ಕುಣಿಗಲ್: ತಾಯಂದಿರಿಂದ ಪರಿತ್ಯಕ್ತರಾಗಿ ದತ್ತು ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಚ್ ಐ ವಿ ಸೋಂಕಿತ ಮಕ್ಕಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಎಚ್ಐವಿ ಸೋಂಕಿತ ತಾಯಂದಿರ ಅಸಹಾಯಕತೆಯಿಂದಾಗಿ ಜಿಲ್ಲೆಯ ಗಡಿ ಭಾಗದ (ಪಾವಗಡ) ಒಂದೂವರೆ ವರ್ಷದ ಮಗು ಮತ್ತು ಚಿಕ್ಕಬಳ್ಳಾಪುರದ ಜಿಲ್ಲೆಯ ಎರಡು ತಿಂಗಳ ಗಂಡು ಮಗು ಸೋಂಕಿತರಾಗಿದ್ದರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ಮಕ್ಕಳ ರಕ್ಷಣೆ ಮತ್ತು ಪೋಷಣೆಗೆ ತಾಲ್ಲೂಕಿನ ದಯಾಕಿರಣ ದತ್ತು ಕೇಂದ್ರದ ವಶಕ್ಕೆ ನೀಡಲಾಗಿತ್ತು, ಎಚ್ ಐ ವಿ ಹಾಗೂ ಅಪೌಷ್ಟಿಕತೆಯಿಂದಾಗಿ ಮಕ್ಕಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಮಾರ್ಚ್ 23 ಮತ್ತು 26ರಂದು ಮಕ್ಕಳು ಮೃತಪಟ್ಟಿದ್ದಾರೆ, ದಯಾಕಿರಣ ದತ್ತು ಕೇಂದ್ರದ ಸಂಯೋಜಕ ರಮೇಶ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸಕಾಲದಲ್ಲಿ ಚಿಕಿತ್ಸೆ ಪಡೆದಿದ್ದರೆ ಮಕ್ಕಳು ಉಳಿಯುತ್ತಿದ್ದರು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ತಿಳಿಸಿದರು.
Get real time updates directly on you device, subscribe now.
Comments are closed.