ತುಮಕೂರು: ಏಪ್ರಿಲ್ 26 ರಂದು ನಡೆಯುವ 2024ನೇ ಸಾಲಿನ 18ನೇ ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡರ ಪರವಾಗಿ ಕಾಂಗ್ರೆಸ ಮುಖಂಡರಾದ ಮಾಜಿ ಶಾಸಕ ಡಾ.ರಫೀಕ್ ಅಹಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್, ಎಸ್.ಪಿ.ಮುದ್ದಹನುಮೇ ಗೌಡರ ಪುತ್ರಿ ರಚನಾ ಸೇರಿದಂತೆ ನಗರ ಪಾಲಿಕೆ ಮಾಜಿ ಕಾರ್ಪೋರೇಟರ್ ಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮರಳೂರಿನ ಶ್ರೀವೀರಾಂಜನೇಯ ಸ್ವಾಮೀಗೆ ಪೂಜೆ ಸಲ್ಲಿಸುವ ಮೂಲಕ ಮನೆ ಮನೆ ಪ್ರಚಾರ ಆರಂಭಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಾ.ಎಸ್.ರಫಿಕ್ ಅಹಮದ್, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡರ ಪರವಾಗಿ ನಗರದ 35 ವಾರ್ಡ್ಗಳ ಮನೆ ಮನೆಗೂ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಕರಪತ್ರ ಹಂಚುವ ಮೂಲಕ ಮತ ಕೇಳುವ ಕಾರ್ಯಕ್ಕೆ 28ನೇ ವಾರ್ಡ್ನ ಮರಳೂರು ಗ್ರಾಮದಿಂದ ಚಾಲನೆ ನೀಡಲಾಗಿದೆ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ನಗರಪಾಲಿಕೆಯ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬೂತ್ ಮಟ್ಟದ ಪದಾಧಿಕಾರಿಗಳು ಒಗ್ಗೂಡಿ ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ನ್ಯಾಯಪತ್ರ ಐದು ಗ್ಯಾರಂಟಿಗಳ ಪತ್ರ ನೀಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೈಗೊಳ್ಳುವ ಕಾರ್ಯಕ್ರಮಗಳ ಕರಪತ್ರ ನೀಡುವ ಮೂಲಕ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಳ್ಳಲಾಗುವುದು, ತುಮಕೂರು ನಗರದಲ್ಲಿ ಸುಮಾರು 2.71 ಲಕ್ಷ ಮತಗಳಿದ್ದು, ಇವುಗಳಲ್ಲಿ 1.71 ಲಕ್ಷ ಮತ ಚಲಾವಣೆಯಾದರೆ ಶೇ.50 ರಷ್ಟು ಮತಗಳು ಬಂದರೆ ನಮ್ಮ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡರು ಗೆಲ್ಲುವುದರಲ್ಲಿ ಸಂಶಯವೇ ಇಲ್ಲ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಪಿ.ಮುದ್ದ ಹನುಮೇ ಗೌಡರು ಜನಾನುರಾಗಿಗಳು, 2014- 19ರ ವರೆಗೆ ಸಂಸದರಾಗಿ ಜಿಲ್ಲೆಗೆ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ, ಸ್ಮಾರ್ಟ್ಸಿಟಿ, ಹೆಚ್ ಎಎಲ್, ಇಸ್ರೋ, ರಾಷ್ಟ್ರೀಯ ಹೆದ್ದಾರಿ 206ರ ಚತುಷ್ಪಥ ರಸ್ತೆ, ರೈಲ್ವೆ ಲೈನ್ ವಿದ್ಯುದೀಕರಣ ಸೇರಿದಂತೆ ಹಲವಾರು ಯೋಜನೆ ಜಾರಿಯಲ್ಲಿವೆ, ಅಲ್ಲದೆ ನಡೆದಾಡುವ ದೇವರು ಎಂದು ಭಕ್ತರಿಂದ ಕರೆಯಿಸಿಕೊಂಡ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಭಾರತರತ್ನ ನೀಡಬೇಕೆಂದು ಕನ್ನಡದಲ್ಲಿ ಮಾತನಾಡಿ ದೇಶದ ಗಮನ ಸೆಳೆದಿದ್ದಾರೆಎಣದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡ ಪುತ್ರಿ ರಚನಾ ಮಾತನಾಡಿ, ಕಾಂಗ್ರೆಸ್ ಪಕ್ಷ ಬಡವರು, ರೈತರು, ಕಾರ್ಮಿಕರ ಪರವಾದ ಪಕ್ಷ, ಹಾಗಾಗಿ ನಮ್ಮ ತಂದೆಯವರ ಪರವಾಗಿ ಅವರ ಅಭಿಮಾನಿಯಾಗಿ ಪ್ರಚಾರಕ್ಕೆ ಇಳಿದಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಲ್ತಾನ್ ಮೊಹಮದ್, ವೆಂಕಟೇಶಗೌಡ, ನಾಗರಾಜು, ಇಸ್ಮಾಯಿಲ್, ಮರಳೂರು ನಾರಾಯಣಪ್ಪ, ಮೆಹಬೂಬ್ ಪಾಷ, ಆಟೋ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಫಯಾಜ್, ಪಾಲಿಕೆ ಸದಸ್ಯರಾದ ನಯಾಜ್, ಜೆ.ಕುಮಾರ್, ಮುಖಂಡರಾದ ಇನಾಯತ್, ಗುರುಪ್ರಸಾದ್, ರೂಪತಾರ, ಚಿಕ್ಕಸ್ವಾಮಿ, ಮುಬೀನಾ ಭಾನು, ಅನಿಲ್, ಶಫೀಕ್ ಖಾಲಿದ್, ರಂಗನಾಥ್, ದೀಪಕ್ಗೌಡ, ನರಸೇಗೌಡ ಇತರರು ಇದ್ದರು.
Comments are closed.