ತುಮಕೂರು: ತುಮಕೂರು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಶುಕ್ರವಾರ ನಗರದ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ತುಮಕೂರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಕೆ.ಹರ್ಷ ಕುಮಾರ್ ಚಾಲನೆ ನೀಡಿದರು.
ಚುನಾವಣಾ ಪರ್ವದೇಶದ ಗರ್ವ, ನನ್ನ ಮತ ನನ್ನಹಕ್ಕು, ಏಪ್ರಿಲ್ 26 ರಂದು ತಪ್ಪದೇ ಮತ ಚಲಾಯಿಸಿ ಎಂಬ ಘೋಷವಾಕ್ಯಗಳನ್ನು ಕೂಗುತ್ತಾ, ಚುನಾವಣಾ ಪ್ಲೇ ಕಾರ್ಡ್ಗಳನ್ನು ಹಿಡಿದು ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.
ಯಲ್ಲಾಪುರದಿಂದ ಆರಂಭಗೊಂಡ ಸೈಕಲ್ ಜಾಥಾ ಅರಕೆರೆ, ತಿಪ್ಪನಹಳ್ಳಿ, ರಾಮಗೊಂಡನಹಳ್ಳಿ ಮಾರ್ಗವಾಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ನೌಕರರು ಹಾಗೂ ಸಾರ್ವಜನಿಕರು ಫ್ಲೇ ಕಾರ್ಡ್ಗಳನ್ನು ಹಿಡಿದು ಮತದಾನದ ಘೋಷ ವಾಕ್ಯಗಳನ್ನು ಕೂಗುತ್ತಾ ಚಿಕ್ಕ ತೊಟ್ಟಿಲು ಕೆರೆ ಗ್ರಾಮ ಪಂಚಾಯಿತಿ ತಲುಪಿತು.
ಈ ವೇಳೆ ಕಾರ್ಯ ನಿರ್ವಾಹಕ ಅಧಿಕಾರಿ ಮಾತನಾಡಿ, ಮತದಾನ ನಮ್ಮ ಹಕ್ಕು, ಅದನ್ನು ಅರ್ಹ ಮತದಾರರು ಮುಖ್ಯವಾಗಿ ಯುವ ಮತದಾರರು ಮತದಾನದ ಮಹತ್ವ ಅರಿತು ತಪ್ಪದೇ ಏಪ್ರಿಲ್ 26 ರಂದು ಮತ ಚಲಾಯಿಸಬೇಕಾಗಿದೆ, ಆ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೈಕಲ್ ಜಾಥಾ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಜಾಥಾದಲ್ಲಿ ತಾಲ್ಲೂಕು ಯೋಜನಾಧಿಕಾರಿಗಳು, ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ತಾಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
Comments are closed.