ಅಂಗಡಿ ಬಾಗಿಲಿಗೆ ಕಸ ಹಾಕಿ ಟೆಕ್ಸ್ ಟೈಲ್ ಗೆ ಪಾಠ

29

Get real time updates directly on you device, subscribe now.


ಶಿರಾ: ಸಾರ್ವಜನಿಕ ಸ್ಥಳದಲ್ಲಿ ಸುರಿಯುತ್ತಿದ್ದ ಕಸವನ್ನು ಅದೇ ಅಂಗಡಿಯ ಬಾಗಿಲಿಗೆ ಹಾಕುವ ಮೂಲಕ ಪೌರಕಾರ್ಮಿಕರು ಟೆಕ್ಸ್ ಟೈಲ್ ಒಂದಕ್ಕೆ ಬುದ್ಧಿ ಕಲಿಸಿದ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ಬಾಲಾಜಿ ನಗರ ಮುಖ್ಯರಸ್ತೆಯಲ್ಲಿನ ಓಂ ಶಿವ ಫ್ಯಾಷ್ಸ್ ಶೋ ರೂಂ ಮಾಲೀಕರು ತಮ್ಮ ಅಂಗಡಿ ಮುಂಭಾಗದ ಖಾಲಿ ನಿವೇಶನವೊಂದರಲ್ಲಿ ತಮ್ಮ ಅಂಗಡಿಯ ವೇಸ್ಟ್ ಸುರಿದಿದ್ದರು, ನಿತ್ಯದಂತೆ ಕಸ ಎತ್ತಲು ಬಂದಿದ್ದ ಪೌರ ಕಾರ್ಮಿಕರು ಫ್ಯಾಷ್ಸ್ ಮಾಲೀಕರಿಗೆ ಬುದ್ಧಿ ಕಲಿಸುವ ಸಲುವಾಗಿ ಬೆಳ್ಳಂಬೆಳಗ್ಗೆಯೇ ಅದೇ ಕಸವನ್ನು ಮರಳಿ ಅಂಗಡಿಯ ಮುಂಬಾಗಿಲಿಗೆ ವರ್ಗಾಯಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪೌರ ಕಾರ್ಮಿಕರು, ಪ್ರತಿನಿತ್ಯ ಈ ಭಾಗದಲ್ಲಿ ನಾವು ಕಸ ಸಂಗ್ರಹಿಸಲು ಬರುತ್ತೇವೆ, ಈ ಹಿಂದೆ ಇದೇ ರೀತಿ ಅಂಗಡಿಯವರು ಸುರಿದಿದ್ದ ಕಸವನ್ನು ಕ್ಲೀನ್ ಮಾಡಿದ್ದೇವೆ, ನಂತರ ತಮ್ಮ ಅಂಗಡಿಯ ಕಸವನ್ನು ತಮ್ಮಲ್ಲಿಯೇ ಸಂಗ್ರಹಿಸಿಟ್ಟು, ಕಸ ಒಯ್ಯುವ ವಾಹನಕ್ಕೆ ನೀಡುವಂತೆ ಮಾಲೀಕರಿಗೆ ಸಾಕಷ್ಟು ಬಾರಿ ತಿಳುವಳಿಕೆ ನೀಡಿದ್ದೇವೆ, ಹೀಗಿದ್ದರೂ ರಾತ್ರಿ ವೇಳೆ ಅಂಗಡಿ ಬಾಗಿಲು ಹಾಕುವ ಮುನ್ನ ಎದುರಿನ ಖಾಲಿ ನಿವೇಶನದಲ್ಲಿ ಕಸ ಸುರಿದಿದ್ದಾರೆ, ಸಂಗ್ರಹಣೆಗೆ ಸಹಕರಿಸದೇ ಮಾಲೀಕರು ಪೌರಾಡಳಿತಕ್ಕೆ ಅವಮಾನ ಮಾಡಿದ್ದು, ಮಾಲೀಕರಿಗೆ ಬುದ್ಧಿ ಕಲಿಸಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!