ಪ್ರಸಾದ ಸೇವಿಸಿ 40 ಮಂದಿ ಅಸ್ವಸ್ಥ- ಆಸ್ಪತ್ರೆಗೆ ದಾಖಲು

39

Get real time updates directly on you device, subscribe now.


ಕೊರಟಗೆರೆ: ವೀರನಾಗಮ್ಮ ದೇವಿಯ ಜಾತ್ರೆಯಲ್ಲಿ ಪ್ರಸಾದ ಸೇವಿಸಿದ 40ಕ್ಕೂ ಅಧಿಕ ಭಕ್ತಾದಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ನಡೆದಿದೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಮದ ಶ್ರೀವೀರನಾಗಮ್ಮ ದೇವಿಯ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವದಲ್ಲಿ ಪ್ರಸಾದದ ರೂಪದಲ್ಲಿ ನೀಡುತ್ತಿದ್ದ ಊಟ ಸೇವಿಸಿ 40 ಭಕ್ತರ ಜೊತೆಯಲ್ಲಿ 4 ಜನ ಪತ್ರಕರ್ತರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ವೀರನಾಗಮ್ಮ ದೇವಿಯ ಪ್ರಸಾದ ಸೇವಿಸಿದ 2 ಗಂಟೆಯ ನಂತರ ವಾಂತಿ-ಭೇದಿ ಮತ್ತು ಸುಸ್ತಿನಿಂದ ಅಸ್ವಸ್ಥಗೊಂಡು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, 40 ಜನರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಇಲಾಖೆ ಟಿ ಹೆಚ್ ಓ ವಿಜಯಕುಮಾರ್, ಸಿಪಿಐ ಅನಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೀರನಾಗಮ್ಮ ದೇವಿಯ ಜಾತ್ರೆಯಲ್ಲಿ ಆಹಾರ ಸೇವಿಸಿದ ಕೆಲವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ, ಉಪವಾಸ ಇದ್ದಂತಹ ಭಕ್ತರಿಗೆ ಬಿಸಿಲಿನ ತಾಪಮಾನ ಹೆಚ್ಚಾಗಿ ಸಮಸ್ಯೆಆಗಿದೆ, 10 ಜನರಲ್ಲಿ 4 ಜನರಿಗೆ ವಾಂತಿ ಭೇದಿಯಾಗಿ ಸುಸ್ತು ಕಂಡು ಬಂದಿದೆ, ಪ್ರಸಾದ ಮತ್ತು ನೀರಿನ ಪರೀಕ್ಷೆಗೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಮಂಜುನಾಥ.ಕೆ., ತಹಶೀಲ್ದಾರ್, ಕೊರಟಗೆರೆ.

Get real time updates directly on you device, subscribe now.

Comments are closed.

error: Content is protected !!