ಕುಣಿಗಲ್: ಬೆಂಗಳೂರು- ಮಂಗಳೂರು ನಡುವೆ ಕುಣಿಗಲ್ ಪಟ್ಟಣದ ಮೂಲಕ ರೈಲ್ವೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಶುಕ್ರವಾರ ಮಧ್ಯಾಹ್ನ ಅಳವಡಿಸಲಾಗಿರುವ ಅಧಿಕ ಸಾಮರ್ಥ್ಯದ ವಿದ್ಯುತ್ ಲೈನ್ ಶುಕ್ರವಾರ ಮಧ್ಯಾಹ್ನ ತುಂಡಾದ ಕಾರಣ ಈ ಮಾರ್ಗದ ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯಯವಾಗಿತ್ತು.
ಬೆಂಗಳೂರು- ಮಂಗಳೂರು ನಡುವೆ ವಿದ್ಯುತ್ ರೈಲ್ವೆ ಸಂಚಾರಕ್ಕೆ ವಿದ್ಯುದೀಕರಣ ಕಾಮಗಾರಿ ಕಳೆದ ಕೆಲ ತಿಂಗಳಿನಿಂದ ತ್ವರಿತವಾಗಿ ನಡೆಯುತ್ತಿದೆ, ಈ ಮಧ್ಯೆ ಶುಕ್ರವಾರ ಮಧ್ಯಾಹ್ನ ಪಟ್ಟಣದ ಬೇಗೂರು- ಮಲ್ಲಾಘಟ್ಟ ಸಮೀಪ ಅಧಿಕ ಸಾಮರ್ಥ್ಯದ ವಿದ್ಯುತ್ ಲೈನ್ ತುಂಡಾಗಿ ರೈಲ್ವೆ ಹಳಿ ಮೇಲೆ ನೇತಾಡುತ್ತಿದ್ದು, ಇದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ದುರಸ್ತಿ ಕಾರ್ಯ ನಿರ್ವಹಿಸಿದರು, ಇದರಿಂದ ಈ ಮಾರ್ಗದಲ್ಲಿ ಹಾಸನದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ರೈಲು ಸಂಚಾರದಲ್ಲಿ ಕೆಲಕಾಲ ವಿಳಂಬವಾಯಿತು.
Get real time updates directly on you device, subscribe now.
Prev Post
Next Post
Comments are closed.