ಸ್ಲಂ ಜನರ ಅಭಿವೃದ್ಧಿಗೆ ಆದ್ಯತೆ ನೀಡುವೆ: ಎಸ್ ಪಿ ಎಂ

28

Get real time updates directly on you device, subscribe now.


ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಸಮಿತಿ ಹಾಗೂ ಜಿಲ್ಲೆಯ ದಲಿತ ಸಂಘಟನೆಗಳ ಮುಖಂಡರೊಂದಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡ ಅವರೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು.
ಸ್ಲಂ ಜನರ ಪ್ರಣಾಳಿಕೆ ಭಾರತ ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ ಸಾರ್ವತ್ರಿಕ ಒತ್ತಾಯ ಸ್ವೀಕರಿಸಿ ಮತ್ತು ಸ್ಟಿಕ್ಕರ್ ಬಿಡುಗಡೆ ಮಾಡಿ ದಲಿತ, ಕಾರ್ಮಿಕ ಮತ್ತು ಸ್ಲಂ ಸಂಘಟನೆ ಮುಖಂಡರೊಂದಿಗೆ ಕರ್ನಾಟಕ ಸರ್ಕಾರದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಎಸ್.ಪಿ.ಮುದ್ದಹನುಮೇ ಗೌಡ ಸಂವಾದ ಮಾಡಿದರು.

ಸ್ಲಂ ಜನರ ಪ್ರಣಾಳಿಕೆ ಸ್ವೀಕರಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಎಸ್.ಪಿ.ಮುದ್ದಹನುಮೇಗೌಡ, ನಾನು ಹಣದಲ್ಲಿ ದುರ್ಬಲನಾಗಿದ್ದರು ಬಡವರಿಗೆ, ರೈತರಿಗೆ ಮತ್ತು ಜಿಲ್ಲೆಯ ಎಲ್ಲಾ ಜಾತಿಯ ಧ್ವನಿಯಿಲ್ಲದವರಿಗೆ ಪಾರ್ಲಿಮೆಂಟ್ ನಲ್ಲಿ ಧ್ವನಿಯಾಗಿ ಮಾನವೀಯತೆಯ ಹೃದಯ ಶೆರೀಮಂತಿಕೆಯವನಾಗಿದ್ದೇನೆ, ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ದೇಶದ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವನ್ನು ನ್ಯಾಯ ಪತ್ರದಲ್ಲಿ ಸೇರಿಸಿದೆ, ಹಾಗಾಗಿ ಈಗಾಗಲೇ ಸ್ಲಂ ಜನರ ಒತ್ತಾಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದು ಸಮಾನ ಶಿಕ್ಷಣ ನೀಡುವ ಶಿಕ್ಷಣ ಹಕ್ಕು ಮತ್ತು ಸ್ಲಂ ಜನರಿಗೆ ವಸತಿ ಪಡೆಯಲು ಅಗತ್ಯವಿರುವ ರಾಷ್ಟ್ರೀಯ ಲ್ಯಾಂಡ್ ಬ್ಯಾಂಕ್ ನೀತಿ ಮತ್ತು ರಾಷ್ಟ್ರ ಮಟ್ಟದಲ್ಲಿ ವಸತಿ ಹಕ್ಕು ಕಾಯಿದೆ ಜಾರಿಗೆ ನಾನು ನಿಮ್ಮಿಂದ ಆಯ್ಕೆಯಾದ ಪಕ್ಷದಲ್ಲಿ ಸಂಸತ್ ನಲ್ಲಿ ನಿಮ್ಮ ಪರವಾಗಿ ವಿಷಯ ಪ್ರಸ್ತಾಪಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ, ಸಂಸತ್ ಸದಸ್ಯರ ನಿಧಿಯಲ್ಲಿ ಸ್ಲಂಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ, ಮುಂದೆಯೂ ನೀಡುತ್ತೇನೆ, ನನ್ನನ್ನುಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಇಂದು ದೇಶಕ್ಕೆ ಮೋದಿ ಗ್ಯಾರಂಟಿ ಎಂದು ಹೇಳುವ ಬಿಜೆಪಿ ಮತ್ತು ಸಮೂಹ ಸನ್ನೆ ಜನರನ್ನು ಭ್ರಮೆಯಲ್ಲಿ ಮುಳುಗಿಸಿದೆ, ಆದರೆ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯ ಈಡೇರಿಸಲು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ದೇಶ ದಿವಾಳಿಯಾಗುತ್ತದೆ, ಜನರನ್ನೆಲ್ಲ ಸೋಮಾರಿಗಳನ್ನಾಗಿಸುತ್ತಾರೆ ಎಂದು ಬಡವರನ್ನು ಗೇಲಿ ಮಾಡಿದವರನ್ನು ಈ ಲೋಕಸಭಾ ಚುನವಾಣೆಯಲ್ಲಿ ಬುದ್ಧಿ ಕಲಿಸುವ ಮೂಲಕ ಮಹಿಳೆಯರು ರೈತರು, ಶ್ರಮಿಕರು ಮತ್ತು ಯುವ ಜನರು ಉತ್ತರವನ್ನು ತಮ್ಮ ವೋಟ್ ಗಳ ಮೂಲಕ ಕಾಂಗ್ರೆಸ್ ಗೆ ನೀಡಿ ಸಂವಿಧಾನ ರಕ್ಷಿಸಬೇಕು ಎಂದರು.

