195 ಮಂದಿಗೆ ಕೋವಿಡ್ ಪಾಸಿಟಿವ್

476

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ ಮತ್ತೆ 195 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 27,517 ಏರಿಕೆಯಾಗಿದೆ. 1423 ಸಕ್ರಿಯ ಪ್ರಕರಣಗಳ ಪೈಕಿ 154 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 93, ಚಿನಾಹಳ್ಳಿ 12, ಗುಬ್ಬಿ 09, ಕೊರಟಗೆರೆ 3, ಕುಣಿಗಲ್ 14, ಮಧುಗಿರಿ 21, ಪಾವಗಡ 5, ಶಿರಾ 24, ತಿಪಟೂರು 7, ತುರುವೇಕೆರೆಯಲ್ಲಿ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಕೋವಿಡ್ ನಿಂದ ಶಿರಾ ಮೂಲದ 75 ವರ್ಷದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!