದಾದರು, ಸೊಸೆ ಕೂಗಾಟ ಕೇಳಿ ಗಂಗಯ್ಯ ದುಷ್ಕರ್ಮಿಗಳನ್ನು ಹಿಡಿಯಲು ಬಂದಾಗ ಆತನಿಗೂ ಬೆದರಿಸಿದ ದುಷ್ಕರ್ಮಿಗಳು ಪರಾರಿಯಾಗಲು ಯತ್ನಿಸಿದ್ದು ಹಿಂಬಾಲಿಸಿದ ಗಂಗಯ್ಯ ನ ಮೇಲೆ ಗುಂಡು ಹಾರಿಸಿದ ಪರಿಣಾಮ ಆತನ ಕಾಲಿಗೆ ಗಾಯವಾಗಿದೆ, ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕೇಂದ್ರ ವಲಯ ಡಿಐಜಿ ರವಿಕಾಂತೇಗೌಡ, ಎಸ್ ಪಿ ಅಶೋಕ್, ಎಸ್ ಪಿ ಮರಿಯಪ್ಪ, ಡಿವೈಎಸ್ ಪಿ ಒಂಪ್ರಕಾಶ್, ಸಿಪಿಐ ನವೀನ್ ಗೌಡ ಸಿಬ್ಬಂದಿ ಭೇಟಿ ನೀಡಿ ತಡರಾತ್ರಿವರೆಗೂ ಪರಿಶೀಲನೆ ನಡೆಸಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!