ಕುಣಿಗಲ್: ಕಳೆದ ಮೂರು ತಿಂಗಳಿನಿಂದ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ನಾಗರಿಕರಿಗೆ ಕುಣಿಗಲ್ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಸುರಿದ ಮಳೆ ನಾಗರಿಕರಿಗೆ ಮುದ ನೀಡಿತು.
ಪಟ್ಟಣದಲ್ಲಿ ಕಳೆದ ಕೆಲವಾರು ದಿನಗಳಿಂದ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು ವಯೋವೃದ್ಧರು, ಪುಟ್ಟ ಮಕ್ಕಳು ಸೇರಿದಂತೆ ನಾಗರಿಕರು ಪರದಾಡುವಂತೆ ಆಗಿತ್ತು, ಬಿಸಿಲಿನ ಝಳಕ್ಕೆ ಮಧ್ಯಾಹ್ನದ ವೇಳೆ ನಾಗರಿಕರು ಸಂಚಾರ ಮಾಡುವುದನ್ನೇ ಬಿಟ್ಟಿದ್ದರು, ಕಟ್ಟಡ ನಿರ್ಮಾಣ ಇತರೆ ಕಾಮಗಾರಿಗೆ ಕೆಲಕಾಲ ವಿರಾಮ ನೀಡುವಂತಾಗಿತ್ತು, ಶುಕ್ರವಾರ ಸಂಜೆ ಭಾರಿ ಗಾಳಿಯೊಂದಿಗೆ ಮಿಂಚು ಗುಡುಗಿನ ಆರ್ಭಟದೊಂದಿಗೆ ಪ್ರಾರಂಭವಾದ ವರ್ಷದ ಮೊದಲ ಮಳೆ ಸುಮಾರು ಅರ್ಧ ತಾಸು ಸತತವಾಗಿ ಸುರಿದ ಪರಿಣಾಮ ಬಿಸಿಲಿನ ಝಳದಿಂದ ಹೈರಾಣಾಗಿದ್ದ ನಾಗರಿಕರು ನೆಮ್ಮದಿಗೊಂಡರೆ, ರಾಗಿ ಕೇಂದ್ರಕ್ಕೆ ರಾಗಿ ಹಾಕಲು ತಂದಿದ್ದ ರೈತರು ರಾಗಿ ರಕ್ಷಿಸಿಕೊಳ್ಳಲು ಪರಿದಾಡುವಂತೆ ಆಯಿತು.
2024ರ ವರ್ಷದ ಮೊದಲ ಮಳೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸುರಿದದ್ದು ಎಲ್ಲರಲ್ಲೂ ಸಂತೋಷ ಮನೆ ಮಾಡಿತ್ತು, ಅಡಿಕೆ ಬೆಳೆ ಇಟ್ಟಿದ್ದ ರೈತರು ದಿನಾಲು ಆಗಸದ ಕಡೆ ಮುಖ ಮಾಡಿ ಮಳೆ ಜಪ ಮಾಡುತ್ತಿದ್ದರು, ಈ ಮಳೆ ಅಡಿಕೆ ಬೆಳೆ ಇಟ್ಟು ಬೆಳೆ ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದ ರೈತರಿಗೆ ನೆಮ್ಮದಿ ಮೂಡಿಸಿದೆ.
Get real time updates directly on you device, subscribe now.
Prev Post
Next Post
Comments are closed.