ಬಿಜೆಪಿ ಮತ್ತೊಂದು ಬಾರಿ ಆಡಳಿಡತಕ್ಕೆ ಬಂದರೆ ಸನಾತನ ಧರ್ಮವನ್ನು ಜಾರಿಗೆ ತರುತ್ತದೆ, ಮೀಸಲಾತಿ ಕಿತ್ತುಕೊಂಡು ಕಾರ್ಪೋರೇಟ್ ಕುಳಗಳ ಪರವಾಗಿ ಕಾನೂನು ರೂಪಿಸುತ್ತದೆ, ಹಾಗಾಗಿ ನಾವೆಲ್ಲಾ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಎಸ್.ಪಿ.ಮುದ್ದಹನುಮೇ ಗೌಡರನ್ನುಗೆಲ್ಲಿಸಬೇಕು, ಜಿಲ್ಲೆಯಲ್ಲಿ ಹೊರಗಿನವರು ಇದುವರೆಗೂ ಮಂಜುನಾಥ್ ಆದಿಯಾಗಿ ಕೊದಂಡರಾಮಯ್ಯ, ಎ.ಕೃಷ್ಣಪ್ಪ ಜಿಲ್ಲೆಯಲ್ಲಿ ಲೋಕಸಭೆಗೆ ನಿಂತು ಸೋತಿದ್ದಾರೆ, ಈ ಚುನಾವಣೆಯಲ್ಲಿ ಸೋಮಣ್ಣನವರು ಸೋಲಲಿದ್ದಾರೆ, ಅವರು ಹಣ ನೀಡಿದರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕೆಂದು ಮನವಿ ಮಾಡಿದರು.
ಸಂವಾದದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಕೆ.ದೊರೈರಾಜ್ ಮಾತನಾಡಿ, ಸಂವಿಧಾನ ಉಳಿಸಲು ದೇಶದ ಜನರ ಹಕ್ಕುಗಳನ್ನು ರಕ್ಷಿಸಲು ಕಾಂಗ್ರೆಸ್ ನ್ನು ಬೆಂಬಲಿಸಬೇಕಾಗಿದೆ, ಸರಳತೆಯ ಹಾಗೂ ಎಲ್ಲಾ ಸಮುದಾಯಗಳ ಸಮಸ್ಯೆಗಳ ಆಯಾಮದಲ್ಲಿ ಚರ್ಚಿಸುವ ಮುದ್ದಹನುಮೇ ಗೌಡರನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸ್ಲಂ ಜನಾಂದೋಲನ ಸಂಚಾಲಕರ ಎ.ನರಸಿಂಹ ಮೂರ್ತಿ, ಪತ್ರಕರ್ತ ಎಸ್.ನಾಗಣ್ಣ, ಡಾ.ಬಸವರಾಜು, ಡಾ.ಮುರುಳೀಧರ್, ಮಾಜಿ ನಗರಸಭೆ ಉಪಾಧ್ಯಕ್ಷ ವಾಲೆಚಂದ್ರಯ್ಯ, ನಿವೃತ್ತಿ ಮುಖ್ಯಇಂಜಿನಿಯರ್ ಶಿವಕುಮಾರ್, ಉದ್ಯಮಿ ಜಿ.ಟಿ.ವೆಂಕಟೇಶ್, ನಿವೃತ್ತಿ ಬ್ಯಾಂಕ್ ಮ್ಯಾನೇಜರ್ ಶಿವಕುಮಾರ್, ದಸಂಸ ಹಿರಿಯ ಮುಖಂಡ ನರಸೀಯಪ್ಪ, ನರಸಿಂಹಯ್ಯ, ಬಿ.ಹೆಚ್.ಗಂಗಾಧರ್, ರಾಮಚಂದ್ರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!