ಕೋತಿಗಳ ಹಾವಳಿ ತಡೆಗೆ ಗ್ರಾಮಸ್ಥರ ಆಗ್ರಹ

191

Get real time updates directly on you device, subscribe now.

ಕುಣಿಗಲ್: ಚಿರತೆ ಹಾವಳಿಯಿಂದ ಹೈರಾಣಾಗಿರುವ ಅರಣ್ಯ ಇಲಾಖೆ ಇದೀಗ ಕೋತಿಗಳ ಹಾವಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಮನವಿ ಮಾಡಿ ಕೋತಿ ಹಿಡಿಯಲು ಬೋನ್ ತಂದಿಟ್ಟಿರುವ ಘಟನೆ ಎಡೆಯೂರು ಹೋಬಳಿಯ ಕಗ್ಗರೆ ಗ್ರಾಮದಲ್ಲಿ ನಡೆದಿದೆ.
ಕಗ್ಗರೆ ಗ್ರಾಮದಲ್ಲಿ ಕಳೆದೊಂದು ತಿಂಗಳಿನಿಂದ ಎರಡು ಕೋತಿ ತೀವ್ರ ಹಾವಳಿ ಮಾಡುತ್ತಿವೆ. ಈಗಾಗಲೆ ಐದಕ್ಕೂ ಹೆಚ್ಚು ಮಂದಿಯನ್ನು ಕಚ್ಚಿರುವ ಕೋತಿಗಳು ಮನೆಯಲ್ಲಿ ಇಟ್ಟಿರುವ ವಸ್ತುಗಳನ್ನೆಲ್ಲಾ ಎತ್ತಿಕೊಂಡು ಹೋಗಿ ಚೆಲ್ಲಾಪಿಲ್ಲಿ ಮಾಡುತ್ತಾ ಗ್ರಾಮಸ್ಥರ ನೆಮ್ಮದಿ ಕೆಡಿಸಿವೆ. ಗ್ರಾಮದಲ್ಲಿ ಕಳೆದೊಂದು ತಿಂಗಳ ಹಿಂದೆ ಹಿಂಡಿನಿಂದ ಬೇರ್ಪಟ್ಟಿವೆ ಎನ್ನಲಾದ ಎರಡು ಕೋತಿಗಳು ಹಾವಳಿ ಮಾಡುತ್ತಿವೆ, ಮನೆಯ ಮುಂದೆ ಹಾಕಲಾಗಿರುವ ಬಟ್ಟೆ, ಬಿಸಿಲಿಗೆ ಒಣಗಿಸಲು ಇಟ್ಟಿರುವ ಧಾನ್ಯ ಇತರೆ ವಸ್ತುಗಳನ್ನು ಎತ್ತಿಕೊಳ್ಳುವ ಕೋತಿಗಳು ತಡೆಯಲು ಬರುವವರ ಮೇಲೆ ಎರಗಿ ಗಾಯಗೊಳಿಸುತ್ತಿವೆ. ಕೋತಿಗಳ ಹಾವಳಿ ತಡೆಯಲಾರದೆ ಸೋಮವಾರ ಗ್ರಾಮಸ್ಥರು ಕೋತಿ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಪ್ರತಿಭಟಿಸಿ ಕಗ್ಗರೆ ಗ್ರಾಪಂ ಪಿಡಿಒ ಅವರಿಗೆ ಮನವಿ ನೀಡಿದರು. ಪ್ರತಿಭಟನೆಯಲ್ಲಿ ಗ್ರಾಮದ ಪ್ರಮುಖರಾದ ಗೌರಿಶಂಕರ್, ಸುಧಾಮಣಿ, ಶಿವಪ್ರಕಾಶ್, ಪುನೀತ್ ಇತರರು ಇದ್ದರು.
ಗ್ರಾಪಂಗೆ ಮನವಿ ನೀಡಿದ ನಂತರ ವಲಯ ಅರಣ್ಯಾಧಿಕಾರಿಗಳಿಗೂ ದೂರು ನೀಡಿ ಯಾವುದೇ ಗಾಯ, ಪ್ರಾಣಾಪಾಯವಾದರೆ ಇಲಾಖೆಯ ನೋಡಿಕೊಳ್ಳಬೇಕೆಂಬ ಮನವಿ ಸಲ್ಲಿಸಿದರು. ಚಿರತೆ ಹಾವಳಿಯಿಂದ ಹೈರಾಣಾಗಿರುವ ಅರಣ್ಯ ಇಲಾಖೆ ಸಿಬ್ಬಂದಿ ಕೋತಿ ಹಾವಳಿ ವಿಷಯ ತಿಳಿದು ಕೋತಿಗಳನ್ನು ಹಿಡಿಯಲು ಗ್ರಾಮದಲ್ಲಿ ಬೋನಿನ ವ್ಯವಸ್ಥೆ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!