ಬೈಕ್ ವೀಲಿಂಗ್ ಮಾಡುತ್ತಿದ್ದ 7 ಪುಂಡರ ಬಂಧನ

37

Get real time updates directly on you device, subscribe now.


ಕೊರಟಗೆರೆ: ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ರಾಜ್ಯ ಹೆದ್ದಾರಿಗಳಲ್ಲಿ ಕಂಡು ಬರುತ್ತಿದ್ದ ಬೈಕ್ ವೀಲಿಂಗ್ ಮತ್ತು ಕರ್ಕಶ ವಾಹನಗಳ ಶಬ್ದದಿಂದ ಬೇಸರ ವ್ಯಕ್ತಪಡಿಸಿದ್ದ ಸಾರ್ವಜನಿಕರು, ಇವರಿಂದ ಮಾಹಿತಿ ತಿಳಿದ ಬಳಿಕ ಕೊರಟಗೆರೆ ಪೊಲೀಸರ ಕಾರ್ಯಾಚರಣೆಯಿಂದ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ 7ಮಂದಿ ಪುಂಡರನ್ನು ಬಂಧಿಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ತುಮಕೂರು ಮಾರ್ಗದ ಅಜ್ಜಿಹಳ್ಳಿ ಸಮೀಪ ರಾತ್ರಿ ಸಮಯದಲ್ಲಿ ಬೈಕ್ ವೀಲಿಂಗ್ ಮಾಡಿದ್ದರು, ಪ್ರತಿನಿತ್ಯ ಕರ್ಕಶ ವಾಹನಗಳ ಶಬ್ದದಿಂದ ಬೇಸೆತ್ತ ಸಾರ್ವಜನಿಕರು ಮಾಹಿತಿ ನೀಡಿದ ಬಳಿಕ ಕೊರಟಗೆರೆ ಪೊಲೀಸ್ ಠಾಣೆಯ ಅಧಿಕಾರಿಗಳಾದ ಸಿಪಿಐ ಅನಿಲ್ ಮತ್ತು ಪಿ ಎಸ್ ಐ ಮಂಜುನಾಥ್ ಅವರ ತಂಡ ಬುಧವಾರ ಬೆಳಗ್ಗೆ ನಡೆಸಿದ ಕಾರ್ಯಚರಣೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡರನ್ನು ಎಡೆಮುರಿ ಕಟ್ಟಿ ಮತ್ತು ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಯಿದ್ ಖಾನ್ (19), ಸಲ್ಮಾನ್ (20), ಸಾದತ್ ಪಾಷ (20), ನಸೀಬ್ ಉಲ್ಲಾ (19), ಸಾದಿಕ್ ಪಾಷ (19), ಫರ್ದೀನ್ ಖಾನ್(21), ಇಸ್ಮಾಯಿಲ್ (20) ಬಂಧಿತ ಆರೋಪಿಗಳಾಗಿದ್ದಾರೆ, ಈ ಪುಂಡರು ಮಾಡುವ ಪುಂಡಾಟಿಕೆಯಿಂದ ಅಮಾಯಕರ ಜೀವಕ್ಕೆ ಕುತ್ತು ಬರಬಹುದು, ಜೊತೆಗೆ ವಾಹನ ಸವಾರರಿಗೆ ಸೈಡ್ ಕೊಡದೆ ರಸ್ತೆ ಮಧ್ಯದಲ್ಲಿ ವೀಲಿಂಗ್ ಮಾಡುತ್ತಾ ಪುಂಡಾಟ ಮೆರೆದಿದ್ದರು ಮತ್ತು ವಾಹನ ವಶಕ್ಕೆ ಪಡೆದಿದ್ದು 18 ವರ್ಷದ ಒಳಗಿನ ಮಕ್ಕಳಿಗೆ ಬೈಕ್ ಕೊಡದಂತೆ ಎಚ್ಚರ ವಹಿಸಿ, ವಾಹನ ನೀಡಿದ್ದು ಕಂಡುಬಂದಲ್ಲಿ ಪೋಷಕರನ್ನು ಕಾನೂನಿನ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದು, ಕೊರಟಗೆರೆ ಪೊಲೀಸರ ಕಾರ್ಯಾಚರಣೆಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಮತ್ತು ಪೊಲೀಸ್ ಉಪಾಧೀಕ್ಷಕ ರಾಮಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಚ್ಚೆತುಕೊಳ್ಳಬೇಕಿದೆ ಪೋಷಕರು
ಯುವಕರ ಈ ವೀಲಿಂಗ್ ಪುಂಡಾಟ ನಿಲ್ಲಬೇಕಾದರೆ ಪೋಷಕರ ಪಾತ್ರ ಬಹಳ ದೊಡ್ಡದಿರುತ್ತದೆ, ಮಕ್ಕಳು ಕೇಳಿದ್ದನ್ನೆಲ್ಲ ಕೊಡುವ ಮೊದಲು ಅದರ ಅವಶ್ಯಕತೆಯನ್ನು ಮೊದಲು ತಿಳಿದುಕೊಳ್ಳಿ, ಇನ್ನು ಮಕ್ಕಳಿಗೆ ವಾಹನ ಕೊಡುವ ಮೊದಲು ಕಾನೂನಿನ ಅರಿವು ತಿಳಿಸಿ 18 ವರ್ಷ ತುಂಬಿದ ಮೇಲೆ ವಾಹನ ಚಲಾಯಿಸಬೇಕು, ನಂತರ ವೀಲಿಂಗ್ ಮಾಡದಂತೆ, ಪುಂಡಾಟಿಕೆ ನಡೆಸದಂತೆ, ಸಾರಿಗೆ ಇಲಾಖೆಯ ನಿಯಮಗಳನ್ನು ಪಾಲನೆ ಮಾಡುವಂತೆ ತಿಳಿಸುವುದು ಪೋಷಕರ ಕರ್ತವ್ಯವಾಗಿರುತ್ತದೆ, ಇಂತಹ ಘಟನೆಗಳು ಬೆಳಕಿಗೆ ಬಂದಲ್ಲಿ ವಾಹನದ ಮಾಲೀಕನನ್ನು ಕಾನೂನಿನ ಶಿಕ್ಷೆಗೆ ಒಳಪಡಿಸಲಾಗುತ್ತದೆ, ಆದ್ದರಿಂದ ಯಾವುದೇ ಯುವಕ- ಯುವತಿಯರು ಪುಂಡಾಟಿಕೆ ಮೆರೆಯುವುದಕ್ಕೂ ಮುಂಚೇ ಪೋಷಕರ ಕಷ್ಟ ತಿಳಿದುಕೊಳ್ಳಿ, ಕಾನೂನಿನ ಅರಿವಿನ ಬಗ್ಗೆ ಅರ್ಥೈಸಿಕೊಳ್ಳಿ ಎಂದಿದ್ದಾರೆ ಪೊಲೀಸ್ ಅಧಿಕಾರಿಗಳು.

Get real time updates directly on you device, subscribe now.

Comments are closed.

error: Content is protected !!