ಇಂದಿನಿಂದ ಅಂಚೆ ಮತಪತ್ರಗಳ ಮತದಾನ ಆರಂಭ

31

Get real time updates directly on you device, subscribe now.


ತುಮಕೂರು: ಏಪ್ರಿಲ್ 13 ರಿಂದ 18ರ ವರೆಗೆ ಹೋಮ್ ವೋಟಿಂಗ್ ಆರಂಭಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ ತಿಳಿಸಿದರು.
ಮಹಾ ನಗರ ಪಾಲಿಕೆಯ ಆಯುಕ್ತರ ಕೊಠಡಿಯಲ್ಲಿ ನಡೆದ ಸುದ್ದಿಗ್ಠೋಯಲ್ಲಿ ಮಾತನಾಡಿ, ಹಿರಿಯ ಮತದಾರರು ಹಾಗೂ ಶೇ.40% ಅಂಗವೈಕಲ್ಯ ಹೊಂದಿರುವವರಿಗೆ ಮನೆುಂದಲೇ ಮತದಾನ ಮಾಡಲು ಫಾರಂ 12 ರ ಮೂಲಕ ಅವಕಾಶ ಮಾಡಿಕೊಟ್ಟಿದ್ದೆವು, ಅದರಲ್ಲಿ 43 ವಿಶೇಷ ಚೇತನ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 337 ಮತದಾರರು ಸೇರಿ ಒಟ್ಟು 380 ಮರದಾರರು ಮನೆಯಿಂದಲೇ ಮತದಾನ ಮಾಡುತ್ತಿದ್ದಾರೆ ಎಂದರು.
ಒಟ್ಟಾರೆ 380 ಮತದಾರರಿಗೆ ಏಪ್ರಿಲ್13 ರಿಂದ 18 ರ ವರೆಗೆ ಹೋಮ್ ವೋಟಿಂಗ್ ಮಾಡಿಸುತ್ತಿದ್ದೇವೆ, ಇದಕ್ಕಾಗಿ 4 ತಂಡ ರಚನೆ ಮಾಡಲಾಗಿದೆ, ಇಂದು 7 ಗಂಟೆುಂದ ಆರಂಭಿಸಲಾಗುವುದು, ನಾಲ್ಕು ರೂಟ್ ಮಾಡಿಕೊಂಡು ಮೂರು ದಿನದಲ್ಲಿ ಕಂಪ್ಲೀಟ್ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 235 ಮತಗಟ್ಟೆಗಳಿದ್ದು, 36 ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಿಲಾಗಿದೆ, ವಿಶೇಷವಾಗಿ 5 ಮಹಿಳಾ ಮತಗಟ್ಟೆಗಳು, 1 ವಿಕಲಚೇತನ ಮತಗಟ್ಟೆ, 1 ಧ್ಯೇಯ ಆಧಾರಿತ ಮತಗಟ್ಟೆ, 1 ಯುವ ಅಧಿಕಾರಿಗಳ ಮತಗಟ್ಟೆ ಹಾಗೂ 1 ಸಾಂಪ್ರದಾಯಿಕ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!