ಬಣ್ಣದ ಚಿತ್ತಾರದಲ್ಲಿ ಕಂಗೊಳಿಸುತ್ತಿದೆ ಸರ್ಕಾರಿ ಶಾಲೆ

434

Get real time updates directly on you device, subscribe now.

ಶಿರಾ: ಸರ್ಕಾರಿ ಪ್ರೌಢಶಾಲೆಗೆ ಜನಪದ ಸೊಗಡಿನ ಚಿತ್ತಾರಗಳ ಸುಂದರ ರೂಪ ನೀಡಿ ಮಾದರಿ ಶಾಲೆಯಾಗಿ ಮಾರ್ಪಡಿಸಿದ ಕ್ಷೇತ್ರ ಕ್ಷಮತೆ ತಂಡದ ಯುವಕರು.
ಶಿರಾ ತಾಲೂಕಿನ ಆಂಧ್ರ ಗಡಿ ಭಾಗದ ದೊಡ್ಡಬಾಣಗೆರೆ ಸರ್ಕಾರಿ ಪ್ರೌಢಶಾಲೆ ಆಂಧ್ರ ಮತ್ತು ರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸರ್ಕಾರಿ ಶಾಲೆಯಲ್ಲಿಯೂ ಪ್ರತಿಷ್ಠಿತ ಖಾಸಗಿ ಶಾಲೆ ಮಾದರಿ ಶಿಕ್ಷಣ ನೀಡುತ್ತೇವೆ ಎಂಬುದಕ್ಕೆ ಸತತವಾಗಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಲಿತಾಂಶ ದಾಖಲಿಸಿಕೊಂಡು ಬಂದಿರುವುದು ಶಿಕ್ಷಣದ ಗುಣ ಮಟ್ಟವನ್ನು ಸಾಕ್ಷಿಕರಿಸುತ್ತದೆ.
ನಾನು ಓದಿದ ಶಾಲೆಗೆ ನನ್ನದೊಂದು ಸೇವೆ
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹಾಗೂ ಡಾ.ತೇಜಸ್ವಿನಿ ರಾಜೇಶ್ಗೌಡ ಸಹಭಾಗಿತ್ವದಲ್ಲಿ ಜನಸೇವೆ ಸಿದ್ಧವಾಗಿರುವ ಕ್ಷೇತ್ರ ಕ್ಷಮತೆ ತಂಡದ ಬಹುತೇಕ ಯುವಕರು ದೊಡ್ಡಬಾಣಗೆರೆ ಸರ್ಕಾರಿ ಶಾಲೆಯಲ್ಲಿ ಕಲಿತು ಉತ್ತಮ ಸ್ಥಾನಮಾನದಲ್ಲಿದ್ದಾರೆ, ಇಂತಹ ಶಾಲೆಗೆ ಸೇವೆ ಮಾಡಬೇಕೆಂಬ ಉದ್ದೇಶದಿಂದ ಶಾಲೆಗೆ ಜನಪದ ಪರಂಪರೆ, ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಮೂಡಿಸುವ ದೇಶ ಪ್ರೇಮಿಗಳ ಚಿತ್ತಾರ, ತಂತ್ರಜ್ಞಾನ ಕ್ಷೇತ್ರದ ಮಾಹಿತಿ, ಪರಿಸರ ಕಾಳಜಿ ಮಹತ್ವ ಸೇರಿದಂತೆ ಅತ್ಯಾಕರ್ಷಣೀಯ ಬಣ್ಣದ ಚಿತ್ತಾರ ಶಾಲೆಗೆ ಹೊದಿಸಿರುವುದು ಶಾಲೆಯ ಶೈಕ್ಷಣಿಕ ಮೆರಗಿಗೆ ಕಳಸ ವಿಟ್ಟಂತಾಗಿದ್ದು, 3.20 ಲಕ್ಷ ರೂಪಾಯಿ ವೆಚ್ಚದಲ್ಲಿ 14 ಕೊಠಡಿಗಳಿಗೆ ನುರಿತ ಕಲಾವಿದರು, ಸ್ವಯಂ ಆಸಕ್ತಿಯುಳ್ಳ ಯುವಕರ ತಂಡ 2 ದಿನಗಳಲ್ಲಿ ಬಣ್ಣದ ಚಿತ್ತಾರ ಮೂಡಿಸಿ ಮಾದರಿ ಸರ್ಕಾರಿ ಶಾಲೆ ಮಾಡಿದ ಕ್ಷೇತ್ರ ಕ್ಷಮತೆ ತಂಡದ ಕಾರ್ಯ ವೈಖರಿ ಜನ ಮೆಚ್ಚುಗೆಗಳಿಸಿದೆ.
ಶಾಲೆಯ ಮುಖ್ಯ ಶಿಕ್ಷಕ ವೈ.ಶಾಂತಪ್ಪ ಮಾತನಾಡಿ, ಸೇವೆ ಮಾಡುವ ದೃಷ್ಟಿ ಹೊಂದಿರುವ ಯುವಕರ ತಂಡದೊಂದಿಗೆ ಕ್ಷೇತ್ರ ಕ್ಷಮತೆ ಧ್ಯೇಯೇಯ ವಾಕ್ಯದೊಂದಿಗೆ ಸ್ವಂತ ವೆಚ್ಚದಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ಮುನ್ನಡೆಯುತ್ತಿರುವ ಶಾಸಕ ರಾಜೇಶ್ ಗೌಡರ ಕಾರ್ಯ ದಕ್ಷತೆ ಇತರರಿಗೆ ಮಾದರಿ, ಸಮಾಜಕ್ಕೆ ಭವಿಷ್ಯದ ಪ್ರಜೆಗಳನ್ನು ಕೊಡುಗೆಯಾಗಿ ನೀಡುವ ಸರ್ಕಾರಿ ಶಾಲೆಗಳು ಭವ್ಯವಾಗಿದ್ದರೆ ಮಕ್ಕಳ ಭವಿಷ್ಯ ಸುಂದರವಾಗಿ ರೂಪುಗೊಳ್ಳಲಿದೆ ಎಂದರು.
ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಲಭ್ಯಯವಾಗ ಬೇಕೆಂಬ ಉದ್ದೇಶದೊಂದಿಗೆ ಕ್ಷೇತ್ರ ಕ್ಷಮತೆ ಆಭಿಯಾನ ಪ್ರಾರಂಭಿಸಿದ್ದೇವೆ, ಗುಣಮಟ್ಟದ ಶಿಕ್ಷಣ ನೀಡುವಂತ ಸರ್ಕಾರಿ ಶಾಲೆಗಳು ವೈಭವವಾಗಿರಬೇಕೆಂಬ ಸದುದ್ದೇಶದೊಂದಿಗೆ ಈ ಶಾಲೆಗೆ ಸುಂದರ ರೂಪ ನೀಡಿದ್ದೇವೆ, ಶಿರಾ ತಾಲೂಕಿನಲ್ಲಿ ಮತ್ತಷ್ಟು ಶಾಲೆಗಳನ್ನು ಇದೇ ಮಾದರಿ ಮಾಡುವ ಗುರಿ ಹೊಂದಲಾಗಿದೆ, ಸೇವಾ ಮನೋಭಾವದಿಂದ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಂಡು ಕೆಲಸ ಮಾಡುತ್ತಿರುವ ಯುವಕರು ಸಮಾಜವನ್ನು ಉತ್ತಮ ಮಾರ್ಗದತ್ತ ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದರು.

Get real time updates directly on you device, subscribe now.

Comments are closed.

error: Content is protected !!