ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ: ದೊರೈರಾಜ್

20

Get real time updates directly on you device, subscribe now.


ತುಮಕೂರು: ದೇಶದಲ್ಲಿ 18ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ, ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಮಾದಿಗ ಮತ್ತು ಛಲವಾದಿ ಮುಖಂಡರನ್ನು ಒಳಗೊಂಡ ದಲಿತ ಪರ ಒಕ್ಕೂಟ ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಲು ಕರೆ ನೀಡುವ ಜಿಲ್ಲಾ ಅಭಿಯಾನ ಕೈಗೊಂಡಿದೆ ಎಂದು ಚಿಂತಕ ಕೆ.ದೊರೈರಾಜ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಅಸ್ಪಶ್ಯ ಜಾತಿಯ ಮಾದಿಗ ಮತ್ತು ಛಲವಾದಿ ಸಮುದಾಯದ ಒಕ್ಕೂಟದಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸನಾತನವಾದಿ ಕುತಂತ್ರಕ್ಕೆ ಸಾವಿರಾರು ವರ್ಷಗಳಿಂದ ದಲಿತ ಸಮುದಾಯಗಳು ಬಲಿಯಾಗಿದ್ದೇವೆ, ಕ್ರೂರ ಅಸ್ಪಷ್ಯತೆ, ಅವಮಾನ, ದೌರ್ಜನ್ಯ, ಅವಕಾಶಗಳ ವಂಚನೆ ಮತ್ತು ನಮ್ಮ ಜಾತಿಯ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಕಳೆದ 10 ವರ್ಷಗಳಿಂದ ದೇಶದಲ್ಲಿ ಹೆಚ್ಚಾಗಿವೆ, ಇದಕ್ಕೆ ಬಿಜೆಪಿ ಆಡಳಿತವೇ ಕಾರಣವಾಗಿದೆ, ಅಧಿಕಾರದಲ್ಲಿರುವ ಎನ್ಡಿಎ ಸರ್ಕಾರ ಮೀಸಲಾತಿ ವಿರೋಧಿ ನಡೆಯಿಂದ ಮೀಸಲಾತಿ ಒಂದೇ ದಿನದಲ್ಲಿ ಜಾರಿಗೆ ತಂದು ಮೀಸಲಾತಿಯ ಪರಿಭಾಷೆ ಬದಲಾಯಿಸಿ ಸಂವಿಧಾನ ವಿರೋಧಿ ನಡೆ ತೆಗೆದುಕೊಳ್ಳುವ ಮೂಲಕ ಪ್ರಜಾಪ್ರಭುತ್ವ ನಾಶ ಮಾಡಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದ್ವೇಷ ಹೆಚ್ಚಿಸಿ ಅಸ್ಪಶ್ಯ ಸಮುದಾಯಗಳನ್ನು ವಿಭಜನೆ ಮಾಡಿ ಮತ್ತೆ ಗುಲಾಮಗಿರಿಗೆ ತಳ್ಳಲಾಗುತ್ತಿದೆ ಎಂದರು. ಅಸಮಾನತೆಯ ಅನ್ಯಾಯ ಪ್ರತಿಪಾದಿಸುವ ಮನುವಾದಿ ಸಿದ್ಧಾಂತ ಕಿತ್ತೆಸೆಯಬೇಕಾಗಿದೆ, ಕಳೆದ 10 ವರ್ಷಗಳಿಂದ ಸುಳ್ಳಿನ ಮೇಲೆ ಸರ್ಕಾರ ನಡೆಸಿ ದೇಶದ ಜನರನ್ನು ದಿಕ್ಕು ತಪ್ಪಿಸಲಾಗಿದೆ, ನಮ್ಮ ಮಕ್ಕಳ ಶಿಕ್ಷಣ ಕಿತ್ತುಕೊಳ್ಳಲು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿ ಉದ್ಯೋಗ ಅವಕಾಶಗಳನ್ನು ನಾಶ ಮಾಡಲಾಗಿದೆ, ಪರಿಶಿಷ್ಟ ಜಾತಿಯ ಜೀವನಾಧಾರ ಕಿತ್ತುಕೊಂಡು ಬೆಲೆ ಏರಿಕೆಯಿಂದ ಮತ್ತಷ್ಟು ಬಡತನಕ್ಕೆ ಈ ಸರ್ಕಾರ ಕಾರಣವಾಗಿದೆ ಎಂದರು.

ಛಲವಾದಿ ಮಹಾಸಭಾದ ಅಧ್ಯಕ್ಷ ಡಾ.ಪಿ.ಚಂದ್ರಪ್ಪ ಮಾತನಾಡಿ, ಸಂವಿಧಾನ ರಕ್ಷಿಸಲು ಜಿಲ್ಲೆಯಲ್ಲಿರುವ ಎಲ್ಲಾ ಅಸ್ಪಶ್ಯ ಜಾತಿ ಸಮುದಾಯಗಳು ಒಂದಾಗಿ ಕಾಂಗ್ರೆಸ್ ನ್ನು ಬೆಂಬಲಿಸಬೇಕೆಂದರು.
ಕೆಂಚಮಾರಯ್ಯ ಮತ್ತು ವಾಲೇಚಂದ್ರಯ್ಯ ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಾಗಲು ಎಸ್.ಪಿ.ಮುದ್ದಹನುಮೇ ಗೌಡರನ್ನು ಗೆಲ್ಲಿಸಿ ಗ್ಯಾರಂಟಿ ಯೋಜನೆಗಳು ಬಡ ಜನರಿಗೆ ಶಕ್ತಿ ತುಂಬಿದ್ದು, ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ಡಾ.ಜಿ.ಪರಮೇಶ್ವರ್ ಮತ್ತು ಕೆ.ಎನ್.ರಾಜಣ್ಣ ಅವರ ಕೈ ಬಲಪಡಿಸಲು ದಲಿತರ ಎಡ-ಬಲ ಸಮುದಾಯಗಳು ಅನಿವಾರ್ಯವಾಗಿ ಕಾಂಗ್ರೆಸ್ ಬೆಂಬಲಿಸಬೇಕೆಂದರು.

ದಲಿತ ಸಂಘರ್ಷ ಸಮಿತಿಯ ನರಸಿಂಹಯ್ಯ, ನರಸೀಯಪ್ಪ, ಸ್ಲಂ ಜನಾಂದೋಲನದ ಎ.ನರಸಿಂಹಮೂರ್ತಿ, ದಲಿತ ಐಕ್ಯ ಹೋರಾಟ ಸಮಿತಿಯ ಶಿವಶಂಕರ್, ಡಾ.ಮುರುಳೀಧರ್, ಬಿ.ಹೆಚ್ಗಂಗಾಧರ್, ಜಯಮೂರ್ತಿ, ಛಲವಾದಿ ಮಹಾ ಸಭಾದ ಶ್ರೀನಿಸವಾಸ್, ಭಾನುಪ್ರಕಾಶ್, ಶಿವಾಜಿ, ದಲಿತಪರ ಸಂಘಟನೆಯ ಕೆಂಪರಾಜು, ಕೊಳಗೇರಿ ಸಮಿತಿಯ ಅರುಣ್ ಮತ್ತು ತಿರುಮಲಯ್ಯ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!