ಅಮೂಲ್ಯ ಮತ ವ್ಯರ್ಥ ಮಾಡದಿರಿ: ಅಶ್ವಿಜಾ

30

Get real time updates directly on you device, subscribe now.


ತುಮಕೂರು: ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಡೆಯಲಿರುವ ಚುನಾವಣೆಯಲ್ಲಿ ಮತದಾರರು ತಮ್ಮ ಅಮೂಲ್ಯ ಮತವನ್ನು ವ್ಯರ್ಥ ಮಾಡದೆ ಕಡ್ಡಾಯವಾಗಿ ಮತದಾನ ಮಡಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜಾ ಕರೆ ನೀಡಿದರು.

ಮಹಾ ನಗರ ಪಾಲಿಕೆ ಸ್ವೀಪ್ ಸಮಿತಿಯಿಂದ ನಗರದ ಕೆಇಬಿ ಮುಂಭಾಗ ಕೋತಿ ತೋಪು ಫುಡ್ ಸ್ಟ್ರೀಟ್ನಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮಕ್ಕಳಿಗೆ ಬೇಸಿಗೆ ರಜೆ ಎಂದು ಪ್ರವಾಸ ಹೋಗದೆ ಏಪ್ರಿಲ್ 26 ರಂದು ನಡೆಯಲಿರುವ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಮತದಾನ ಮಾಡುವುದರೊಂದಿಗೆ ತಮ್ಮ ಬಂಧು ಬಳಗದವರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ಫುಡ್ ಸ್ಟ್ರೀಟ್ ನಲ್ಲಿರುವ ಎಲ್ಲಾ ಅಂಗಡಿಗಳನ್ನು ರಂಗೋಲಿ, ತಳಿರು- ತೋರಣಗಳಿಂದ ಅಲಂಕರಿಸಿದ್ದುದು ವಿಶೇಷ ಆಕರ್ಷಣೆಯಾಗಿತ್ತು, ನಂತರ ದವನ ಭೂಮಿಕ ಕಲಾ ತಂಡದವರಿಂದ ಮತದಾನ ಜಾಗೃತಿ ಕುರಿತು ಬೀದಿ ನಾಟಕ ಏರ್ಪಡಿಸಲಾಗಿತ್ತು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫುಡ್ ಸ್ಟ್ರೀಟ್ ನ ಎಲ್ಲಾ ಅಂಗಡಿಯವರಿಗೆ ಅಭಿನಂದನಾ ಪತ್ರ ನೀಡಲಾಯಿತು, ಕಾರ್ಯಕ್ರಮದಲ್ಲಿ ಮತದಾರರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.
ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ಮತದಾನದ ಪ್ರಾಮುಖ್ಯತೆ ಬಗ್ಗೆ ತಿಳಿಸಿ ತಪ್ಪದೇ ಮತದಾನದ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಾಲಿಕೆ ಉಪ ಆಯುಕ್ತ (ಆಡಳಿತ) ಗಿರೀಶ್, ಕೌನ್ಸಿಲ್ ಕಾರ್ಯದರ್ಶಿ ನಜ್ಮಾ.ಎ, ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!