: ನಗರದ ವಾಲ್ಮೀಕಿ ಸನಿವಾಸ ಪೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಟಿ.ಎಸ್.ಗೀತಾ ಅವರು ಹೃದಯಾಘಾತದಿಂದ ನಿ‘ನರಾಗಿದ್ದಾರೆ.
ಗ್ರಾಮೀಣ ಪ್ರದೇಶದಿಂದ ಬರುವ ಬಡ ವಿದ್ಯಾರ್ಥಿಗಳೇ ಹೆಚ್ಚು ಅಭ್ಯಾಸ ಮಾಡುತ್ತಿದ್ದ ವಾಲ್ಮೀಕಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಟಿ.ಎಸ್.ಗೀತಾ ಅವರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು, ಪ್ರತಿಯೊಬ್ಬ ವಿದ್ಯಾರ್ಥಿಗೂ ತಾವು ಮಾಡುವ ಪಾಠ ಅರ್ಥ ಮಾಡಿಸುತ್ತಿದ್ದರು, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೋಸ್ಕರ ಇಲ್ಲಿನ ಆಡಳಿತ ಮಂಡಳಿ ನಡೆಸುತ್ತಿದ್ದ ರಾತ್ರಿಯ ತರಗತಿ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ. ಇವರ ನಿಧನದಿಂದಾಗಿ ಒಬ್ಬ ಉತ್ತಮ ಶಿಕ್ಷಕಿಯನ್ನು ಕಳೆದುಕೊಂಡತಾಗಿದ್ದು ಇವರ ಸಾವಿನಿಂದ ಶಾಲೆಯ ಬೋಧಕ ಮತ್ತು ಬೋಧಕೇತರರು, ಬಂಧು ಬಳಗ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳಿಗೆ ನಷ್ಟವಾಗಿದೆ. ಇವರ ಅಂತ್ಯ ಸಂಸ್ಕಾರ ಗಾರ್ಡನ್ರಸ್ತೆಯ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಶಿಕ್ಷಕಿ ಗೀತಾ ನಿಧನ
Get real time updates directly on you device, subscribe now.
Prev Post
Next Post
Comments are closed.