ಹುಳಿಯಾರು: ಮುಷ್ಕರದ ಕಾರಣ ಕೆಎಸ್ಆರ್ಟಿಸಿ ಬಸ್ಗಳು ಇಲ್ಲದಿರುವುದರಿಂದ ಯುಗಾದಿ ಹಬ್ಬಕ್ಕೆ ತಮ್ಮತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ತೀವ್ರವಾಗಿ ಸಮಸ್ಯೆ ಆಯಿತು. ಅಲ್ಲದೆ ಹೊಸದುರ್ಗ ಕಡೆಯ ಖಾಸಗಿ ಬಸ್ಗಳು ಟಾಪ್ ಲೋಡ್ ತುಂಬಿಕೊಂಡು ಸಂಚರಿಸಿದವು.
ಹೊಸದುರ್ಗ, ಬೆಲಗೂರು, ಶ್ರೀರಾಂಪುರ, ಹುಳಿಯಾರು ಸೇರಿದಂತೆ ವಿವಿಧ ಹಳ್ಳಿಗಳಿಂದ ಉದ್ಯೋಗ ಅರಸಿ ಹೋಗಿರುವವರು ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹಬ್ಬಹರಿದಿನವಲ್ಲದೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಹಾಗಾಗಿಯೇ ಹೊಸದುರ್ಗದಿಂದ ಹುಳಿಯಾರು ಮಾರ್ಗವಾಗಿ ನಿತ್ಯ ನೂರಾರು ಸರ್ಕಾರಿ ಬಸ್ ಸೇವೆ ಕಲ್ಪಿಸಲಾಗಿತ್ತು. ಆದರೆ ಕಳೆದ ವಾರದಿಂದ ಸರ್ಕಾರಿ ಬಸ್ ನೌಕರರ ಮುಷ್ಕರದಿಂದ ಸರ್ಕಾರಿ ಬಸ್ ಬಾರದೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಪರದಾಟ ಸಾಮಾನ್ಯವಾಗಿತ್ತು.
ಈಗ ವರ್ಷದ ಪ್ರಮುಖ ಹಬ್ಬಗಳಲ್ಲಿ ಒಂದಾದ ಯುಗಾದಿ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿಯೇ ಖಾಸಗಿ ಬಸ್ ಅವಲಂಬನೆ ಅನಿವಾರ್ಯವಾಗಿತ್ತು. ಹಾಗಾಗಿಯೇ ಬೆಂಗಳೂರಿನಿಂದಲೇ ಖಾಸಗಿ ಬಸ್ಗಳು ಟಾಪ್ ಲೋಡ್ ಆಗಿ ಬರುತ್ತಿದ್ದವು. ಕೆಲ ಪ್ರಯಾಣಿಕರು ಹುಳಿಯಾರು, ಚಿಕ್ಕನಾಯಕನಹಳ್ಳಿ, ಶ್ರೀರಾಂಪುರದಲ್ಲಿ ಇಳಿದರೂ ಸಹ ಹಬ್ಬದ ಸಂತೆಗೆ ಬಂದವರಿಂದ ಪುನಃ ಟಾಪ್ ಲೋಡ್ ಆಗಿ ಹೋಗುತ್ತಿದ್ದವು.
ಕೆಲ ಊರುಗಳಿಗೆ ಖಾಸಗಿ ಬಸ್ ವ್ಯವಸ್ಥೆಯೂ ಇಲ್ಲದಿದ್ದರಿಂದ ಹಬ್ಬದ ಸಾಮಗ್ರಿಗಳ ಖರೀದಿಗೆ ಪಟ್ಟಣಕ್ಕೆ ಬರಲು ಹಳ್ಳಿಯ ಜನರು ಬೈಕ್ಗಳು, ಆಟೊಗಳನ್ನು ಅವಲಂಬಿಸಿದ್ದರು. ಪರಿಣಾಮ ಹುಳಿಯಾರು ಪಟ್ಟಣದ ಪ್ರಮುಖ ಬೀದಿಗಳಾದ ರಾಜ್ಕುಮಾರ್ ರಸ್ತೆ, ಬ್ರಾಹ್ಮಣರ ಬೀದಿ, ರಾಮಗೋಪಾಲ್ ಸರ್ಕಲ್, ಬಸ್ ನಿಲ್ದಾಣಗಳಲ್ಲಿ ಟ್ರಾಫಿಕ್ ಸಮಸ್ಯೆ ಕಂಡು ಬಂತು.
ಯುಗಾದಿ ಹಬ್ಬದ ಎಫೆಕ್ಟ್- ಖಾಸಗಿ ಬಸ್ಗಳು ಭರ್ತಿ
Get real time updates directly on you device, subscribe now.
Prev Post
Next Post
Comments are closed.