ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡ ನಾಶ

28

Get real time updates directly on you device, subscribe now.


ಕೊರಟಗೆರೆ: ಆಕಸ್ಮಿಕ ಬೆಂಕಿಗೆ ಅಡಿಕೆ ಹಾಗೂ ಬಾಳೆಯ ಗಿಡಗಳು ಸಂಪೂರ್ಣ ನಾಶವಾಗಿರುವ ಘಟನೆ ಕಟ್ಟೆ ಬಾರೆಯಲ್ಲಿ ನಡೆದಿದೆ, ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಸ್ಪಂದಿಸದ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹುಚ್ಚರಾಯನ ಪಾಳ್ಯ ಗ್ರಾಮದ ಉಮಾಶಂಕರಾಧ್ಯ ಅವರಿಗೆ ಸೇರಿದ ಕಟ್ಟೆ ಬಾರೆಯಲ್ಲಿರುವ ಕೋಡ್ಲಹಳ್ಳಿ ಸರ್ವೇ 90/2 ರಲ್ಲಿ ಸುಮಾರು ಬಂದು ಸಾವಿರಕ್ಕೂ ಅಧಿಕ ಅಡಿಕೆ ಹಾಗೂ ಬಾಳೆ ಗಿಡಗಳನ್ನ ಬೆಳೆಸಲಾಗಿತ್ತು, ಬುಧವಾರ ಸಂಜೆ 4 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ, ಬೆಂಕಿಯಲ್ಲಿ ಬಡ ರೈತನ ಸುಮಾರು 200 ಅಡಿಕೆ ಗಿಡ ಹಾಗೂ 200 ಬಾಳೆ ಗಿಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ನಾಶವಾಗಿದೆ, ಬಡ ರೈತನ ಅಡಿಕೆ, ಬಾಳೆ ಗಿಡಗಳು ಪಸಲಿಗೆ ಬರುವ ಮುಂಚ್ಚೆಯೇ ನಾಶವಾಗಿರುವುದು ಶೋಚನೀಯ ಸಂಗತಿ, ಸ್ಥಳಕ್ಕೆ ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ರೈತನಿಗೆ ಸೂಕ್ತ ಪರಿಹಾರ ನೀಡಬೇಕಿದೆ.

ಸ್ಥಳಕ್ಕೆ ಬಾರದ ಅಗ್ನಿಶಾಮಕ ತಂಡ
ಬೆಂಕಿ ತಗುಲಿದ ತಕ್ಷಣ ತೋಟದ ಮಾಲೀಕ ಅಗ್ನಿಶಾಮಕ ಕಚೇರಿಗೆ ದೂರವಾಣಿ ಕರೆ ಮಾಡಿದ್ದಾರೆ, ಕರೆಗೆ ಯಾರು ಸ್ಪಂದಿಸದೇ ಇರುವ ಕಾರಣ ಸ್ಥಳಕ್ಕೆ ಹೋಗಿ ನಡೆದ ಘಟನೆ ಬಗ್ಗೆ ತಿಳಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ, ನಮ್ಮಲ್ಲಿ ವಾಹನ ಇಲ್ಲ ಮಧುಗಿರಿಯಿಂದ ಬರುತ್ತೆ ಎಂದು ಕಾಲಹರಣ ಮಾಡಿದ್ದಾರೆ, ನಂತರ ಸ್ಥಳೀಯರ ಸಹಾಯದಿಂದ ಸೊಪ್ಪು ಹಾಗೂ ನೀರಿನಿಂದ ಬೆಂಕಿ ನಂದಿಸಿದ್ದಾರೆ.

ರೈತ ಉಮಾಶಂಕರಾಧ್ಯ ಮಾತನಾಡಿ, ನಾನು ಬಡರೈತನಾಗಿದ್ದು ಜೀವನ ನಡೆಸಲು ಸುಮಾರು 1 ಸಾವಿರಕ್ಕೂ ಅಧಿಕ ಅಡಿಕೆ, ಬಾಳೆ ಹಾಕಲಾಗಿತ್ತು, ಫಸಲು ಬರುವ ಮುಂಚೆಯೇ ಬೆಂಕಿಗೆ ಸಿಲುಕಿ ಸಂಪೂರ್ಣ ನಾಶವಾಗಿದೆ, ಅಗ್ನಿಶಾಮಕ ಅಧಿಕಾರಿಗಳಿಗೆ ತಿಳಿಸಿದರೂ ಸ್ಥಳಕ್ಕೆ ಬಾರದೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ, ಅಡಿಕೆ ಬಾಳೆ ಗಿಡಗಳನ್ನ ಕಳೆದುಕೊಂಡಿದ್ದೇನೆ, ತೋಟಗಾರಿಕೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದರು.

Get real time updates directly on you device, subscribe now.

Comments are closed.

error: Content is protected !!