ಮಧುಗಿರಿ: ದೇವೇಗೌಡರು ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಧಿಕಾರಕ್ಕಾಗಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದರು.
ಪಟ್ಟಣದ ಸ್ವಗೃಹದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರೆದಿದ್ದ ಮುಖಂಡರ, ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವೇಗೌಡರು ನಾನು ಮುಂದಿನ ಜನದಲ್ಲಿ ಹುಟ್ಟಿದರೆ ಮುಸಲಾನನಾಗಿ ಹುಟ್ಟಬೇಕು, ಇದೇ ನರೇಂದ್ರ ಮೋದಿ ದೇಶದ ಪ್ರಧಾನಿ ಆದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು, ಆದರೆ ಇಂದು ಅದೇ ಗೌಡರು ಅಧಿಕಾರಕ್ಕಾಗಿ ಕೋಮುವಾದಿಗಳ ಜೊತೆ ಕೈಜೋಡಿಸಿ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.
ಹಾಸನ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಿದ್ದಾರೆ, ಇಂಥವರಿಗೆ ಪ್ರಬುದ್ಧ ಮತದಾರ ತಕ್ಕ ಪಾಠ ಕಲಿಸಲಿದ್ದಾರೆ, ದೇವೇಗೌಡರು ಪ್ರಸ್ತುತ ಜಾತಿವಾದಿಯಲ್ಲ, ಕುಟುಂಬವಾದಿ ಎಂದು ಟೀಕಿಸಿದರು.
ಎಂಎಲ್ಸಿ ರಾಜೇಂದ್ರ ನನ್ನ ಪುತ್ರನನ್ನು ಸೋಲಿಸಿ ಎಂದು ದೇವೇಗೌಡರು ಕಣ್ಣೀರು ಸುರಿಸಿದ್ರು, ಮತದಾರರು ಕಣ್ಣೀರಿಗೆ ಬೆಲೆ ಕೊಡದೆ ಜನಪರವಾಗಿ ಕೆಲಸ ಮಾಡಿದವರನ್ನು ಆಯ್ಕೆ ಮಾಡಿದ್ದಾರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರು ಸೋಲಿಸಲು ವಿ.ಸೋಮಣ್ಣ, ಜಿ.ಎಸ್.ಬಸವರಾಜು ಮತದಾರರಲ್ಲಿ ಮನವಿ ಮಾಡುತ್ತಿದ್ದರು, ಇಂದು ಇದೇ ದೇವೇಗೌಡರು ಅಕ್ಕಪಕ್ಕದಲ್ಲಿ ಕೂಡಿಸಿಕೊಂಡು ನನ್ನನ್ನು ಸೋಲಿಸಿದವರನ್ನು ಸೋಲಿಸಿ ಎಂದು ಹೇಳುತ್ತಿದ್ದಾರೆ ಎಂದರು.
ರೈತರ ಸಾಲ ಮನ್ನಾ ಮಾಡಿ ಎಂದರೆ ಪ್ರಧಾನಿ ನಮ ದೇಶ ದಿವಾಳಿಯಾಗುತ್ತದೆ ಎಂದವರು ಅದೇ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ 10 ಸಾವಿರ ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ, ಆಗ ದೇಶ ದಿವಾಳಿ ಯಾಗಲಿಲ್ಲವೇ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅವರು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ, ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು, ಮುಂದಿನ ದಿನಗಳಲ್ಲಿ ಮಧುಗಿರಿ ತಾಲೂಕು ಪಟ್ಟಣ ಸೇರಿ ಹಳ್ಳಿಗಳಿಗೂ 10,000 ನಿವೇಶನ ಕೊಡಲು ಪ್ರಯತ್ನ ಮಾಡುತ್ತಿದ್ದು ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡುತ್ತೇನೆ ಎಂದರು.
ಎಂಟು ಕ್ಷೇತ್ರಗಳ ಪೈಕಿ ನಮ ಮಧುಗಿರಿ ಕ್ಷೇತ್ರದಲ್ಲಿ ಎಸ್‌ಪಿಎಂ ಅವರಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದ ಹನುಮೇಗೌಡ ಮಾತನಾಡಿ ನಾನು ಕಳೆದ ಸಂಸತ್ತಿನಲ್ಲಿ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಲೋಕಸಭೆಯಲ್ಲಿ ಒತ್ತಾಯಿಸ್ದೆಿ, ಆದರೆ ಕಳೆದ ಬಾರಿ ಸಂಸತ್ ಸದಸ್ಯರಾಗಿದ್ದ ಜಿ.ಎಸ್.ಬಸವರಾಜು ಒಂದು ಬಾರಿಯೂ ಭಾರತ ರತ್ನದ ಬಗ್ಗೆ ಕೇಳಲಿಲ್ಲ, ಜಿಲ್ಲೆಯಲ್ಲಿ ಇವರ ಅಭಿವೃದ್ಧಿ ಶೂನ್ಯವಾಗಿದೆ, ಜಿಲ್ಲೆಗೆ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಬಿಜೆಪಿ ಅಭ್ಯರ್ಥಿ ಸೋಮಣ್ಣ ನೂರು ದಿನಗಳಲ್ಲಿ ಕೇಂದ್ರದಿಂದ 10,000 ಕೋಟಿ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿಪಡಿಸುವೆ ಎಂದು ಹೇಳಿದ್ದಾರೆ, ಅದೇ ಜಿಲ್ಲೆಯಿಂದ ಐದು ಸಲ ಗೆದ್ದವರಿಂದಲೇ ಏನು ಮಾಡಲಾಗಿಲ್ಲ, ಇನ್ನು ಇವರಿಗೆ ಕ್ಷೇತ್ರದ ಅರಿವಿಲ್ಲ, ಇಂತಹವರಿಂದ ಜಿಲ್ಲೆಯ ಅಭಿವೃದ್ಧಿಯಾಗುತ್ತಾ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ , ಮಾಜಿ ಜಿಪಂ ಅಧ್ಯಕ್ಷರಾದ ಶಾಂತಲಾ ರಾಜಣ್ಣ , ಜಿ.ಜೆ.ರಾಜಣ್ಣ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಮುಖಂಡರಾದ ಶಶಿಹುಲಿಕುಂಟೆ ಮಠ್, ಎಂ.ಎಸ್.ಮಲ್ಲಿಕಾರ್ಜುನಯ್ಯ, ಆದಿನಾರಾಯಣ ರೆಡ್ಡಿ ,ಗೋಪಾಲಯ್ಯ, ತುಂಗೋಟಿ ರಾಮಣ್ಣ, ಬಿ.ನಾಗೇಶ್ ಬಾಬು, ಚೌಡಮ, ಪಿ.ಸಿ.ಕೃಷ್ಣಾರೆಡ್ಡಿ , ಪ್ರಮೀಳಮ, ಇಂದಿರಾ ದೇನಾ ನಾಯ್ಕ , ಸುರ್ವಣಮ, ಪಿ.ಟಿ.ಗೋವಿಂದಯ್ಯ, ಡಿ.ಜಿ.ಶಂಕರನಾರಾಯಣ ಶೆಟ್ಟಿ, ಕಲ್ಲಹಳ್ಳಿ ದೇವರಾಜು, ವಿಜಯ್ ಕುಮಾರ್ ಜೈನ್ ಮತ್ತಿತರರು ಇದ್ದರು.
Comments are closed.