ರಾಗಿ ಖರೀದಿ ಕೇಂದ್ರದಲ್ಲಿ ರೈತರ ಪರದಾಟ

19

Get real time updates directly on you device, subscribe now.


ಕುಣಿಗಲ್: ಒಂದು ಕಡೆ ಸಿಬ್ಬಂದಿ ಕೊರತೆ ಮತ್ತೊಂದು ಕಡೆ ಮೂಲಭೂತ ಸೌಕರ್ಯದ ಕೊರತೆಯಿಂದ ಪಟ್ಟಣದ ಆರ್‌ಎಂಸಿ ಯಾರ್ಡ್‌ನಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಹಾಕಲು ತಂದಿರುವ ರೈತರು ಪರದಾಡುವಂತಾಗಿದ್ದು, ಸಂಬಂಧಪಟ್ಟವರು ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ರೈತರು ಮನವಿ ಮಾಡಿದ್ದಾರೆ.

ಮಾರ್ಚ್ 26,27, 28ರಂದು ಟೋಕನ್ ಪಡೆದಿದ್ದ ರೈತರು ರಾಗಿ ಹಾಕಲು ರಾಗಿಖರೀದಿಕೇಂದ್ರಕ್ಕೆ ಅಗಮಿಸಿದ್ದು ಸಿಬ್ಬಂದಿ ಕೊರತೆಯಿಂದ ರಾಗಿ ಖರೀದಿ ಕೇಂದ್ರದಲ್ಲಿ ವಿಳಂಬವಾಗುತ್ತಿದೆ, ಈ ಮಧ್ಯೆ ರಾಗಿ ತಂದು ಅರ್‌ಎಂಸಿ ಯಾರ್ಡ್ನ ವಿವಿಧೆಡೆ ಸಂಗ್ರಹಿಸಿರುವ ರೈತರು ಸಾಲುಸಾಲು ಮೂರು ರಜೆಯಿಂದಾಗಿ ತಂದಿರುವ ರಾಗಿ ಕಾಯಲು ಯಾರ್ಡ್‌ನಲ್ಲೆ ಮೂಲಭುತ ಸೌಕರ್ಯದ ಕೊರತೆ ನಡುವೆ ರಾತ್ರಿ ಸೊಳ್ಳೆ ಇತರೆ ಕ್ರಿಮಿಕೀಟಗಳ ನಡುವೆ ಪರದಾಡುತ್ತಾ ಕಾಲನೂಕುವಂತಾಗಿದೆ, ಈಬಗ್ಗೆ ಖರೀದಿ ಕೇಂದ್ರದ ಸಿಬ್ಬಂದಿಗೆ ಕೇಳಿದರೆ ಮೂವರು ಸಿಬ್ಬಂದಿ ಪೈಕಿ ಇಬ್ಬರನ್ನುಚುನಾವಣೆಗೆ ನಿಯೋಜಿಸಿದ್ದು ಒಬ್ಬರೆ ಖರೀದಿ ಕಾರ್ಯ ನಿರ್ವಹಿಸುತ್ತಿದ್ದು ಹೆಚ್ಚುವರಿ ಸಿಬ್ಬಂದಿ ನೀಡುವಂತೆ ಮನವಿ ಸಲ್ಲಿಸಿದ್ದರೂ ಯಾವುದೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ, ರೈತರಾದ ತಿಮಮ,ರಂಗಸ್ವಾಮಿ ಇತರರು, ಇಲ್ಲಿ ಸಮರ್ಪಕ ಬೆಳಕಿನ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ರೈತರು ಟೋಕನ್ ಪಡೆದು ರಾಗಿ ಹಾಕಲು ಕಾಯುತ್ತಾ ಕುಳಿತರೆ ಕೆಲ ಪ್ರಭಾವಿಗಳ ಕಡೆಯವರು ದಾಖಲೆ ತಂದು ಹಲವಾರು ಕ್ವಿಂಟಾಲ್ ರಾಗಿ ಹಾಕಿ ಹೋಗುತ್ತಾರೆ ಅವರಿಗೆ ಯಾವುದೇ ಕಾಯುವ ವ್ಯವಸ್ಥೆ ಇಲ್ಲ, ನಮ ಅಳಲು ಕೇಳುವವರು ಯಾರೂ ಇಲ್ಲ, ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಿ ನಿಯಮಾನುಸಾರವಾಗಿ ರಾಗಿ ಖರೀದಿ ಮಾಡುವ ಜೊತೆಯಲ್ಲಿ ಖರೀದಿ ಕೇಂದ್ರದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!