ಶಾರ್ಟ್ ಸರ್ಕ್ಯೂಟ್ ಗೆ 150 ತೆಂಗಿನ ಮರ ಭಸ್ಮ

25

Get real time updates directly on you device, subscribe now.


ಹುಳಿಯಾರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ತೋಟಕ್ಕೆ ಬೆಂಕಿ ತಗುಲಿ 150 ತೆಂಗಿನ ಮರ ಸೇರಿದಂತೆ ವಿವಿಧ ಜಾತಿಯ ಮರಗಳು ಸುಟ್ಟು ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿಯಲ್ಲಿ ಜರುಗಿದೆ.
ತಮ್ಮಡಿಹಳ್ಳಿ ವಾಸಿಯಾದ ಟಿ.ಎಸ್.ಬಸವರಾಜು ಅವರಿಗೆ ಸೇರಿದ ಸರ್ವೆ ನಂ.22/1 ರಲ್ಲಿನ ತೋಟದಲ್ಲಿ ಈ ಘಟನೆ ಜರುಗಿದೆ, ತೋಟದಲ್ಲಿನ ಟ್ರಾನ್ಸ್ ಫಾರ್ಮರ್ನಿಂದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಟ್ರಾನ್ಸ್ ಫಾರ್ಮರ್ ಕೆಳ ಭಾಗದಲ್ಲಿ ಬೆಂಕಿ ಹೊತ್ತಿ ಉರಿಯಿತು, ಈ ಬೆಂಕಿ ಆರಿಸಲು ಬಸವರಾಜು ಪ್ರಯತ್ನಿಸಿದರೂ ಸಾಧ್ಯವಾಗದೆ ಬೆಂಕಿಯ ಕೆನ್ನಾಲಿಗೆ ಟ್ರಾನ್ಸ್ ಫಾರ್ಮರ್ ಪಕ್ಕದಲ್ಲಿ ಅತೀ ಎತ್ತರಕ್ಕೆ ಬೆಳೆದಿರುವ ಬೇಲಿಗೆ ತಗುಲಿ ತೀವ್ರ ಸ್ವರೂಪ ಪಡೆಯಿತು.

ಬೆಂಕಿ ಆರಿಸಲು ಸಾಧ್ಯವಾಗದ ಕಾರಣ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ಫೋನ್ ಮಾಡಿ ನಂತರ ಬೆಂಕಿ ಆರಿಸಲು ಬಕೆಟ್ ತರಲು ಅಲ್ಲೇ ಹತ್ತಿರದಲ್ಲಿರುವ ಮನೆಗೆ ಹೋಗಿ ಬರುವಷ್ಟರಲ್ಲಿ ಅಪಾರ ಬೆಂಕಿ ತೋಟದ ತುಂಬಾ ಆವರಿಸಿತ್ತು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಅಗ್ನಿಶಾಮಕ ವಾಹನದೊಂದಿಗೆ ಬಂದು ಬೆಂಕಿ ನಂದಿಸಿ ಇನ್ನೂ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದರು.

ಅಷ್ಟರಲ್ಲಿ ಫಸಲು ಬಿಡುತ್ತಿದ್ದ ಸುಮಾರು 120 ರಿಂದ 150 ತೆಂಗಿನ ಮರ, ಮಾವಿನ ಗಿಡಗಳು, ಕರಿಬೇವಿನ ಮರಗಳು, ಬೇವು ಹಾಗೂ ಇತರೆ ಮರಗಳು ಹಾಗೂ ತೆಂಗಿನ ಮರಗಳಿಗೆ ನೀರು ಬಿಡಲು ಅಳವಡಿಸಿದ್ದ ಪೈಪ್ ಲೈನ್ ಹಾಗೂ ಹನಿ ನೀರಾವರಿ ಪೈಪ್ ಗಳು, ಬೋರ್ ವೆಲ್ ಗೆ ಅಳವಡಿಸಿದ್ದ ಮೈನ್ಸ್ ವೈರ್ ಮತ್ತು ಇತರೆ ಡ್ರಿಪ್ ಸೆಟ್ ಹಾಗೂ ವಿದ್ಯುತ್ ಪರಿಕರಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಲಕ್ಷಾಂತರ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ ಎಂದು ಬಸವರಾಜು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!