ಕೆಎಸ್ಆರ್ಟಿಸಿ ಇಲ್ಲ- ಖಾಸಗಿಯೇ ಎಲ್ಲಾ..

476

Get real time updates directly on you device, subscribe now.

ಕುಣಿಗಲ್: ಸಾರಿಗೆ ಸಂಸ್ಥೆ ಮುಷ್ಕರ ಆರನೆ ದಿನಕ್ಕೆ ಕಾಲಿಟ್ಟಿದ್ದು, ಖಾಸಗಿ ವಾಹನಗಳು ಎಂದಿಗಿಂತ ಹೆಚ್ಚಿನದಾಗಿ ರಸ್ತೆಗೆ ಇಳಿದ ಪರಿಣಾಮ ಸಣ್ಣ ಪುಟ್ಟ ಮಾರ್ಗಗಳನ್ನು ಹೊರತು ಪಡಿಸಿ ಮುಖ್ಯರಸ್ತೆಯಲ್ಲಿ ಖಾಸಗಿ ವಾಹನಗಳು ಪ್ರಯಾಣಿಕರ ಸೇವೆಗೆ ಮುಂದಾದವು. ಸಾರಿಗೆ ಇಲಾಖೆಯ ಅಧಿಕಾರಿಗಳ ಹಲವು ತಂತ್ರಗಳ ಹೊರತಾಗಿ ಹಬ್ಬದ ಮುನ್ನದಿನ ಹೆಚ್ಚಿನ ನೌಕರರು ಕೆಲಸಕ್ಕೆ ಹಾಜರಾಗುವ ನಿರೀಕ್ಷೆ ಹುಸಿಯಾಗಿದೆ, ಆದರೂ ಅಧಿಕಾರಿಗಳ ಸತತ ಪ್ರಯತ್ನದ ಪರಿಣಾಮ ಏಳು ನೌಕರರು ಕೆಲಸಕ್ಕೆ ಹಾಜರಾಗಿ, ಖಾಸಗಿ ವಾಹನಗಳು ಸೇವೆ ನೀಡುತ್ತಿರುವ ಮಾರ್ಗದಲ್ಲೆ ಏಳು ವಾಹನಗಳು ನೆಪ ಮಾತ್ರಕ್ಕೆ ಕಾರ್ಯಾಚರಣೆ ಮಾಡಿದವು, ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್ಸುಗಳು, ವ್ಯಾನ್ಗಳು ಹಬ್ಬದ ಅಂಗವಾಗಿ ಊರಿಗೆ ತೆರಳುತ್ತಿರುವ ಪ್ರಯಾಣಿಕರ ಸೇವೆಗೆ ಮುಂದಾದವು, ಕೊರೊನ ಭೀತಿ ಸೇರಿದಂತೆ ಹೆಚ್ಚಿದ ಬಿಸಿಲಿನ ಬೇಗೆಯಿಂದ ನಿಲ್ದಾಣಕ್ಕೆ ಹೆಚ್ಚಾಗಿ ಪ್ರಯಾಣಿಕರು ಬರಲಿಲ್ಲ. ಹೆಚ್ಚುವರಿ ದರ ವಸೂಲಿಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದರಿಂದ ಖಾಸಗಿ ವಾಹನದವರೆ ಪ್ರಯಾಣದರ ನಿಗದಿಯಂತೆ ವಸೂಲು ಮಾಡಿದರೆ, ಕೆಲವರು ಸೀಟ್ ಹೆಚ್ಚಿಸಿಕೊಳ್ಳಲು ಹತ್ತು ರೂ. ಕಡಿಮೆ ದರ ವಸೂಲು ಮಾಡಿ ಸೇವೆ ನೀಡಿದರು. ಪಟ್ಟಣದಿಂದ ಗ್ರಾಮಾಂತರ ಪ್ರದೇಶ, ಪ್ರಮುಖ ಹೋಬಳಿ ಕೇಂದ್ರಗಳಿಗೆ ಯಾವುದೇ ಬಸ್ ಸಂಚಾರ ಇಲ್ಲದ ಕಾರಣ ಬೆಂಗಳೂರು, ಇತರೆಡೆಯಿಂದ ಹಬ್ಬಾಚರಣೆಗೆ ಊರಿಗೆ ಬಂದ ಪ್ರಯಾಣಿಕರು ಆಟೋಗಳನ್ನು ಅವಲಂಭಿಸಿದರು.

Get real time updates directly on you device, subscribe now.

Comments are closed.

error: Content is protected !!