ನೇಹಾ ಹತ್ಯೆ ಖಂಡಿಸಿ ಹಿಂದು ಸಂಘಟನೆ ಪ್ರತಿಭಟನೆ

56

Get real time updates directly on you device, subscribe now.


ಕುಣಿಗಲ್: ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಪಟ್ಟಣದ ವಿವಿಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಜಮಾವಣೆಗೊಂಡು ಶ್ರದ್ಧಾಂಜಲಿ ಅರ್ಪಿಸಿ, ಘಟನೆ ಖಂಡಿಸಿದರು.
ಶನಿವಾರ ಕುಣಿಗಲ್ ಬಜರಂಗದಳದ ಮುಖಂಡದ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಟೌನ್ ವೀರಶೈವ ಸಮಾಜದ ಪ್ರಮುಖರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡ ದೇವರಾಜ್, ಕಾಲೇಜು ಆವರಣದಲ್ಲೇ ಯುವತಿಯನ್ನು ಆಕೆಯ ತಾಯಿಯ ಮುಂದೆಯೇ ಭೀಕರವಾಗಿ ಹತ್ಯೆ ಮಾಡಿರುವುದು ಖಂಡನೀಯ, ಕ್ಷುಲ್ಲಕ ಕಾರಣಕ್ಕೆ ಇಂತಹ ಘಟನೆಗಳು ಸಮಾಜಕ್ಕೆ ಮಾರಕವಾಗಿವೆ, ಸರ್ಕಾರ ಇಂತಹ ಘಟನೆಗಳ ಕಾರಣ ಹುಡುಕಿ ಹತ್ಯೆಗೈದವರನ್ನು ಶೀಘ್ರವಾಗಿ ಶಿಕ್ಷಿಸುವ ಪರಿಣಾಮಕಾರಿ ಕಾನೂನು ಜಾರಿಬೇಕು, ರಾಜ್ಯದಲ್ಲಿ ಹಿಂದೆಂದೂ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ, ಸರ್ಕಾರ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು, ಕಾಲೇಜು ಸೇರಿದಂತೆ ಎಲ್ಲಾ ವರ್ಗದ ಹೆಣ್ಣು ಮಕ್ಕಳಿಗೆ ಅಗತ್ಯ ಸುರಕ್ಷತೆ ಒದಗಿಸಬೇಕೆಂದು ಆಗ್ರಹಿಸಿ ಒಂದು ವೇಳೆ ಸರ್ಕಾರದ ಕೈಯಲ್ಲಿ ಇಂತಹವರನ್ನು ಶಿಕ್ಷಿಸಲು ಆಗದೆ ಇದ್ದಲ್ಲಿ ನಾಗರಿಕರಿಗೆ ಕೊಟ್ಟಲ್ಲಿ ಅವರೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಬಜರಂಗದಳದ ಗಿರೀಶ್ ಮಾತನಾಡಿ, ಹಾಡು ಹಗಲೇ ಕಾಲೇಜು ಆವರಣದಲ್ಲಿ ಇಂತಹ ಘಟನೆ ನಿಜಕ್ಕೂ ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದೆ, ಕೇವಲ ಪ್ರೀತಿ ನಿರಾಕರಿಸಿದ ಮಾತ್ರಕ್ಕೆ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಹಿಂದೆ ಇರುವ ಷಡ್ಯಂತ್ರ ಹಾಗೂ ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಹತ್ಯೆಕೋರರಿಗೆ ಕಠಿಣ ಶಿಕ್ಷೆ ಆಗುವ ನಿಟ್ಟಿನಲ್ಲಿ ತುರ್ತಾಗಿ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. ಪ್ರಮುಖರಾದ ಕಿರಣ್ ಕುಮಾರ್, ಬಸವರಾಜು, ರಮೇಶ್, ನಿತ್ಯಾನಂದ,
ಆರಾಧ್ಯ, ಪುರುಷೊತ್ತಮ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!