ಕೊಲೆ ಯತ್ನ- ಏಳು ಮಂದಿ ಖಾಕಿ ವಶಕ್ಕೆ

34

Get real time updates directly on you device, subscribe now.


ಕುಣಿಗಲ್: ಹೆದ್ದಾರಿ ಬದಿಯ ಗ್ರಾಮಸ್ಥರ ಸಕಾಲಿಕ ಕ್ರಮದಿಂದಾಗಿ ಓರ್ವ ವ್ಯಕ್ತಿ ಪ್ರಾಣ ರಕ್ಷಣೆಯಾಗಿದ್ದಲ್ಲದೆ ವ್ಯಕ್ತಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಕುಣಿಗಲ್ ಪೊಲೀಸರು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ವಶಕ್ಕೆ ಪಡೆದಿದ್ದಾರೆ.
ಭಾನುವಾರ ಮಧ್ಯಾಹ್ನ ಮೂರುವರೆ ಗಂಟೆ ಸಮಯದಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ಸಶಸ್ತ್ರ ಮೀಸಲು ಪಡೆಯ ಪೇದೆ ಶ್ರೀಧರ ಎಂಬಾತ ತನ್ನ ಸ್ವಗ್ರಾಮವಾದ ಚನ್ನರಾಯಪಟ್ಟಣ ತಾಲೂಕಿನ ಎಂ.ಸಿದ್ದರಹಟ್ಟಿ ಗ್ರಾಮಕ್ಕೆ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ತೆರಳುವಾಗ ತಾಲೂಕಿನ ಉರ್ಕೆಹಳ್ಳಿ ಗ್ರಾಮದ ಬಳಿ ಬಿಳಿ ಟಾಟಾ ಸೊಮೋ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಬೈಕ್ನಿಂದ ಪೇದೆ ಬಿದ್ದು ಸುಧಾರಿಸಿಕೊಳ್ಳುವ ಹಂತದಲ್ಲೆ ಹಿಂದಿನಿಂದ ಇಂಡಿಕಾ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಪುನಹ ಡಿಕ್ಕಿ ಹೊಡೆದು, ಇನ್ನೊಬ್ಬ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾದಾಗ ಪೇದೆ ಸಹಾಯಕ್ಕಾಗಿ ಕೂಗಿಕೊಂಡು ಗ್ರಾಮದ ಕಡೆ ತೆರಳಿದ್ದು, ಪೇದೆಯ ಕೂಗಾಟ ಕೇಳಿದ ಗ್ರಾಮಸ್ಥರು ಹೊರಬಂದು ಮಚ್ಚಿನಿಂದ ಹಲ್ಲೆ ಮಾಡಲು ಬರುತ್ತಿದ್ದವನ ಹಿಡಿಯಲು ಮುಂದಾದರು, ಈವೇಳೆ ಆತ ಕಾರನ್ನು ಹತ್ತಿ ಪರಾರಿಯಾಗಿದ್ದು, ಗ್ರಾಮಸ್ಥರು ವಾಹನ ನಂಬರ್ ಬರೆದುಕೊಂಡು, ಗಾಯಾಳು ಪೇದೆಯನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಪೊಲೀಸರಿಗೆ ಮಾಹಿತಿ ನೀಡಿದರು, ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಗಾಯಾಳು ಪೇದೆಯಿಂದ ದೂರು ಪಡೆದು, ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಕಾರ್ಯ ಪ್ರವೃತ್ತರಾಗಿ ಹೆದ್ದಾರಿಯಲ್ಲಿ ಇಂಡಿಕಾ ಕಾರಿನ ನಂಬರ್ ಹಿಡಿದು ಪರಿಶೀಲನೆಗೆ ಮುಂದಾದಾಗ ಇಂಡಿಕಾ ಕಾರು ಹಾಗೂ ಸುಮೋ ವಾಹನಗಳು ಹಾಗೂ ಕೃತ್ಯದಲ್ಲಿ ಪಾಲ್ಗೊಂಡ ಆಸಾಮಿಗಳನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಿದಾಗ ಪೇದೆಯ ಸೋದರ ಸಂಬಂಧಿ ವೆಂಕಟೇಶ್ ಎಂಬಾತನು ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ಮಾಡಿಸಿದ್ದು ತಿಳಿದು ಬಂದ ಮೇರೆಗೆ ಕೃತ್ಯದಲ್ಲಿ ಭಾಗಿಯಾದ ವೆಂಕಟೇಶ, ರಾಜ, ಮಹೇಂದ್ರ, ಉದಯ ಸೇರಿದಂತೆ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!