ಪಾರ್ಥಿವ ಶರೀರ ರವಾನೆಗೆ ಪ್ರಭಾಕರ್ ನೆರವು

ತಿಪಟೂರಿನ ಯುವಕ ಥೈಲ್ಯಾಂಡ್ ನಲ್ಲಿ ಸಾವು

46

Get real time updates directly on you device, subscribe now.


ತುಮಕೂರು: ತಿಪಟೂರು ತಾಲ್ಲೂಕಿನ ಹೆಡಗರಹಳ್ಳಿ ಗ್ರಾಮದ ರಣಜೀತ್ (30) ಇವರು ಥೈಲ್ಯಾಂಡ್ ದೇಶದ ಪಟ್ಟಾಯ ಸಿಟಿಯಲ್ಲಿ ಎರಡು ವರ್ಷಗಳಿಂದಲೂ ಉದ್ಯೋಗಿಯಾಗಿದ್ದರು, ದಿನಾಂಕ 14.04.2024 ರಂದು ಇವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಇವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಿಸುವಲ್ಲಿ ಪ್ರಭಾಕರ ಜೀ ಅವರು ಮರೆಯಲಾಗದ ಸಹಾಯ ಮಾಡಿದ್ದಾರೆ ಎಂದು ಮೃತರ ತಂದೆ ಜ್ಞಾನಮೂರ್ತಿ ಅವರು ತಿಳಿಸಿದ್ದಾರೆ.
ಪಾರ್ಥಿವ ಶರೀರವನ್ನು ಭಾರತಕ್ಕೆ ನೀಡದೆ ಥೈಲ್ಯಾಂಡ್ ದೇಶದ ಪಟ್ಟಾಯ ಸಿಟಿಯಲ್ಲಿರುವ ವಿಷ್ಣು ಮಂದಿರದ ಬಳಿ ಶವಸಂಸ್ಕಾರ ಮಾಡಲು ಅಲ್ಲಿರುವ ಭಾರತದ ರಾಯಭಾರಿ ಕಚೇರಿ ಅವರು ವ್ಯವಸ್ಥೆ ಮಾಡಿಕೊಂಡಿದ್ದರು.
ಈ ಸಂದರ್ಭದಲ್ಲಿ ಭರತ್ ಎನ್ನುವವರು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ ಅವರನ್ನು ಒಮ್ಮೆ ಸಂಪರ್ಕಿಸಿ ಅವರು ಸಹಾಯ ಮಾಡಬಹುದು ಎಂದು ಹೇಳಿದರು, ಕೂಡಲೇ ಪ್ರಭಾಕರ್ ಅವರನ್ನು ಸಂಪರ್ಕಿಸಿದಾಗ ಮೃತ ವ್ಯಕ್ತಿ ಕುಟುಂಬದವರ ನೆರವಿಗೆ ಧಾವಿಸಿದರು.

ಅವರನ್ನು ಸಂರ್ಪಕಿಸಿ ಅರ್ಧ ತಾಸಿಗೆ ಭಾರತದ ರಾಯಭಾರಿ ಕಚೇರಿ ಇಂದ ವಿಜಯ್ ಚೌಟೆವಾಲ ಎನ್ನುವವರು ಮೃತ ವ್ಯಕ್ತಿಯ ವಿವರ ಪಡೆದರು, ಅಷ್ಟರಲ್ಲಿ ಇನ್ನೇನು ಮೃತ ದೇಹ ಭಾರತಕ್ಕೆ ಏರ್ ಲಿಫ್ಟ್ ಮಾಡುತ್ತೇವೆ ಎನ್ನುವ ಕರೆ ಥೈಲ್ಯಾಂಡ್ ದೇಶದಿಂದ ಬಂದಿತು, 90 ಸಾವಿರ ಥೈ ಬಾತ್ಸ್ ಹಣ ಅಂದರೆ ಭಾರತದ ರೂಪಾಯಿ ಮೌಲ್ಯ 2,04,322.50 ಎರಡು ಲಕ್ಷ ನಾಲ್ಕು ಸಾವಿರದ ಮೂರು ನೂರ ಇಪ್ಪತೆರಡು ರೂಪಾಯಿಗಳನ್ನು ತಾವು ತುಂಬಬೇಕು ಎಂದರು.
ಈ ಸಂದರ್ಭದಲ್ಲಿ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದು ಅಲ್ಲದೆ ಇಷ್ಟು ದೊಡ್ಡ ಮೊತ್ತ ತುಂಬುವುದು ಕುಟುಂಬಕ್ಕೆ ಹೊರೆಯಾಗಿತ್ತು, ಈ ಬಗ್ಗೆ ಪ್ರಭಾಕರ ಅವರನ್ನು ಮತ್ತೆ ಸಂಪರ್ಕಿಸಿದಾಗ ಹಣ ತುಂಬುವುದು ಬೇಡ ಭಾರತ ಸರ್ಕಾರದಿಂದ ಹಣ ಭರಿಸುವಂತೆ ಮನವಿ ಮಾಡೋಣ ಎಂದು ತಿಳಿಸಿ ಸರ್ಕಾರದಿಂದಲೇ ಹಣ ಭರಿಸುವಂತೆ ಮಾಡಿದರು. ಆರು ದಿನಗಳ ನಿರಂತರ ಪ್ರಯತ್ನದಿಂದಾಗಿ
ಮೃತ ದೇಹ ಭಾರತಕ್ಕೆ ಬರುತ್ತಿದೆ ಇದರಿಂದಾಗಿ ಕುಟುಂಬ ಸದಸ್ಯರಾದ ನಾವು ನಿರಾಳರಾಗುವುದರ ಜೊತೆಗೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಹಿಂದೂ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಪೂರೈಸಲು ನೆರವಾಗಿದ್ದಾರೆ ಎಂದು ಮೃತ ವ್ಯಕ್ತಿಯ ಕುಟುಂಬದ ಮೂಲಗಳು ತಿಳಿಸಿವೆ.

Get real time updates directly on you device, subscribe now.

Comments are closed.

error: Content is protected !!