ಪ್ರಚಂಡ ಕುಳ್ಳ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಹಾಸ್ಯ ದಿಗ್ಗಜ

40

Get real time updates directly on you device, subscribe now.


ಬೆಂಗಳೂರು: ಕನ್ನಡ ಚಿತ್ರ ರಂಗದ ಹಿರಿಯ ನಟ ದ್ವಾರಕೀಶ್ (81) ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕನ್ನಡ ಚಿತ್ರರಂಗದ ಹಲವು ಖ್ಯಾತ ನಟರೊಂದಿಗೆ ನಟಿಸಿರುವ ದ್ವಾರಕೀಶ್ ಅವರು ಅನೇಕ ಪಾತ್ರ ನಿರ್ವಹಿಸಿದ್ದಾರೆ, ಕನ್ನಡದ ಕುಳ್ಳ ಎಂದೇ ಹೆಸರಾಗಿದ್ದ ದ್ವಾರಕೀಶ್ 1942 ಆಗಸ್ಟ್ 19 ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು, ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ, ದ್ವಾರಕೀಶ್ ಅವರು 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ದ್ವಾರಕೀಶ್ ಅವರು ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ ಚಿತ್ರ ಹೆಚ್ಚು ಜನಪ್ರಿಯವಾಗಿತ್ತು, ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು, ವಿಷ್ಣುವರ್ಧನ್ ಅವರ ಅನೇಕ ಚಿತ್ರಗಳಲ್ಲಿ ದ್ವಾರಕೀಶ್ ಅವರು ತೆರೆ ಹಂಚಿಕೊಂಡಿದ್ದರು.
ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಕಾಲ ಕನ್ನಡ ಚಿತ್ರರಂಗದ ಸೇವೆಗೈದ ಕನ್ನಡಿಗರ ಪ್ರೀತಿಯ ‘ಪ್ರಚಂಡ ಕುಳ್ಳ’ ದ್ವಾರಕೀಶ್, ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು.

ದ್ವಾರಕೀಶ್ ಅವರು ಅಂಬರೀಶ್, ರಜನಿಕಾಂತ್, ಚಿರಂಜೀವಿ, ಶಶಿಕುಮಾರ್, ವಿನೋದ್ ರಾಜ್, ದರ್ಶನ್ ಮತ್ತು ಸುದೀಪ್ ಅವರಂತಹ ಸ್ಟಾರ್ ಗಳೊಂದಿಗೆ ನಟಿಸಿದ್ದಾರೆ, ನರಸಿಂಹರಾಜು ಮತ್ತು ಬಾಲಕೃಷ್ಣರಂತಹ ದಿಗ್ಗಜರೊಂದಿಗೆ ಹಾಸ್ಯ ಪಾತ್ರಗಳಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿದ್ದರು.
ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ದ್ವಾರಕೀಶ್ ಅವರ ಸಾಧನೆ ಪರಿಗಣಿಸಿ ಬೆಂಗಳೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ, ದ್ವಾರಕೀಶ್ ಅವರ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ, ದ್ವಾರಕೀಶ್ ಅವರ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಅಂತ್ಯಕ್ರಿಯೆ
ಬುಧವಾರ ಬೆಳಿಗ್ಗೆ 11.30ಕ್ಕೆ ಚಾಮರಾಜಪೇಟೆಯ ಟಿಆರ್ ಮಿಲ್ ನಲ್ಲಿ ನಡೆಯಲಿದೆ, ದ್ವಾರಕೀಶ ಅವರ ಪಾರ್ಥೀವ ಶರೀರವು ಬುಧವಾರ ಬೆಳಗಿನ ಜಾವದವರೆಗೂ ಅವರ ನಿವಾಸದಲ್ಲಿಯೇ ಇರಲಿದ್ದು, ಗಣ್ಯರ ಮತ್ತು ಕುಟುಂಬಸ್ಥರು ಅಂತಿಮ ದರ್ಶನ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ, ಬೆಳಗ್ಗೆ 7.30 ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನಕ್ಕೆವ್ಯವಸ್ಥೆ ಮಾಡಲಾಗಿದೆ, 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 11 ಗಂಟೆಯ ನಂತರ ಚಾಮರಾಜಪೇಟೆಯ ಟಿಆರ್ ಮೀಲ್ ಚಿತಾಗಾರಕ್ಕೆ ತರಲಾಗುತ್ತಿದ್ದು ಇಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

Get real time updates directly on you device, subscribe now.

Comments are closed.

error: Content is protected !!