ಕುಣಿಗಲ್: ಪಟ್ಟಣ ಸೇರಿದ ತಾಲೂಕಿನದ್ಯಂತ ಶ್ರೀರಾಮನವಮಿ ಹಬ್ಬಾಚರಣೆ ಸಂಭ್ರಮ ಸಡಗರದಿಂದ ನೆರವೇರಿತು.
ಪಟ್ಟಣದಲ್ಲಿ ಬ್ರಾಹ್ಮಣರ ಬೀದಿಯಲ್ಲಿರುವ ಕೋದಂಡರಾಮ ಸ್ವಾಮಿ ದೇವಾಲಯ ಹಬ್ಬಾಚರಣೆಯ ಕೇಂದ್ರ ಬಿಂದುವಾಗಿತ್ತು, ಪಟ್ಟಣದ ಬೀದಿ ಬೀದಿಗಳನ್ನು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾಲಂಕಾರ ನೆರವೇರಿಸಿ ಮಧ್ಯಾಹ್ನ ನೀರು ಮಜ್ಜಿಗೆ, ಪಾನಕ, ಕೋಸಂಬರಿ, ರಸಾಯನ ವಿತರಿಸಲಾಯಿತು.
ಪುರಸಭೆ ಬಸ್ ನಿಲ್ದಾಣದಲ್ಲಿರುವ ಪರ್ವತಾಂಜನೇಯ ಸ್ವಾಮಿ ದೇವಾಲಯದಲ್ಲಿ ದೇವಾಲಯ ಸಮಿತಿ ವತಿಯಿಂದ ಶ್ರೀಸ್ವಾಮಿಯವರ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಶ್ರೀಸ್ವಾಮಿಯವರಿಗೆ ವಿಶೇಷ ಪೂಜೆ ಸಲ್ಲಿಸಿ ಅಪಾರ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಭಕ್ತರ ಜೈ ಶ್ರೀರಾಮ ಘೋಷಣೆಯೊಂದಿಗೆ ನೀರು ಮಜ್ಜಿಗೆ, ಪಾನಕ, ರಸಾಯನ, ಕೋಸಂಬರಿ ವಿತರಿಸಲಾಯಿತು, ಪಟ್ಟಣದ ವಿವಿಧ ವಾರ್ಡ್ ಗಳಲ್ಲಿರುವ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಶ್ರೀರಾಮ ಮಂದಿರಗಳಲ್ಲಿ ರಾಮ ನವಮಿಯ ಹಬ್ಬಾಚರಣೆ ನೆರವೇರಿಸಲಾಯಿತು, ಪಟ್ಟಣದ ಪ್ರಮುಖ ಬೀದಿಯಲ್ಲಿ ಕೆಲ ಅಂಗಡಿ ಮಾಲೀಕರು ತಮ್ಮ ಅಂಗಡಿಯ ಮುಂದೆ ಅಯೋಧ್ಯೆ ಬಾಲರಾಮನ ಭಾವಚಿತ್ರ ಇಟ್ಟು ಪೂಜೆ ನೆರವೇರಿಸಿದ ನಂತರ ಪ್ರಸಾದ ರೂಪವಾಗಿ ನೀರು ಮಜ್ಜಿಗೆ ಪಾನಕ ವಿತರಿಸಿದರು. ಪಟ್ಟಣದ ಕೆಲ ಟಿವಿ ಮಾರಾಟ ಮಳಿಗೆಯಲ್ಲಿ ಅಯೋಧ್ಯೆ ಬಾಲರಾಮನಿಗೆ ಸೂರ್ಯ ರಶ್ಮಿ ತಿಲಕ ಇಟ್ಟ ಪ್ರಸಾರವನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದು ಅಪಾರ ಸಂಖ್ಯೆ ಭಕ್ತರು ಕಣ್ತುಂಬಿಕೊಂಡರು.
Comments are closed.