ಕೊರಟಗೆರೆ: ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಚಿರತೆಯು ಆಹಾರ ಹರಸಿ ಬಂದ ಸಂದರ್ಭದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ಚಿರತೆ ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾಮದಲ್ಲಿ ಸುಮಾರು ತಿಂಗಳ ಹಿಂದೆ ಒಂದು ಚಿರತೆ ಇದೇ ಗ್ರಾಮದಲ್ಲಿ ಬೋನಿಗೆ ಬಿದ್ದಿತ್ತು, ನಂತರ ಚಿರತೆಗಳು ಅದೇ ಭಾಗದಲ್ಲಿ ಮತ್ತೆ ಕಾಣಿಸಿಕೊಂಡು ಮೇಕೆ ಸೇರಿದಂತೆ ಇನ್ನಿತರೆ ಪ್ರಾಣಿಗಳ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡಿತ್ತು.
ಗ್ರಾಮಸ್ಥರು ಈ ಘಟನೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗೆ ತಿಳಿಸಿ ಮನವಿ ಮಾಡಿಕೊಂಡ ಕೂಡಲೇ ಸ್ಥಳ ಪರಿಶೀಲಿಸಿ ಸೂಕ್ತ ಸ್ಥಳದಲ್ಲಿ ಇಟ್ಟಿದ್ದ ಬೋನಿಗೆ ಸೋಮವಾರ ರಾತ್ರಿ ಆಹಾರ ಹರಸಿ ಬಂದ ಚಿರತೆ ಬಿದ್ದಿದೆ, ಸ್ಥಳೀಯ ರೈತರು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಇನ್ನೂ ಹಂಚಿಹಳ್ಳಿ ಬೆಟ್ಟದಲ್ಲಿ ಇನ್ನೆರಡು ಚಿರತೆ ಇವೆ, ತಮ್ಮ ಜಮೀನುಗಳಿಗೆ ಹೋಗುವುದಕ್ಕೆ ಭಯಪಡವಂತಾಗಿದೆ, ಕೂಡಲೇ ಹಿಡಿಯುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಅಧಿಕಾರಿಗಳು ಗ್ರಾಮಸ್ಥರಿಗೆ ಯಾವುದೇ ಆತಂಕ ಪಡದೇ ಜಮೀನುಗಳ ಕಡೆ ಹೋಗುವವರು ಒಬ್ಬಂಟಿಯಾಗಿ ಹೋಗುವುದನ್ನು ನಿಲ್ಲಿಸಿ ಗುಂಪು ಗುಂಪಾಗಿ ಓಡಾಡುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಮಾತನಾಡಿ, ನಮ್ಮ ಹಂಚಿಹಳ್ಳಿ ಗ್ರಾಮದಲ್ಲಿ ಪದೇ ಪದೇ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ ಮೂಕ ಪ್ರಾಣಿಗಳನ್ನು ಪ್ರತಿದಿನ ಬಲಿ ಪಡೆಯುತ್ತಿದ್ದಾವೆ, ಚಿರತೆಗಳು ಗ್ರಾಮದಲ್ಲಿ ರಾತ್ರಿಯಾದರೆ ಹೊರಗೆ ಬರುವುದೇ ಕಷ್ಟಕರವಾಗಿದೆ, ಮಕ್ಕಳು ವಯಸ್ಸಾದ ಹಿರಿಯರು ಭಯ ಭೀತಿಯಲ್ಲಿ ಓಡಾಡುತ್ತಿದ್ದಾರೆ, ಈಗಾಗಲೇ ಒಂದು ತಿಂಗಳ ಹಿಂದೆ ಒಂದು ಚಿರತೆ ಬೋನಿಗೆ ಬಿದ್ದಿತ್ತು, ಇದೀಗ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ, ನಮ್ಮ ಗ್ರಾಮದ ಬಳಿ ಇರುವ ಬೆಟ್ಟದಲ್ಲಿ ಸುಮಾರು ನಾಲ್ಕರಿಂದ ಐದು ಚಿರತೆ ಕಾಣಿಸಿಕೊಂಡಿವೆ, ಅದರಲ್ಲಿ ಎರಡು ಚಿರುತೆಗಳನ್ನು ಈಗ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದುವೆ, ಆದಷ್ಟು ಬೇಗ ಉಳಿದ ಚಿರತೆಗಳನ್ನು ಹಿಡಿದು ಗ್ರಾಮಸ್ಥರು ನೆಮ್ಮದಿಯಿಂದ ತಮ್ಮ ಜಮೀನುಗಳಿಗೆ ಓಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇಳಿಕೊಂಡರು.
Comments are closed.