ರಾಜ್ಯದಲ್ಲಿ ಇರೋದು ಪಿಕ್ ಪಾಕೆಟ್ ಸರ್ಕಾರ

ಗ್ಯಾರಂಟಿ ಯೋಜನೆಯಿಂದ ಸಾಲ ಜನರ ಮೇಲೆ ಹಾಕ್ತಾರೆ: ಹೆಚ್ ಡಿ ಕೆ

34

Get real time updates directly on you device, subscribe now.


ಮಧುಗಿರಿ: ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಯಾವುದೇ ಯೋಜನೆಗಳಿಲ್ಲ, ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು ಇದೊಂದು ಪಿಕ್ ಪಾಕೆಟ್ ಸರ್ಕಾರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಲೇವಡಿ ಮಾಡಿದರು.
ಪಟ್ಟಣದ ಸಂತೆ ಮೈದಾನದಲ್ಲಿ ಶುಕ್ರವಾರ ಬಿಜೆಪಿ- ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಎಲ್ಲಾ ತಾಯಂದಿರಿಗೆ ಕೈ ಮುಗಿದು ಮನವಿ ಮಾಡುತ್ತೇನೆ, ಈಗ ಗ್ಯಾರಂಟಿ ಯೋಜನೆ ಎಂದು 2 ಸಾವಿರ ನೀಡಿದ್ದಾರಲ್ಲ, ಇದರ ಹೊರೆಯನ್ನು ಮುಂದೆ ನಿಮ್ಮ ಕುಟುಂಬಗಳು ಹೊರಬೇಕಾಗುತ್ತದೆ, ಇವರು ರಾಜ್ಯದ ಪ್ರತಿ ಕುಟುಂಬದ ಮೇಲೆ 36 ಸಾವಿರ ಸಾಲದ ಹೊರೆ ಹೊರಿಸಿದ್ದಾರೆ, ಇವರು ಇನ್ನೆರಡು ವರ್ಷಕ್ಕೆ ಸರ್ಕಾರದ ಖಜಾನೆ ಖಾಲಿ ಮಾಡಿಕೊಂಡು ಹೋಗುತ್ತಾರೆ, ನಂತರ ಸಾಲದ ಹೊರೆಯನ್ನು ನೀವೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಮಾತನಾಡಿ, ದೇಶದ ಅಭಿವೃದ್ಧಿಗಾಗಿ ಬಿಜೆಪಿ ಜೆಡಿಎಸ್ ಮೈತ್ರಿಗೆ ದೇವೇಗೌಡರು ಚಾಲನೆ ನೀಡಿದ್ದು, ಯಡಿಯೂರಪ್ಪ ಕುಮಾರಸ್ವಾಮಿ ಇದಕ್ಕೆ ಅಂಕಿತ ಹಾಕಿದ್ದಾರೆ, ದೇಶದ ಚುನಾವಣೆ ಭಾತರದ ಭವಿಷ್ಯದ ಚುನಾವಣೆ, ದೇಶದ ಭದ್ರತೆ ಕಾಪಾಡುವ ಚುನಾವಣೆ, ಆದ್ದರಿಂದ ಈ ಬಾರಿ ನನ್ನನ್ನು ಗೆಲ್ಲಿಸಿ, ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೊ, ಮೋದಿಯವರು ಪ್ರಧಾನಿಯಾಗಿ ಕುಮಾರಸ್ವಾಮಿ ಸಚಿವರಾಗುವುದು ಅಷ್ಟೇ ಸತ್ಯ ಎಂದರು.
ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೆ ಗೌಡ, ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಬಿಜೆಪಿ ಮುಖಂಡರಾದ ಎಲ್.ಸಿ.ನಾಗರಾಜು, ಶಿವಪ್ರಸಾದ್, ಅನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಚಿದಾನಂದ ಗೌಡ, ಮಾಜಿ ಶಾಸಕ ಸುಧಾಕರ್ ಲಾಲ್, ಪುರಸಭಾ ಸದಸ್ಯರಾದ ಎಂ.ಆರ್ ಜಗನ್ನಾಥ್, ಎಂ.ಎಲ್.ಗಂಗರಾಜು, ನಾರಾಯಣ್, ಚಂದ್ರಶೇಖರ್ ಬಾಬು, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಂದ್ರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!