ಶುದ್ಧ ಘಟಕಗಳಲ್ಲಿ ನಿತ್ಯ ನೀರು ವ್ಯರ್ಥ

26

Get real time updates directly on you device, subscribe now.


ಕುಣಿಗಲ್: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರು ಘಟಕದಲ್ಲಿ ಸಾವಿರಾರು ಲೀಟರ್ ನೀರು ವ್ಯರ್ಥವಾಗಿ ಪೋಲಾಗುತ್ತಿದ್ದು ಈ ನೀರಿನ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪುರಸಭೆ ಗಮನ ಹರಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ, ಈ ಘಟಕಗಳಲ್ಲಿ ದಿನವಹಿ ಸಾವಿರಾರು ಲೀಟರ್ ನೀರು ಶುದ್ಧೀಕರಿಸಲು ಪೂರೈಕೆ ಮಾಡಲಾಗುತ್ತಿದ್ದು, ಇದರಲ್ಲಿ ಶೇ.30 ರಿಂದ ನಲವತ್ತರಷ್ಟು ಶುದ್ಧ ನೀರು ಬಳಕೆಗೆ ಯೋಗ್ಯವಾಗಿ ಉಳಿದಂತೆ ಶೇ.60 ರಷ್ಟು ಗಡಸು ನೀರು ವ್ಯರ್ಥವಾಗಿ ಚರಂಡಿ ಸೇರುತ್ತಿದೆ, ಶೇ.30- 40 ರಷ್ಟು ಶುದ್ಧ ನೀರು ಕಾಲ ಕಾಲಕ್ಕೆ ಫಿಲ್ಟರ್ ಬದಲಾವಣೆ ಮಾಡಿದರೆ ಮಾತ್ರ ಇಷ್ಟು ನೀರು ಕುಡಿಯಲು ಬಳಕೆಯಾಗಲಿದ್ದು ಫಿಲ್ಟರ್ ನಿರ್ವಹಣೆ ಮಾಡದೆ ಇದ್ದಲ್ಲಿ ಗಡಸು ನೀರು ಹೊರಬರುವ ಪ್ರಮಾಣ ಹೆಚ್ಚುತ್ತದೆ, ಬಹುತೇಕ ಎಲ್ಲಾ ಶುದ್ಧ ಕುಡಿಯುವ ನೀರು ಘಟಕಗಳಲ್ಲಿ ಗಸು ನೀರನ್ನು ನೇರವಾಗಿ ಚರಂಡಿಗೆ ಬಿಡುವ ಪರಿಣಾಮ ದಿನವಹಿ ಸಾವಿರಾರು ಲೀಟರ್ ನೀರು ವ್ಯರ್ಥವಾಗುತ್ತಿದೆ, ದಿನಾಲೂ ವ್ಯರ್ಥವಾಗುವ ನೀರನ್ನು ಕಟ್ಟಡ ನಿರ್ಮಾಣ, ಕಾಮಗಾರಿ ನಿರ್ವಹಣೆ ವೇಳೆ ಕ್ಯೂರಿಂಗ್, ತೋಟಗಳ ನಿರ್ವಹಣೆ ಸೇರಿದಂತೆ ಬಟ್ಟೆ ಒಗೆಯಲು ಇತರೆ ಉದ್ದೇಶಕ್ಕೆ ಬಳಕೆ ಮಾಡಲು ಸಾಧ್ಯತೆ ಇದೆ, ಆದರೆ ಪುರಸಭೆಯ ಯಾವುದೇ ವಿಭಾಗದ ಸಿಬ್ಬಂದಿ ವ್ಯರ್ಥವಾಗುವ ನೀರಿನ ಸದ್ಬಳಕೆಗೆ ಚಿಂತನೆ ನಡೆಸುತ್ತಿಲ್ಲ, ಒಂದೆ ನೀರು ಮಿತವಾಗಿ ಬಳಸಿ ಎಂದು ಹೇಳುವ ಪುರಸಭೆಯೆ ದಿನವಹಿ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಲಕ್ಷಾಂತರ ಲೀಟರ್ ನೀರು ಪೋಲು ಮಾಡುತ್ತಿದೆ, ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಪೋಲಾಗುವ ನೀರನ್ನು ಸಮೀಪದಲ್ಲೆ ಶೇಖರಿಸಿ ಆ ನೀರನ್ನು ಇತರೆ ಉದ್ದೇಶಕ್ಕೆ ಬಳಕೆಗೆ ನೀಡುವ ಮೂಲಕ ನೀರಿನ ಸದ್ಬಳಕೆ ಮಾಡುವ ಜೊತೆಯಲ್ಲಿ ನೀರು ಪೋಲಾಗುವುದನ್ನು ತಡೆಯಬಹುದು ಎಂದು ಪುರಸಭೆ ಮಾಜಿ ಸದಸ್ಯ ರಮೇಶ ಹೇಳುತ್ತಾರೆ, ಇನ್ನು ಕೆಲವೆಡೆ ಪುರಸಭೆ ಪಾರ್ಕ್ಗಳ ಸಮೀಪವೆ ಶುದ್ಧ ಕುಡಿಯುವ ನೀರು ಘಟಕಗಳಿದ್ದು ಈ ಘಟಕಗಳಲ್ಲಿ ವ್ಯರ್ಥವಾಗುವ ನೀರನ್ನು ಉದ್ಯಾನ ವನ ನಿರ್ವಹಣೆಗೆ ಬಳಸಿಕೊಂಡಾಗ ಉದ್ಯಾನವನ ಸದಾ ಹಸಿರಿನಿಂದ ಇರಲು ಸಹಕಾರಿಯಾಗುತ್ತದೆ ಎಂದು ಮಾಜಿ ಸದಸ್ಯ ಗೋಪಿ ತಿಳಿಸಿದ್ದು ಇನ್ನಾದರೂ ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಘಟಕಗಳಿಂದ ಪೋಲಾಗುವ ನೀರಿನ ಸದ್ಬಳಕೆಗೆ ಅಗತ್ಯ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!